ನಟಿ ರಮ್ಯಾ ‘ಜಪಾನ್’ ಅಂತ ಕರೆಯೋದು ಯಾರನ್ನ?

Public TV
1 Min Read
Ramya 2

ನ್ನಡದ ಹೆಸರಾಂತ ನಿರ್ದೇಶಕ, ನಟರೊಬ್ಬರನ್ನು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ಜಪಾನ್ (Japan) ಎಂದು ಕರೆಯುತ್ತಾರಂತೆ. ಈ ವಿಷಯವನ್ನು ಸ್ವತಃ ನಿರ್ದೇಶಕರೇ ಹೇಳಿಕೊಂಡಿದ್ದು, ರಮ್ಯಾ ಅವರು ಹಾಗೆ ಕರೆದಾಗ ಬಲು ಸಂತೋಷವಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

Sanju Weds Geetha 2

ಅಷ್ಟಕ್ಕೂ ರಮ್ಯಾ ಅವರು ಜಪಾನ್ ಎಂದು ಕರೆಯುವ ವ್ಯಕ್ತಿ ಬೇರೆ ಯಾರೂ ಇಲ್ಲ, ಸಂಜು ವೆಡ್ಸ್ ಗೀತಾ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿರುವ, ಸಾಕಷ್ಟು ಚಿತ್ರಗಳಲ್ಲಿ ನಟರಾಗಿ ಕಾಣಿಸಿಕೊಂಡಿರುವ ನಾಗಶೇಖರ್ (Nagashekhar) ಅವರನ್ನು ರಮ್ಯಾ ಜಪಾನ್ ಎಂದು ಈಗಲೂ ಕರೆಯುತ್ತಾರಂತೆ.

Sanju Weds Geetha 1

ನಾಗಶೇಖರ್ ಅವರಿಗೆ ಜಪಾನ್ ಎಂದು ಹೆಸರು ಬರಲು ಕಾರಣ, ಸುದೀಪ್ ನಟನೆಯ ರಂಗ ಎಸ್.ಎಸ್.ಎಲ್.ಸಿ ಚಿತ್ರ. ಈ ಸಿನಿಮಾದಲ್ಲಿ ನಾಗಶೇಖರ್ ಪಾತ್ರದ ಹೆಸರು ಜಪಾನ್. ಸದಾ ಹೀರೋ ಜೊತೆ ಇರುವಂತಹ ಪಾತ್ರ ಅದಾಗಿತ್ತು. ಅಂದಿನಿಂದ ಅನೇಕರು ನಾಗಶೇಖರ್ ಅವರನ್ನು ಜಪಾನ್ ಅಂತಾನೇ ಕರೆಯುತ್ತಾರಂತೆ.

 

ನಾಗಶೇಖರ್ ಅವರಿಗೆ ನಟರಾಗಿ ದೊಡ್ಡ ಹೆಸರು ತಂದು ಕೊಟ್ಟ ಚಿತ್ರ ರಂಗ ಎಸ್.ಎಸ್.ಎಲ್.ಸಿ. ನಟಿಸುತ್ತಲೇ ಅನೇಕ ಚಿತ್ರಗಳ ನಿರ್ದೇಶನವನ್ನೂ ಅವರು ಮಾಡಿದ್ದಾರೆ. ಸದ್ಯ ಸಂಜು ವೆಡ್ಸ್ ಗೀತಾ 2 ಸಿನಿಮಾದ ಶೂಟಿಂಗ್ ನಲ್ಲಿ ಅವರು ಬ್ಯುಸಿಯಾಗಿದ್ದಾರೆ.

Share This Article