ತೆಲುಗು ಚಿತ್ರಗಳಿಂದ ಶ್ರೀಲೀಲಾ ಔಟ್- ಕಾಲಿವುಡ್‌ನತ್ತ ‘ಕಿಸ್’ ನಟಿ

Public TV
1 Min Read
sreeleela 3

ನ್ನಡದ ನಟಿ ಶ್ರೀಲೀಲಾ (Sreeleela) ಟಾಲಿವುಡ್‌ನಲ್ಲಿ (Tollywood) ಮೋಡಿ ಮಾಡ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗಿ ಗಮನ ಸೆಳೆದಿದ್ದ ಶ್ರೀಲೀಲಾಗೆ ಇದೀಗ ಲಕ್ ಕೈ ಕೊಟ್ಟಂತಿದೆ. ವಿಜಯ್ ದೇವರಕೊಂಡ, ನಿತಿನ್ ಸಿನಿಮಾಗಳು ‘ಕಿಸ್’ ನಟಿಯ ಕೈ ತಪ್ಪಿ ಹೋದ್ಮೇಲೆ ತಮಿಳಿನತ್ತ ನಟಿ ಮುಖ ಮಾಡಿದ್ದಾರೆ.

sreeleela 2

ತೆಲುಗಿನಲ್ಲಿ ರಶ್ಮಿಕಾ ಮಂದಣ್ಣಗೆ (Rashmika Mandanna) ಠಕ್ಕರ್ ಕೊಟ್ಟು ಶ್ರೀಲೀಲಾ ಮಿಂಚುತ್ತಿದ್ದರು. ಈಗ ಅದೃಷ್ಟ ಕೂಡ ಶ್ರೀಲೀಲಾ ಕಡೆ ತಿರುಗಿ ನೋಡ್ತಿಲ್ಲ. ಈ ಬೆನ್ನಲ್ಲೇ ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್‌ಗೆ (Ajith Kumar) ನಾಯಕಿಯಾಗಿ ನಟಿಸುವ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ:‘ಉತ್ತರಕಾಂಡ’ ಚಿತ್ರದ ವಿಶೇಷ ಪಾತ್ರದಲ್ಲಿ ಉಮಾಶ್ರೀ

sreeleela

ಅಜಿತ್ ಕುಮಾರ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಶ್ರೀಲೀಲಾರನ್ನು ಸಂಪರ್ಕಿಸಿದೆ ಚಿತ್ರತಂಡ. ನಟಿ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ. ಮೇ 1ರಂದು ಅಜಿತ್ ಹುಟ್ಟುಹಬ್ಬದಂದು ಅಧಿಕೃತ ಮಾಹಿತಿ ಹೊರಬೀಳಲಿದೆ. ಅಜಿತ್ ಕುಮಾರ್ ‘ವಿದಾ ಮುಯಾರ್ಚಿ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಕೆಲದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ತಮಿಳು ಸಿನಿಮಾದಲ್ಲಿ ನಟಿಸುವ ಇಂಗಿತವನ್ನು ಶ್ರೀಲೀಲಾ ವ್ಯಕ್ತಪಡಿಸಿದ್ದರು. ಇದೀಗ ಅಜಿತ್ ಜೊತೆಗಿನ ಸಿನಿಮಾ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Share This Article