ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ ಮೇಲೆ ದಾಳಿ ಕೇಸ್‌ – ಖಲಿಸ್ತಾನಿ ಪರ ಆರೋಪಿ ಬಂಧನ

Public TV
1 Min Read
Indian High Commission in London

ಲಂಡನ್‌: ಕಳೆದ ವರ್ಷ ಲಂಡನ್‌ನಲ್ಲಿರುವ (London) ಭಾರತದ ಹೈಕಮಿಷನ್‌ ಕಚೇರಿ (Indian High Commission) ಮೇಲೆ ನಡೆದಿದ್ದ ದಾಳಿ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಎನ್‌ಐಎ ಬಂಧಿಸಿದೆ.

ಯುನೈಟೆಡ್ ಕಿಂಗ್‌ಡಮ್‌ನ ಹೌನ್ಸ್ಲೋ ನಿವಾಸಿ, ಖಲಿಸ್ತಾನಿ ಪ್ರತ್ಯೇಕತಾವಾದಿ(Pro-Khalistani) ಇಂದರ್‌ಪಾಲ್ ಸಿಂಗ್ ಗಾಬಾ ಎಂಬಾತನನ್ನು 2023ರ ಪ್ರತಿಭಟನೆಯ ಸಮಯದಲ್ಲಿ ಕಾನೂನುಬಾಹಿರ ಚಟುವಟಿಕೆ ಆರೋಪದಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: IPL 2024: ತವರಿನಲ್ಲೇ ಸನ್‌ ರೈಸರ್ಸ್‌ಗೆ ಚೊಂಬು – ಅಬ್ಬರಿಸಿ ಬೊಬ್ಬರಿದ ಆರ್‌ಸಿಬಿಗೆ 35 ರನ್‌ಗಳ ಭರ್ಜರಿ ಜಯ

Indian High Commission in London 1

ಕಳೆದ ವರ್ಷದ ಮಾ.18 ರಂದು ಖಲಿಸ್ತಾನಿ ಪರ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ತೆಗೆದುಕೊಂಡ ಕ್ರಮಕ್ಕೆ ಪ್ರತೀಕಾರವಾಗಿ ಹೈಕಮಿಷನ್ ಮೇಲಿನ ದಾಳಿ ನಡೆದಿತ್ತು.

ಅಮೃತಪಾಲ್ ಸಿಂಗ್ ಮೇಲಿನ ದೌರ್ಜನ್ಯದ ವಿರುದ್ಧ ಖಲಿಸ್ತಾನ್ ಸಹಾನುಭೂತಿಗಳು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರು ಕಟ್ಟಡದ ಮೊದಲ ಮಹಡಿಯ ಬಾಲ್ಕನಿಯಿಂದ ಭಾರತೀಯ ಧ್ವಜವನ್ನು ಕೆಳಗಿಳಿಸಿ, ಖಲಿಸ್ತಾನಿ ಧ್ವಜ ಹಾರಿಸಿದ್ದರು. ಇದನ್ನೂ ಓದಿ: ಹೆಲ್ತ್ ಬದಲು ನ್ಯೂಟ್ರಿಷನಲ್ ಡ್ರಿಂಕ್ ಆಗಿ ಬದಲಾದ ಹಾರ್ಲಿಕ್ಸ್

ಯುಕೆಯಲ್ಲಿರುವ ಭಾರತೀಯರು ತ್ರಿವರ್ಣ ಧ್ವಜವನ್ನು ಅಪವಿತ್ರಗೊಳಿಸಿದ್ದನ್ನು ಖಂಡಿಸಿ ಹೈಕಮಿಷನ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಘಟನೆಗೆ ಕಾರಣರಾದವರ ವಿರುದ್ಧ ಲಂಡನ್ ಮೇಯರ್ ಮತ್ತು ಬ್ರಿಟಿಷ್ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

Share This Article