ಬಿಜೆಪಿ ಹಿರಿಯ ಮುಖಂಡನ ಮನೆ ಮೇಲೆ ಐಟಿ ದಾಳಿ – 5 ಕೋಟಿ ನಗದು, 7 ಕೆಜಿ ಚಿನ್ನಾಭರಣ ಜಪ್ತಿ!

Public TV
1 Min Read
IT Raid 2

ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ಕ್ಷಣಗಣನೆ ಬಾಕಿಯಿರುವ ಹೊತ್ತಿನಲ್ಲಿ ಐಟಿ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಇಲ್ಲಿನ ನೆಲಮಂಗಲದಲ್ಲಿರುವ ಬಿಜೆಪಿ ಹಿರಿಯ ಮುಖಂಡ (BJP Leader) ಗೋವಿಂದಪ್ಪ ಅವರ ಮನೆ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು ಹಣ ಹಾಗೂ ಚಿನ್ನಾಭರಣಗಳನ್ನು ಜಪ್ತಿ ಮಾಡಿದೆ.

ಮಾದಾವಾರದ ಗೋವಿಂದಪ್ಪ (Govindappa) ಅವರ ಮನೆ ಮೇಲೆ 15ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ ನಡೆದಿದ್ದು, 5 ಕೋಟಿ ನಗದು ಹಣ, 7 ಕೆಜಿ ಚಿನ್ನಾಭರಣವನ್ನು (Gold Seized) ವಶಕ್ಕೆ ಪಡೆದುಕೊಂಡಿದೆ. ಇದನ್ನೂ ಓದಿ: ಉದ್ಯಮಿ ಮನೆ ಮೇಲೆ ಐಟಿ ದಾಳಿ; ಸೀಕ್ರೆಟ್‌ ರೂಮಿನಲ್ಲಿದ್ದ 22 ಕೆಜಿ ಚಿನ್ನ, 6.50 ಕೋಟಿ ಹಣ ಜಪ್ತಿ!

IT Raid

ಖಚಿತ ಮಾಹಿತಿ ಮೇರೆಗೆ ಗುರುವಾರ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಸತತ 6 ಗಂಟೆಗಳ ಕಾಲ ತೀವ್ರ ಶೋಧ ನಡೆಸಿದ್ದರು, ವಿವಿಧ ದಾಖಲೆಗಳನ್ನೂ ಪರಿಶೀಲಿಸಿದ್ದರು. ಸದ್ಯ ಗೋವಿಂದಪ್ಪ ಅವರಿಂದ ಜಪ್ತಿ ಮಾಡಲಾದ 4 ಬ್ಯಾಗ್‌ನಷ್ಟು ನಗದು ಹಣ ಹಾಗೂ ಚಿನ್ನಾಭರಣಗಳನ್ನು ಐಟಿ ಕಚೇರಿಗೆ ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಪಾಳಯದಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡಿರುವ ಗೋವಿಂದಪ್ಪ ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಹಾಗೂ ಯಲಹಂಕ ಶಾಸಕ ವಿಶ್ವನಾಥ್ ನಡುವೆ ಸಂಧಾನ ಮಾಡಿಸಿದ್ದರು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: Lok Sabha Election 2024: 14 ಕ್ಷೇತ್ರದಲ್ಲಿ 3 ದಿನ ಮದ್ಯ ಮಾರಾಟ ಬಂದ್

Share This Article