‘ಬಂಧನ 2’ ಸಿನಿಮಾ ನಿಲ್ಲೋಕೆ ನಾನೇ ಕಾರಣ ಎಂದ ನಟ ಆದಿತ್ಯ

Public TV
1 Min Read
adithya

ದಿ, ಅಂಬಿ, ಸ್ನೇಹಾನಾ ಪ್ರೀತಿನಾ ಚಿತ್ರಗಳ ಮೂಲಕ ಗಮನ ಸೆಳೆದಿರುವ ನಟ ಆದಿತ್ಯ ಇತ್ತೀಚಿನ ಸಂದರ್ಶನವೊಂದರಲ್ಲಿ ಬಂಧನ 2 ಚಿತ್ರವನ್ನು ಕೈಬಿಟ್ಟಿದ್ದೇಕೆ ಎಂದು ಮುಕ್ತವಾಗಿ ಮಾತನಾಡಿದ್ದಾರೆ. ‘ಬಂಧನ ಪಾರ್ಟ್ 2’ (Bandhana 2) ನಿಲ್ಲೋಕೆ ನಾನೇ ಕಾರಣ ಎಂದು ಆದಿತ್ಯ (Actor Adithya) ಮಾತನಾಡಿದ್ದಾರೆ. ಇದನ್ನೂ ಓದಿ:ಬದುಕೇ ಬೇಡ ಎಂದು ಕುಗ್ಗಿದ ದಿನಗಳ ಬಗ್ಗೆ ‘ಕೆಜಿಎಫ್’ ನಟಿ ಓಪನ್ ಟಾಕ್

adithya

ನನ್ನ ತಂದೆ ನಿರ್ದೇಶನ ಮಾಡಿದ್ದ ಹಲವು ಚಿತ್ರಗಳು ಅಂದಿನ ಕಾಲದಲ್ಲಿ ಅಪಾರ ಜನರ ಮೆಚ್ಚುಗೆ ಗಳಿಸಿದ್ದವು. ಅವುಗಳನ್ನು ಈಗ ರಿಮೇಕ್ ಮಾಡುವುದಾಗಲಿ ಅಥವಾ ಅದರ ಸೀಕ್ವೆಲ್ ಮಾಡುವುದಾಗಲಿ ತುಂಬಾ ಕಷ್ಟ. ಅಂಥವುಗಳನ್ನು ಮೂಲ ಚಿತ್ರದ ನಿರ್ದೇಶಕರೇ ಮಾಡಿದರೆ ಸರಿ, ಮಿಕ್ಕವರು ಅವುಗಳನ್ನು ಟಚ್ ಮಾಡುವುದು ಅಷ್ಟು ಸೂಕ್ತವಲ್ಲ ಎನ್ನುವುದು ನನ್ನ ಭಾವನೆ ಎಂದಿದ್ದಾರೆ.

bandhana film

ಆದರೆ, ನನ್ನ ತಂದೆಯವರೇ ‘ಬಂಧನ 2’ ಮಾಡಬಹುದು. ಮಾಡೋಣ ಅಂತ ಶುರು ಮಾಡಿದ್ವಿ. ಆದರೆ, ಎರಡು ದಿನಗಳಷ್ಟೇ ಶೂಟ್ ಮಾಡಿದ್ದು. ಬಳಿಕ ನಾನೇ ನನ್ನ ತಂದೆಯವರಿಗೆ ಬೇಡ ಎಂದು ಹೇಳಿಬಿಟ್ಟೆ. ಯಾಕೋ ನನಗೆ ಈ ಸಿನಿಮಾ ಮುಂದುವರೆಸುವುದು ಬೇಡ ಅನ್ನಿಸಿಬಿಟ್ಟಿತು. ‘ಬಂಧನ 2’ ಸಿನಿಮಾ ಮಾಡುವ ಮೂಲಕ ನಾವು ಈ ಮೊದಲು ಮಾಡಿದ್ದ ‘ಬಂಧನ’ ಸಿನಿಮಾಗೆ ಕೆಟ್ಟ ಹೆಸರು ತರಬಹುದು ಎಂದು ಅನಿಸಿತು. ಅದಕ್ಕೆ ಬೇಡವೇ ಬೇಡ ಅಂದು ಬಿಟ್ಟೆ ಎಂದು ಆದಿತ್ಯ ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

‘ಬಂಧನ’ (Bandhana Film) ಸಿನಿಮಾದಲ್ಲಿ ನಟ ವಿಷ್ಣುವರ್ಧನ್, ಸುಹಾಸಿನಿ, ಜೈಜಗದೀಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 1984ರಲ್ಲಿ ತೆರೆಕಂಡ ಈ ಚಿತ್ರವು ಸೂಪರ ಡೂಪರ್ ಹಿಟ್ ಆಗಿತ್ತು. ವಿಷ್ಣುವರ್ಧನ್ ಮತ್ತು ಸುಹಾಸಿನಿ ಜೋಡಿಗೆ ಅಭಿಮಾನಿಗಳು ಫಿದಾ ಆಗಿದ್ದರು.

Share This Article