Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲೋಕಸಭೆ 2024; ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಇರುವ ಸವಾಲುಗಳೇನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Election News | ಲೋಕಸಭೆ 2024; ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಇರುವ ಸವಾಲುಗಳೇನು?

Election News

ಲೋಕಸಭೆ 2024; ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಇರುವ ಸವಾಲುಗಳೇನು?

Public TV
Last updated: April 24, 2024 3:48 pm
Public TV
Share
4 Min Read
NARENDRA MODI 1
SHARE

2024 ರ ಲೋಕಸಭಾ ಚುನಾವಣೆಗೆ (Lok Sabha Elections 2024) ಈಗಾಗಲೇ ಮೊದಲ ಹಂತದ ಮತದಾನ ನಡೆದಿದೆ. ಚುನಾವಣೆಯಲ್ಲಿ ಬಹುಮತಕ್ಕಾಗಿ ರಾಷ್ಟ್ರೀಯ ಪಕ್ಷಗಳ ನಾಯಕರು ದೇಶಾದ್ಯಂತ ಸುತ್ತಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಪ್ರಾಬಲ್ಯ ಸ್ಥಾಪಿಸಲು ಕಸರತ್ತು ನಡೆಸುತ್ತಿವೆ. ಕಳೆದ 10 ವರ್ಷಗಳಿಂದ ಉತ್ತರದಲ್ಲಿ ಪ್ರಬಲವಾಗಿರುವ ಬಿಜೆಪಿಗೆ ದಕ್ಷಿಣ ಭಾಗ ಕಬ್ಬಿಣದ ಕಡಲೆಯಂತಾಗಿದೆ. ಕರ್ನಾಟಕ ಹೊರತುಪಡಿಸಿ ದಕ್ಷಿಣ ರಾಜ್ಯಗಳಲ್ಲಿ ಅಸ್ತಿತ್ವ ಕಂಡುಕೊಳ್ಳಲು ಕಸರತ್ತು ನಡೆಸುತ್ತಿದೆ.

ಈ ಭಾಗದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸ್ಥಾನಮಾನ ಹೇಗಿದೆ? ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಯಾವ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿತ್ತು? ಈಗಿನ ಚುನಾವಣಾ ರಾಜಕೀಯ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ‘ಪಬ್ಲಿಕ್ ಟಿವಿ’ಯ ಒಂದು ಅವಲೋಕನ. ಇದನ್ನೂ ಓದಿ: 10 ವರ್ಷಗಳ ಸಾಧನೆ ಬಿಜೆಪಿಗೆ ಬೂಸ್ಟರ್‌ ಡೋಸ್‌ ಕೊಡುತ್ತಾ? 

Modi Stalin China Flag ISRO DMK

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ ತಿಂಗಳಲ್ಲಿ ಮೂರು ಬಾರಿ ದಕ್ಷಿಣ ಭಾರತಕ್ಕೆ ಭೇಟಿ ನೀಡಿದ್ದರು. ಈ ಭೇಟಿಯು ಎಲ್ಲಾ ಐದು ದಕ್ಷಿಣ ರಾಜ್ಯಗಳನ್ನು ಒಳಗೊಂಡಿತ್ತು (ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ, ತಮಿಳುನಾಡು). ಒಂದೇ ತಿಂಗಳಲ್ಲಿ ಎರಡು ಬಾರಿ ಕೇರಳ ಮತ್ತು ತಮಿಳುನಾಡಿಗೆ ಭೇಟಿ ನೀಡಿದ್ದರು. ಫೆಬ್ರವರಿ 27 ಮತ್ತು 28 ರಂದು ಕೇರಳ ಮತ್ತು ತಮಿಳುನಾಡಿಗೆ ಮತ್ತೆ ಭೇಟಿ ಕೊಟ್ಟಿದ್ದರು. ಏಪ್ರಿಲ್ ತಿಂಗಳಲ್ಲಿ ಕರ್ನಾಟಕಕ್ಕೆ ಎರಡು ಬಾರಿ ಬಂದು ಪ್ರಚಾರ ನಡೆಸಿದ್ದಾರೆ.

ಈ ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಚಾರದ ಪ್ರಮುಖ ಭಾಗವಾಗಿ ದಕ್ಷಿಣ ಭಾರತ ತೋರುತ್ತಿದೆ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಪಕ್ಷವು ಪ್ರಚಂಡ ಯಶಸ್ಸನ್ನು ಕಂಡಿದ್ದರೂ, ದಕ್ಷಿಣ ಭಾಗದಲ್ಲಿ ಕರ್ನಾಟಕ ಬಿಟ್ಟರೆ ಉಳಿದ ರಾಜ್ಯಗಳಲ್ಲಿ ಅಷ್ಟೇನು ಬೆಂಬಲ ಸಿಗಲಿಲ್ಲ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ಬಾರಿ ಬಿಜೆಪಿ ಹಲವು ತಂತ್ರಗಾರಿಕೆ ರೂಪಿಸಿದೆ. ಇದನ್ನೂ ಓದಿ: ಬಿಜೆಪಿ ನೀಡಿದ ಭರವಸೆಗಳಲ್ಲಿ ಎಷ್ಟು ಪೂರ್ಣಗೊಂಡಿದೆ? ಎಷ್ಟು ಪೂರ್ಣಗೊಂಡಿಲ್ಲ?

siddu dks 1

ದಕ್ಷಿಣ ಭಾರತದಲ್ಲಿ ಬಿಜೆಪಿ ಸ್ಥಾನಮಾನ ಏನು?
2019 ರಲ್ಲಿ ಐತಿಹಾಸಿಕ ವಿಜಯದ ಹೊರತಾಗಿಯೂ, ದಕ್ಷಿಣದ ಐದು ರಾಜ್ಯಗಳಲ್ಲಿನ 129 ಸ್ಥಾನಗಳಲ್ಲಿ ಬಿಜೆಪಿ ಕೇವಲ 29 ಸ್ಥಾನಗಳನ್ನು ಜಯಿಸಿತ್ತು. ಈ 29 ರಲ್ಲಿ ಕರ್ನಾಟಕದ್ದೇ 25 ಸ್ಥಾನಗಳಿದ್ದವು. ಉಳಿದ ನಾಲ್ಕು ಸ್ಥಾನ ತೆಲಂಗಾಣ ರಾಜ್ಯದ್ದು. ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಕೂಡ ಗೆದ್ದಿಲ್ಲ.

2014 ರ ಚುನಾವಣೆಯಲ್ಲಿ ದಕ್ಷಿಣದಲ್ಲಿ ಬಿಜೆಪಿ 21 ಸ್ಥಾನಗಳನ್ನಷ್ಟೇ ಗೆದ್ದಿತ್ತು. 2009 ರಲ್ಲಿ 19 ಸ್ಥಾನ, 2004 ಮತ್ತು 1999 ರಲ್ಲಿ 18 ಸ್ಥಾನ, 1998 ರಲ್ಲಿ 20 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಈ ರಾಜ್ಯಗಳಲ್ಲಿ ಇದಕ್ಕೂ ಮೊದಲು ನಡೆದ ಚುನಾವಣೆಗಳಲ್ಲಿ ಬಿಜೆಪಿ ಸಂಖ್ಯೆಯು 7 ಕ್ಕಿಂತ ಕಡಿಮೆ ಇತ್ತು.

narendra modi bs yediyurappa

ಬಿಜೆಪಿ ಹಿನ್ನಡೆಗೆ ಕಾರಣವೇನು?
ದಕ್ಷಿಣ ಭಾರತದಲ್ಲಿ ಜನರು ಬಿಜೆಪಿಯನ್ನು ಹಿಂದಿ, ಹಿಂದೂ ಮತ್ತು ಹಿಂದುತ್ವದ ಪಕ್ಷವೆಂದು ನೋಡುತ್ತಾರೆ. ಈ ಗ್ರಹಿಕೆಯು ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವಂತೆ ಮಾಡಿದೆ. ಅಷ್ಟೇ ಅಲ್ಲ, ದಕ್ಷಿಣದ ರಾಜಕೀಯ ಭೂದೃಶ್ಯವು ಪ್ರತಿ ರಾಜ್ಯದಲ್ಲಿ ಒಂದು ಅಥವಾ ಎರಡು ಪ್ರಬಲ ಪ್ರಾದೇಶಿಕ ಪಕ್ಷಗಳನ್ನು ಹೊಂದಿದೆ. ಡಿಎಂಕೆ, ಎಐಎಡಿಎಂಕೆ, ಟಿಡಿಪಿ, ಐಎಸ್‌ಆರ್‌ಸಿಪಿ, ಬಿಆರ್‌ಎಸ್‌ನಂತಹ ಪಕ್ಷಗಳು ಪ್ರಾದೇಶಿಕವಾಗಿ ಪ್ರಬಲವಾಗಿವೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿಯುತ್ತಾ ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆ?

ಈ ಪಕ್ಷಗಳು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ರಾಷ್ಟ್ರೀಯ ವಿಷಯಗಳಿಗಿಂತ ಪ್ರಾದೇಶಿಕ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತವೆ. ಇದು ಬಿಜೆಪಿಗೆ ತನ್ನದೇ ಆದ ಗಮನಾರ್ಹ ಅಸ್ತಿತ್ವ ಸ್ಥಾಪಿಸಲು ಸವಾಲಾಗಿದೆ.

ಬಿಜೆಪಿಗೆ ಕರ್ನಾಟಕವೇ ಗಟ್ಟಿ
ಕರ್ನಾಟಕದಲ್ಲಿ ‘ಲೋಕ’ ರಾಜಕೀಯ ಚಿತ್ರಣವೇ ಬೇರೆ ಇದೆ. ಈ ರಾಜ್ಯದಲ್ಲಿ ಬಿಜೆಪಿ ಪ್ರಬಲವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತ ಮತಗಳನ್ನು ಕ್ರೋಢೀಕರಿಸಿದ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ನರೇಂದ್ರ ಮೋದಿ ಅವರು ಕರ್ನಾಟಕ ಮತ್ತು ತೆಲಂಗಾಣದ ಕೆಲವು ನಗರ ಪ್ರದೇಶಗಳಲ್ಲಿ ಗೆಲುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಆದರೆ ಪ್ರಬಲ ರಾಜ್ಯ ಘಟಕಗಳು ಮತ್ತು ಕಾರ್ಯಕರ್ತರ ಕೊರತೆ ಬಿಜೆಪಿಗೆ ಹಿನ್ನಡೆಗೆ ಕಾರಣವಾಗಿದೆ.

pawan kalyan with chandrababu naidu 1

ದಕ್ಷಿಣ ಭಾರತ ರಾಜ್ಯಗಳಲ್ಲಿ ಯಾವ ಚುನಾವಣೆಯಲ್ಲಿ ಎಷ್ಟು ಸ್ಥಾನ?
2019 ರ ಚುನಾವಣೆ
ಬಿಜೆಪಿ – 29

2014 ರ ಚುನಾವಣೆ
ಬಿಜೆಪಿ – 21

2009 ರ ಚುನಾವಣೆ
ಬಿಜೆಪಿ – 19

ಡಿಎಂಕೆ ಪ್ರಾಬಲ್ಯ
ಬಿಜೆಪಿ ಈ ಬಾರಿ ತಮಿಳುನಾಡಿನಲ್ಲಿ ತನ್ನ ನೆಲೆ ಪರೀಕ್ಷೆಗೆ ಮುಂದಾಗಿದೆ. ಎಐಎಡಿಎಂಕೆ ದೂರವಿಟ್ಟ ನಂತರ ಬಿಜೆಪಿಯು ಪಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ಜೊತೆಗೆ ಎಐಎಡಿಎಂಕೆ ಹೊರಹಾಕಿದ ಒ.ಪನ್ನೀರಸೆಲ್ವಂ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಡಿಎಂಡಿಕೆ, ಎಐಡಿಎಂಎಂಕೆ ಜೊತೆಗೂ ಬಿಜೆಪಿ ಮೈತ್ರಿ ಮಾತುಕತೆ ನಡೆಸುತ್ತಿದೆ. ಇಷ್ಟೆಲ್ಲಾ ಸಿದ್ಧತೆ ಇದ್ದರೂ ಬಿಜೆಪಿಯು ತಮಿಳರ ವಿರೋಧಿ ಎಂಬ ಮತದಾರರ ಅಭಿಪ್ರಾಯ ತೊಡೆದು ಹಾಕುವ ಕೆಲಸ ಮಾಡುತ್ತಿಲ್ಲ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಇತ್ತ ಕಾಂಗ್ರೆಸ್ ಪಕ್ಷ ತಮಿಳುನಾಡಿನಲ್ಲಿ ಪ್ರಬಲವಾಗಿರುವ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ಆಡಳಿತಾರೂಢ ಡಿಎಂಕೆಗೆ ಈ ಚುನಾವಣೆಯಲ್ಲಿ ತಮಿಳುನಾಡಿನ ಜನರಿಂದ ಉತ್ತಮ ಬೆಂಬಲ ಸಿಗುವ ಸಾಧ್ಯತೆ ಇದೆ.

Panneerselvam

ಆಂಧ್ರದ ಮಾಜಿ ಸಿಎಂ, ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಹಾಗೂ ಜನಸೇನಾ ಪಕ್ಷದ ಪವನ್ ಕಲ್ಯಾಣ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ರಾಜ್ಯದಿಂದ ಬಿಜೆಪಿ 6 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೇರಳದಲ್ಲಿ ಬಿಜೆಪಿ ಅಸ್ತಿತ್ವ ಇಲ್ಲ. ಈ ಬಾರಿ ರಾಜ್ಯದಲ್ಲಿ 16 ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ.

ಕಾಂಗ್ರೆಸ್‌ ಆಡಳಿತ
ಕರ್ನಾಟಕದಲ್ಲಿ ಕಾಂಗ್ರೆಸ್‌ ಆಡಳಿತವಿದೆ. ಐದು ಗ್ಯಾರಂಟಿಗಳ ಕಾರಣ ಜನರು ಕಾಂಗ್ರೆಸ್‌ಗೆ 135 ಸ್ಥಾನ ನೀಡಿದ್ದಾರೆ. ಇದೇ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಲೋಕಸಭಾ ಚುನಾವಣೆಗೂ ಪ್ರಚಾರ ನಡೆಸುತ್ತಿದೆ. ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮಣಿಸಲು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ರಾಜ್ಯದಲ್ಲಿ ಜೆಡಿಎಸ್‌ಗೆ ಮೂರು ಸ್ಥಾನಗಳನ್ನು ಬಿಟ್ಟುಕೊಟ್ಟಿರುವ ಬಿಜೆಪಿ 25 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿಗೆ ರಾಜ್ಯದಲ್ಲಿ ಮೈತ್ರಿ ತಂತ್ರಗಾರಿಕೆ ಕೈ ಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಯಾವ ರಾಜ್ಯದಲ್ಲಿ ಎಷ್ಟು ಅಭ್ಯರ್ಥಿಗಳು ಕಣಕ್ಕೆ
ಕರ್ನಾಟಕ – 25
ಕೇರಳ – 16
ತಮಿಳುನಾಡು – 23
ತೆಲಂಗಾಣ – 17
ಆಂಧ್ರ ಪ್ರದೇಶ – 6

TAGGED:bjpcongressLok Sabha elections 2024South Indiaಕಾಂಗ್ರೆಸ್ದಕ್ಷಿಣ ಭಾರತಬಿಜೆಪಿಲೋಕಸಭಾ ಚುನಾವಣೆ 2024
Share This Article
Facebook Whatsapp Whatsapp Telegram

Cinema news

Varanasi movie
ರಾಜಮೌಳಿ ನಿರ್ದೇಶನದ ‘ವಾರಣಾಸಿ’ ರಿಲೀಸ್‌ ಡೇಟ್‌ ಔಟ್‌
Cinema Latest South cinema Top Stories
Bengaluru 17th Film Festival
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಚಾಲನೆ
Bengaluru City Cinema Districts Karnataka Latest Sandalwood Top Stories
PRAJWAL DEVARAJ 2
ಸಹೋದರನ ಚಿತ್ರಕ್ಕೆ ನಿರ್ಮಾಪಕನಾದ ಪ್ರಜ್ವಲ್ ದೇವರಾಜ್ – ಚಿತ್ರದ ಫಸ್ಟ್ ಲುಕ್ ಲಾಂಚ್
Cinema Latest Sandalwood Top Stories
actor mayur patel car accident
ಕುಡಿದು ವಾಹನ ಚಲಾಯಿಸಿ ಕಾರುಗಳಿಗೆ ಸರಣಿ ಅಪಘಾತ; ನಟ ಮಯೂರ್ ಪಟೇಲ್ ವಿರುದ್ಧ FIR
Cinema Crime Latest Main Post Sandalwood

You Might Also Like

Rajeev Gowda 1
Chikkaballapur

ಶಿಡ್ಲಘಟ್ಟ ಕೇಸ್‌ – ಆರೋಪಿ ರಾಜೀವ್‌ ಗೌಡಗೆ ಜಾಮೀನು

Public TV
By Public TV
1 minute ago
Plane Crash
Latest

ಇತಿಹಾಸ ಕಂಡ ಘೋರ ವಿಮಾನ ದುರಂತಗಳು – ಎಂದೂ ಮಾಸದ ಗಾಯ!

Public TV
By Public TV
42 minutes ago
Hotel
Bengaluru City

ಹರಿಯಾಣ | ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಬೆಂಗಳೂರಿನ ಟೆಕ್ಕಿ ಶವವಾಗಿ ಪತ್ತೆ

Public TV
By Public TV
48 minutes ago
MLA Vishwanath
Bengaluru City

ಬೆಂಗಳೂರಲ್ಲಿ ಭೂಕಬಳಿಕೆ; ಬಿಜೆಪಿ ಮಾಜಿ ಎಂಎಲ್‌ಸಿಗೆ 1 ವರ್ಷ ಜೈಲು ಶಿಕ್ಷೆ

Public TV
By Public TV
59 minutes ago
gold silver 1
Latest

ಚಿನ್ನ – ಬೆಳ್ಳಿ ಬೆಲೆ ದಿಢೀರ್‌ ಕುಸಿತ; ಒಂದೇ ದಿನದಲ್ಲಿ ಬೆಳ್ಳಿ 15%, ಚಿನ್ನ 10% ಬೆಲೆ ಕುಸಿತ

Public TV
By Public TV
1 hour ago
ivan dsouza
Bengaluru City

ವಿಬಿಜಿ ರಾಮ್ ಜಿ ಕಾಯ್ದೆ ಬಡವರ ಪಾಲಿಗೆ ಮರಣ ಶಾಸನ – ಐವಾನ್ ಡಿಸೋಜ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?