ಲಿಂಗಸುಗೂರಿನಲ್ಲಿ ನಕಲಿ ನೋಟು ಜಾಲ ಪತ್ತೆ – 500 ರೂ. ಮುಖಬೆಲೆಯ 62 ಬಂಡಲ್ ಜಪ್ತಿ

Public TV
1 Min Read
Raichur Fake Note

ರಾಯಚೂರು: ಜಿಲ್ಲೆಯ ಲಿಂಗಸುಗೂರಿನಲ್ಲಿ (Lingasuguru) ನಕಲಿ ನೋಟಿನ (Fake Note) ಜಾಲ ಪತ್ತೆಯಾಗಿದೆ. ಮನೆಯೊಂದರಲ್ಲಿ ಅಕ್ರಮ ಮದ್ಯ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೇರೆಗೆ ಜಪ್ತಿ ಮಾಡಲು ಹೋದ ಅಧಿಕಾರಿಗಳು ನಕಲಿ ನೋಟ್ ಕಂಡು ಶಾಕ್ ಆಗಿದ್ದಾರೆ. ದಾಳಿ ವೇಳೆ ಮದ್ಯ ಸಿಗದಿದ್ದರೂ ಕಂತೆ ಕಂತೆ ನಕಲಿ ನೋಟು ಪತ್ತೆಯಾಗಿವೆ.

ಒಂದು ಕಡೆ 500 ರೂ. ಮುಖಬೆಲೆಯ ನೋಟುಗಳು, ಮತ್ತೊಂದು ಕಡೆ ಬಿಳಿ ಪೇಪರ್ ಇರುವ ನೋಟುಗಳು ಪತ್ತೆಯಾಗಿವೆ. ದಾಳಿ ವೇಳೆ 500 ರೂ. ಮುಖಬೆಲೆಯ 62 ಬಂಡಲ್ ಮುದ್ರಿತ ನೋಟು ಸಿಕ್ಕಿವೆ. ಲಿಂಗಸುಗೂರಿನ ಗೌಳೀಪುರ ಓಣಿಯಲ್ಲಿ ನಕಲಿ ನೋಟು ತಯಾರಿಕೆ ಜಾಲ ಪತ್ತೆಯಾಗಿದ್ದು, ನಕಲಿ ನೋಟು ತಯಾರಿಸುತ್ತಿದ್ದ ಚೋಟಾಸಾಬ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಚುನಾವಣೆಯ ಹಬ್ಬವನ್ನ ನಾವು ಪ್ರೀತಿಯಿಂದ ಆಚರಿಸೋಣ: ‘ಕೈ’ ಅಭ್ಯರ್ಥಿ ಮನವಿ

ಜನರಿಗೆ ವಂಚಿಸುವ ದೃಷ್ಟಿಯಿಂದ ನಕಲಿ ನೋಟು ತಯಾರಿಸುತ್ತಿದ್ದ ಎನ್ನಲಾಗಿದೆ. ಲಿಂಗಸುಗೂರು ಸಹಾಯಕ ಆಯುಕ್ತರು ಹಾಗೂ ಪಿಐ ಪುಂಡಲೀಕ ನೇತೃತ್ವದಲ್ಲಿ ದಾಳಿ ನಡೆದಿದೆ. ಯಾಕಾಗಿ ನಕಲಿ ನೋಟು ಶೇಖರಿಸಿದ್ದ? ಜಾಲ ಎಲ್ಲಿವರೆಗೆ ಹರಡಿದೆ ಅನ್ನೋ ಬಗ್ಗೆ ತನಿಖೆ ಮುಂದುವರೆದಿದೆ. ಇದನ್ನೂ ಓದಿ: ಮಹಾರಾಜರ ಗೆಟಪ್‌ನಲ್ಲಿ ಬಂದು ಮತದಾನ ಮಾಡಿದ ವ್ಯಕ್ತಿ

ಈ ಕುರಿತು ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ನಿಖಿಲ್ ಬಿ ಹಾಗೂ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಂಡಿದೆ. ಇದನ್ನೂ ಓದಿ: ಮತ ಚಲಾಯಿಸಿ ರಾಮದೇವರ ಪ್ರಾಣ ಪ್ರತಿಷ್ಠೆ ಮಾಡಿದಷ್ಟೇ ಧನ್ಯತೆ: ಪೇಜಾವರ ಶ್ರೀ

Share This Article