ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ನಟ ದರ್ಶನ್ (Darshan). ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಅವರ ಮತಯಾಚನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಕೈಗೆ ಕಟ್ಟಲಾದ ಬೆಲ್ಟ್ ಗಮನ ಸೆಳೆಯುತ್ತಿದೆ.
ಡೆವಿಲ್ ಸಿನಿಮಾದ ಚಿತ್ರೀಕರಣ ವೇಳೆ ದರ್ಶನ್, ಕೈಗೆ ಏಟು ಮಾಡಿಕೊಂಡಿದ್ದರು. ಬಲವಾಗಿಯೇ ಅವರ ಕೈಗೆ ಏಟು ಬಿದ್ದಿತ್ತು. ಹಾಗಾಗಿ ಶಸ್ತ್ರ ಚಿಕಿತ್ಸೆಗೂ (Surgery) ಒಳಗಾಗಿದ್ದರು. ಕೈ ಎಲುಬು ಎಷ್ಟರ ಮಟ್ಟಿಗೆ ಏಟಾಗಿದೆ ಎನ್ನುವುದಕ್ಕೆ ಅವರು ಕೈಗೆ ಆಗಿರುವ ಬೆಲ್ಟ್ (Belt) ಸಾಕ್ಷಿಯಾಗಿದೆ.
120 ಡಿಗ್ರಿ ಕೋನದಲ್ಲಿ ಕಟ್ಟಲಾದ ಕೈ ಕಟ್ಟು ಅದಾಗಿದ್ದು, ಬರೋಬ್ಬರಿ ಎರಡ್ಮೂರು ವಾರಗಳ ಕಾಲ ಅದನ್ನು ಹಾಗೆಯೇ ಕಟ್ಟಬೇಕು. ಯಾವ ಕೋನದಲ್ಲಿ ಕೈಕಟ್ಟು ಇದೆ ಎನ್ನುವುದನ್ನು ಬೆಲ್ಟ್ ಗೆ ಅಳವಡಿಸಿರುವ ಕ್ಲಾಕ್ ತೋರಿಸುತ್ತದೆ. ಅಂತಹ ಕೈಕಟ್ಟು ಈಗ ಗಮನ ಸೆಳೆದಿದೆ. ಅದೇನು ಎನ್ನುವುದರ ಕುರಿತು ಅನೇಕರು ಇಂಟರ್ ನೆಟ್ ನಲ್ಲಿ ಸರ್ಚ್ ಮಾಡಿದ್ದಾರೆ.