ಬಾಲಿವುಡ್ ಬೆಡಗಿ ಮೌನಿ ರಾಯ್ (Mouni Roy) ವೈವಾಹಿಕ ಜೀವನ ಮತ್ತು ಸಿನಿಮಾ ಚಿತ್ರೀಕರಣ ಎಂದು ಎರಡನ್ನು ನಿಭಾಯಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಅನಾರೋಗ್ಯ ಸಮಸ್ಯೆಯಿಂದ ಬಳಲಿದ್ದರ ಬಗ್ಗೆ ನಟಿ ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದಾರೆ.
‘ನಾಗಿನ್’ (Naagin) ಸೀರಿಯಲ್‌ಗೆ ಮಾಡುವ ಮುನ್ನ ‘ಝಲಕ್ ದಿಖ್ಲಾ ಜಾ’ ಡ್ಯಾನ್ಸ್ ಶೋನಲ್ಲಿ ಮೌನಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಬೆನ್ನು ಮೂಳೆಯ ಮೇಲೆ ಸಂಪೂರ್ಣ ಎಲ್4-ಎಲ್5 ಸ್ಲಿಪ್ ಡಿಜೆನರೇಶನ್ ಮತ್ತು ಸ್ಕೋಲಿಯೋಸಿಸ್ ಉಂಟಾಗಿತ್ತು. ಇದರ ಪರಿಣಾಮ, ನೇರವಾಗಿ ನಿಲ್ಲಲು ಮೌನಿಗೆ ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ದಿನವೊಂದಕ್ಕೆ 30 ಮಾತ್ರೆ ತೆಗೆದುಕೊಳ್ಳಬೇಕಾದ ಸಂದರ್ಭ ಎದುರಾಗಿತ್ತು ಎಂದು ಮೌನಿ ಮಾತನಾಡಿದ್ದಾರೆ.
ಚುಚ್ಚು ಮದ್ದು ಬುದಕಿನ ಪ್ರಮುಖ ಭಾಗವೂ ಆಯಿತು. ಇದೆಲ್ಲದರಿಂದ ನೊಂದು-ಬೆಂದು ಹೋಗಿದ್ದ ಮೌನಿ ರಾಯ್ ಅವರ ತೂಕ ಹೆಚ್ಚಾಗಿ ಬಿಟ್ಟಿತ್ತು. ಈ ದೈಹಿಕ ಸಮಸ್ಯೆ ಮೌನಿ ಅವರನ್ನ ಮಾನಸಿಕವಾಗಿ ಸಂಪೂರ್ಣ ಕುಗ್ಗಿಸಿತ್ತು. ಇದರಿಂದ 3 ತಿಂಗಳು ಹಾಸಿಗೆ ಹಿಡಿದಿದ್ದರು ಎಂದು ಮೌನಿ ಹೇಳಿದ್ದಾರೆ. ಇದನ್ನೂ ಓದಿ:ಕಂಗನಾ ಮನಸ್ಥಿತಿ ಬಿಚ್ಚಿಟ್ಟ ನಟಿ ಸ್ವರಾ ಭಾಸ್ಕರ್
ಕೊಂಚ ಗುಣಮುಖರಾದ ಮೇಲೆ ‘ನಾಗಿನ್’ ಸೀರಿಯಲ್ ಒಪ್ಪಿ ಮೌನಿ ನಟಿಸಿದ್ದರು. ಈ ಸೀರಿಯಲ್ ಭಾರೀ ಜನಪ್ರಿಯತೆ ಪಡೆಯಿತು. ‘ಗೋಲ್ಡ್’ (Gold) ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಮೌನಿ ರಾಯ್ (Mouni Roy) ನಟಿಸಿದ್ದರು. ‘ಕೆಜಿಎಫ್’ (KGF) ಸಿನಿಮಾದಲ್ಲಿ ಸ್ಪೆಷಲ್ ಸಾಂಗ್‌ಗೆ ಯಶ್ ಜೊತೆ ಹೆಜ್ಜೆ ಹಾಕಿದ್ದರು.