ಅವಕಾಶವಿಲ್ಲದ ದಿನಗಳನ್ನು ಸ್ಮರಿಸಿದ ಸನ್ನಿ- ಕಣ್ಣೀರಿಟ್ಟ ಬಾಬಿ ಡಿಯೋಲ್

Public TV
1 Min Read
sunny deol

ಬಾಲಿವುಡ್ ನಟರಾದ ಸನ್ನಿ ಡಿಯೋಲ್ (Sunny Deol) ಮತ್ತು ಬಾಬಿ ಡಿಯೋಲ್ (Bobby deol) ಇತ್ತೀಚೆಗೆ ಕಪಿಲ್ ಶರ್ಮಾ (Kapil Sharma Show) ನಿರೂಪಣೆಯ ಶೋಗೆ ಅತಿಥಿಗಳಾಗಿ ಬಂದಿದ್ದಾರೆ. ಈ ವೇಳೆ, ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ರೂ ಅವಕಾಶ ಇಲ್ಲದೇ ಎದುರಿಸಿದ ಸಂಕಷ್ಟಗಳ ಬಗ್ಗೆ ‘ಗದರ್ 2’ ನಟ ಸನ್ನಿ ವಿವರಿಸಿದ್ದಾರೆ. ಸಹೋದರನ ಮಾತಿಗೆ ಬಾಬಿ ಡಿಯೋಲ್ ಕಣ್ಣೀರಿಟ್ಟಿದ್ದಾರೆ.

bobby deol 1

ನಾವು 1960ರ ದಶಕದಿಂದ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಎಷ್ಟೇ ಪ್ರಯತ್ನಪಟ್ಟರೂ ಕೂಡ ನಮಗೆ ಗೆಲುವು ಸಿಗುತ್ತಿರಲಿಲ್ಲ. ಇತ್ತೀಚೆಗೆ ನನ್ನ ಮಗನ ಮದುವೆ ನಡೆಯಿತು. ಗದರ್ 2 ಚಿತ್ರದ ಸಕ್ಸಸ್ ಕಂಡಿತ್ತು. ಅಪ್ಪನ ಸಿನಿಮಾ ಕೂಡ ಹಿಟ್ ಆಯ್ತು. ಅನಿಮಲ್ ಚಿತ್ರಕ್ಕೆ ಉತ್ತಮ ಪ್ರಶಂಸೆ ಸಿಕ್ಕಿತ್ತು. ಇಷ್ಟೆಲ್ಲಾ ಹಾರೈಕೆ ಹೇಗೆ ಬಂತೋ ಗೊತ್ತಿಲ್ಲ ಎಂದು ಸನ್ನಿ ಡಿಯೋಲ್ ಮಾತನಾಡುವಾಗ ಬಾಬಿ ಡಿಯೋಲ್ ಕಣ್ಣೀರು ಸುರಿಸಿದ್ದಾರೆ. ಸಹೋದರನ ಮಾತಿಗೆ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಭಾವುಕರಾಗಿದ್ದಾರೆ. ಇದನ್ನೂ ಓದಿ:ಆಯೋಜಕರ ಯಡವಟ್ಟು- ‘ಗಜ’ ಚಿತ್ರದ ನಟಿ ಬೇಸರ

‘ಗದರ್ 2’ (Gadar 2) ಚಿತ್ರದ ನಂತರ ಸನ್ನಿಗೆ ಬಾಲಿವುಡ್‌ನಲ್ಲಿ ಉತ್ತಮ ಅವಕಾಶ ಅರಸಿ ಬರುತ್ತಿದೆ. ‘ಅನಿಮಲ್’ (Animal) ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್ ಮಿಂಚಿದ ಮೇಲೆ ಅದೃಷ್ಟದ ಬಾಗಿಲು ತೆರೆದಿದೆ. 8ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಅದರಲ್ಲೂ ದಕ್ಷಿಣ ಭಾರತ ಸಿನಿಮಾಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.

Share This Article