ಹಟ್ಟಿಗೆ ನುಗ್ಗಿ ಕುರಿಗಳನ್ನು ತಿಂದು ತೇಗಿ ನಿದ್ದೆಗೆ ಜಾರಿದ ಚಿರತೆ!

Public TV
1 Min Read
KOPPALA CHEETAH

ಕೊಪ್ಪಳ: ಹಟ್ಟಿಗೆ ನುಗ್ಗಿ ಕುರಿಗಳನ್ನು ತಿಂದು ಬಳಿಕ ಚಿರತೆ ಅಲ್ಲಿಯೇ ನಿದ್ದೆಗೆ ಜಾರಿದ ಪ್ರಸಂಗವೊಂದು ಕೊಪ್ಪಳ (Koppala) ಜಿಲ್ಲೆಯಲ್ಲಿ ನಡೆದಿದೆ.

ಗಂಗಾವತಿ ತಾಲೂಕಿನ ಬಸವನ ದುರ್ಗ ಕ್ಯಾಂಪ್‍ನ ಗುಡ್ಡದ ಮೇಲೆ ಕುರಿಗಾಯಿಗಳು ಹಟ್ಟಿಯಲ್ಲಿ ಕುರಿಗಳನ್ನು ಹಾಕಿದ್ದರು. ರಾತ್ರಿ ವೇಳೆ ಚಿರತೆ ಹಟ್ಟಿಗೆ ಬಂದಿದೆ. ಅಲ್ಲದೇ ಎರಡು ಕುರಿಗಳನ್ನ (Sheep) ತಿಂದು ಹಟ್ಟಿಯಲ್ಲಿಯೇ ಮಲಗಿದೆ. ಇದರ ವೀಡಿಯೋವನ್ನು ಕುರಿಗಾಹಿ ಸೆರೆಹಿಡಿದಿದ್ದಾರೆ.

ರಮೇಶ ಕುರುಬರ ಎಂಬವರಿಗೆ ಈ ಕುರಿಗಳು ಸೇರಿವೆ. ಅರಣ್ಯ ಇಲಾಖೆ ಸಿಬ್ಬಂದಿ ಹಟ್ಟಿಗೆ ಆಗಮಿಸುತ್ತಿದ್ದಂತೆಯೇ ಚಿರತೆ ತಪ್ಪಿಸಿಕೊಂಡು ಗುಡ್ಡದ ಕಡೆ ಓಡಿದೆ. ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಒಂದೇ ಕುಟುಂಬದ 8 ಜನರಿದ್ದ ಕಾರಿಗೆ ಬೆಂಕಿ – ಹುಡುಗಿ ಸಜೀವ ದಹನ

Share This Article