ತಾಯಿಯ ಆತ್ಮಹತ್ಯೆಗೆ ಕಾರಣನಾದ ತಂದೆಯ ಹತ್ಯೆಗೈದ ಮಗ

Public TV
1 Min Read
POLICE JEEP 1

ದಾವಣಗೆರೆ: ತಾಯಿಯ ಆತ್ಮಹತ್ಯೆಗೆ ಕಾರಣನಾದ ತಂದೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದ ಘಟನೆ ಜಗಳೂರಿನ (Jagalur) ಲಕ್ಕಿಂಪುರದಲ್ಲಿ ನಡೆದಿದೆ.

ಗ್ರಾಮದ ತಪ್ಪಮ್ಮ (52) ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದು, ಅಂಜನಪ್ಪ (60) ಮಗನಿಂದ ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿದೆ. ಕೊಲೆಗೈದ ಆರೋಪಿಯನ್ನು ರಮೇಶ್ (30) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ರೈಲಿಗೆ ಸಿಲುಕಿ ಮೂವರು ಯುವಕರ ದಾರುಣ ಸಾವು

ಕೊಲೆಯಾದ ಅಂಜನಪ್ಪ ನಿತ್ಯ ಕುಡಿದು ಬಂದು ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇದರಿಂದ ಬೇಸತ್ತು ತಪ್ಪಮ್ಮ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಚಾರ ತಿಳಿದ ರಮೇಶ್ ನೇರವಾಗಿ ಮನೆಗೆ ಬಂದು ತಂದೆ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಆತನನ್ನು ಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಜಗಳೂರು ಠಾಣೆ ಪೊಲೀಸರು (Jagalur Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹಾಲಿವುಡ್ #MeToo ಅಭಿಯಾನಕ್ಕೆ ಹಿನ್ನಡೆ: ಹಾರ್ವಿಗೆ ವಿಧಿಸಿದ್ದ ಶಿಕ್ಷೆ ರದ್ದು

Share This Article