ತಿಂಗಳಿನಿಂದಲೇ ತಿಳಿದಿದ್ದರೂ ತನಿಖೆಗೆ ಆದೇಶಿಸದೇ ಚುನಾವಣೆವರೆಗೆ ಕಾದಿದ್ದು ಯಾಕೆ – ಡಿಕೆಶಿಗೆ ವಿಜಯೇಂದ್ರ ಪ್ರಶ್ನೆ

Public TV
1 Min Read
bjp jds 3 by vijayendra

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna) ವೀಡಿಯೋಗಳ ಮೇಲೆ ನನಗೆ ಪತ್ರ ಕಳುಹಿಸಲಾಗಿದೆ ಎಂಬ ವಕೀಲ ದೇವರಾಜೇಗೌಡ (G Devarajegowda) ಅವರ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಅಂತಹ ಯಾವುದೇ ಪತ್ರ ನನಗೆ ತಲುಪಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಅವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ತಿಂಗಳಿನಿಂದ ವೀಡಿಯೊಗಳ ಬಗ್ಗೆ ತಿಳಿದಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅವುಗಳನ್ನು ಸಾರ್ವಜನಿಕಗೊಳಿಸಲು ಚುನಾವಣೆ ಬರುವವರೆಗೂ ಕಾಯುತ್ತಿದ್ದರು. ಅವರಿಗೆ ವಿಡಿಯೋಗಳ ಬಗ್ಗೆ ತಿಳಿದಿದ್ದರೆ ಕಾಂಗ್ರೆಸ್ ಸರ್ಕಾರ ತಕ್ಷಣ ತನಿಖೆಗೆ ಯಾಕೆ ಆದೇಶಿಸಲಿಲ್ಲ? ಚುನಾವಣೆವರೆಗೂ ಯಾಕೆಕಾಯಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿದೇಶದ ಮತದಾರರಿಗೆ ಭಟ್ಕಳ ಜಮಾತ್‍ಗಳಿಂದ ಗಾಳ- ವಿಮಾನ ಟಿಕೆಟ್ ಆಫರ್

ರಾಜ್ಯದಲ್ಲಿ ನಿಮ್ಮ ಸರಕಾರ ಇದೆ. ತನಿಖೆಗೆ ಆದೇಶಿಸುವ ಮತ್ತು ಕ್ರಮ ತೆಗೆದುಕೊಳ್ಳುವ ಅಧಿಕಾರ ನಿಮಗಿರುವಾಗ ಈಗ ಏಕೆ ಬೀದಿಗಿಳಿಯಬೇಕು? ಯಾಕೆ ಈ ನಾಟಕ? ಕಾಂಗ್ರೆಸ್ ಸರ್ಕಾರ ಜನತೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮಹಿಳೆಯರು ಯಾರಾದ್ರು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ರಾಜ್ಯ ಸರ್ಕಾರವೇ ಕಾರಣ: ಹೆಚ್‌ಡಿಕೆ

 

Share This Article