Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

PublicTV Explainer: ಬೆಂಗಳೂರಿನ ಕುದುರೆಗಳಲ್ಲಿ ಗ್ಲ್ಯಾಂಡರ್ಸ್‌ ರೋಗ; ಏನಿದು ಮಾರಕ ಕಾಯಿಲೆ – ಮನುಷ್ಯರಿಗೂ ಹರಡುತ್ತಾ?

Public TV
Last updated: April 18, 2024 7:12 pm
Public TV
Share
3 Min Read
Glanders disease horse public tv
SHARE

– ಗ್ಲ್ಯಾಂಡರ್ಸ್‌ಗೆ ಚಿಕಿತ್ಸೆಯೂ ಇಲ್ಲ, ಲಸಿಕೆಯೂ ಇಲ್ಲ

ಬೆಂಗಳೂರಿನಲ್ಲಿ ಕುದುರೆಗಳಿಗೆ (Bengaluru Horses) ಕಂಟಕ ಎದುರಾಗಿದೆ. ಮಾರಕ ಗ್ಲ್ಯಾಂಡರ್ಸ್‌ ರೋಗಕ್ಕೆ ಒಂದಲ್ಲ.. ಎರಡಲ್ಲ.. ಮೂರು ಕುದುರೆಗಳು ಬಲಿಯಾಗಿವೆ. ಅಷ್ಟೇ ಅಲ್ಲ, ಗುರುವಾರ ಕೂಡ ಗ್ಲ್ಯಾಂಡರ್ಸ್‌ ರೋಗ (Glanders Disease) ಪೀಡಿತ ಕುದುರೆಯೊಂದನ್ನು ಚಿತಾಗಾರದಲ್ಲಿ ಬರ್ನಿಂಗ್‌ ಮಾಡಲಾಗಿದೆ. ಈ ಮಾರಕ ಕಾಯಿಲೆ ಕೇವಲ ಕುದುರೆಗಳಷ್ಟೇ ಅಲ್ಲ ಮನುಷ್ಯರಲ್ಲೂ ಆತಂಕ ಮೂಡಿಸಿದೆ.

ಏನಿದು ಮಾರಕ ರೋಗ? ಅದರ ಗುಣಲಕ್ಷಣಗಳೇನು? ಕಾಯಿಲೆಗೆ ಔಷಧಿ ಇಲ್ಲವೇ? ಡೇಂಜರಸ್‌ ಕಾಯಿಲೆಯಿಂದ ಮನುಷ್ಯರಿಗೂ ಅಪಾಯವಿದೆಯೇ? ನಿಯಂತ್ರಣಕ್ಕೆ ಆಡಳಿತ ವ್ಯವಸ್ಥೆ ಕೈಗೊಂಡಿರುವ ಕ್ರಮಗಳೇನು ಇತ್ಯಾದಿ ಪ್ರಶ್ನೆಗಳಿಗೆ ವಿವರ ಇಲ್ಲಿದೆ.‌ ಇದನ್ನೂ ಓದಿ: PublicTV Explainer: ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್; ‘ಕಲರ್’ ಗೋಬಿ, ಪಾನಿಪುರಿ, ಕಬಾಬ್ ಖಾದ್ಯಗಳಿಗೂ ಬ್ರೇಕ್ – ಯಾಕೆ ಗೊತ್ತಾ?

Horse Glanders disease

ಗ್ಲ್ಯಾಂಡರ್ಸ್‌ ಎಂದರೇನು?
ಇದೊಂದು ಸಾಂಕ್ರಾಮಿಕ ರೋಗವಾಗಿದೆ. ಇದು ಕುದುರೆಗಳು ಮತ್ತು ಅದೇ ಜಾತಿಯ ಹೇಸರಗತ್ತೆಗಳು, ಕತ್ತೆಗಳಲ್ಲೂ ಕಾಣಿಸಿಕೊಳ್ಳುತ್ತದೆ.

ಮೊದಲ ಪತ್ತೆಹಚ್ಚಿದ್ದು ಯಾವಾಗ?
ಗ್ಲ್ಯಾಂಡರ್ಸ್‌ ರೋಗವನ್ನು ಮೊದಲು ಗ್ರೀಕರು ಕ್ರಿಸ್ತಪೂರ್ವ 450-425 ರಲ್ಲಿ ಪತ್ತೆಹಚ್ಚಿದರು. ಇದನ್ನೂ ಓದಿ: PublicTV Explainer: ಬೆಂಗಳೂರಿಗೆ ಬಂತು ಮೊದಲ ಚಾಲಕ ರಹಿತ ಮೆಟ್ರೋ ರೈಲು – ವಿಶೇಷತೆಗಳು ನಿಮಗೆಷ್ಟು ಗೊತ್ತು?

ಭಾರತದಲ್ಲಿ ಪತ್ತೆ ಮಾಡಿದ್ದು ಯಾವಾಗ?
1950-1986 ರ ಅವಧಿಯಲ್ಲಿ ಭಾರತದಲ್ಲಿ ಈ ರೋಗ ಹೆಚ್ಚು ಕಾಣಿಸಿಕೊಂಡಿತ್ತು. 1950 ರಲ್ಲಿ ಮುಂಬೈನಲ್ಲಿ ಹಾಗೂ 1986 ರಲ್ಲಿ ಹರಿಯಾಣದಲ್ಲಿ ಗ್ಲ್ಯಾಂಡರ್ಸ್‌ ರೋಗದಿಂದ ಅತಿ ಹೆಚ್ಚು ಕುದುರೆಗಳು ಮೃತಪಟ್ಟಿದ್ದವು.

ಗ್ಲ್ಯಾಂಡರ್ಸ್‌ ಯಾವುದರಿಂದ ಉಂಟಾಗುತ್ತಾ?
ಗ್ಲ್ಯಾಂಡರ್ಸ್‌ ರೋಗವು ಬರ್ಕೊಲ್ಡಿಯಾ ಮ್ಯಾಲಿ ಗ್ರಾಂ ನೆಗೆಟಿವ್‌ (Bacterium Burkholderia Mallei) ಎನ್ನುವ ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತದೆ.

Glanders disease horse

ರೋಗ ಹರಡುವುದು ಹೇಗೆ?
ಕಲುಷಿತ ಆಹಾರ ಅಥವಾ ನೀರನ್ನು ಸೇವಿಸುವುದರಿಂದ ರೋಗ ಹರಡುತ್ತದೆ. ರೋಗ ಪೀಡಿತ ಪ್ರಾಣಿಗಳ ಮೂಗಿನಿಂದ ಬೀಳುವ ದ್ರವ್ಯದಿಂದಲೂ ಹರಡುತ್ತೆ. ಜೊತೆಗೆ ಕುದುರೆಗಳು ಒಂದೇ ಬುಟ್ಟಿಯಲ್ಲಿ ಕಾಳು ಅಥವಾ ಹೊಟ್ಟು ತಿನ್ನುವುದರಿಂದಲೂ ಇದು ಹರಡುತ್ತದೆ.

ಮನುಷ್ಯರಿಗೂ ಕಾಯಿಲೆ ಹರಡುತ್ತಾ?
ಹೌದು, ರೋಗಪೀಡಿತ ಕುದುರೆಗಳ ಸಂಪರ್ಕಕ್ಕೆ ಬಂದರೆ ಮನುಷ್ಯರಿಗೂ ಹರುಡುವ ಸಾಧ್ಯತೆ ಇದೆ. ಕುದುರೆಗಳ ಮೈಕೈ ಸವರುವುದರಿಂದಲೂ ಮನುಷ್ಯರಿಗೆ ಹರಡಬಹುದು. ಇದನ್ನೂ ಓದಿ: PublicTV Explainer: ಬಿಸಿಸಿಐ ಕೇಂದ್ರ ಗುತ್ತಿಗೆ ಬಗ್ಗೆ ನಿಮಗೆಷ್ಟು ಗೊತ್ತು?

ರೋಗ ಲಕ್ಷಣಗಳೇನು?
3 ದಿನಗಳಿಂದ 2 ವಾರಗಳ ಕಾವು ಅವಧಿಯ ನಂತರ ಹಲವು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೆಪ್ಟಿಸಿಮಿಯಾ, ಅಧಿಕ ಜ್ವರ, ತೂಕ ಇಳಿಕೆ, ದಪ್ಪ, ಮ್ಯೂಕೋಫೈರಂಟ್‌, ಹಳದಿ ಮಿಶ್ರಿತ ಮೂಗಿನ ದ್ರವ, ಉಸಿರಾಟದ ಚಿಹ್ನೆಗಳು, ಕೆಲವೇ ದಿನಗಳಲ್ಲಿ ಸಾವು ಸಂಭವಿಸುತ್ತದೆ.

Glanders disease horse bengaluru

ರೋಗದಿಂದಾಗುವ ಪರಿಣಾಮವೇನು?
ಗ್ಲ್ಯಾಂಡರ್ಸ್‌ ಮೊದಲ ಹಂತದಲ್ಲಿ ಕುದುರೆಗಳ ಮುಖ ಮತ್ತು ಕಾಲುಗಳ ಮೇಲೆ ಹುಣ್ಣುಗಳಾಗುತ್ತವೆ. ಎರಡನೇ ಹಂತದಲ್ಲಿ ಮೂಗು ಸೋರಿಕೆಯಿಂದ ಹಾಗೂ ಮೂರನೇ ಹಂತದಲ್ಲಿ ಶ್ವಾಸಕೋಶದ ಮೂಲಕ ದೇಹದಲ್ಲಿ ರೋಗ ಹರಡುತ್ತದೆ. ಇದರಿಂದ ಕುದುರೆ ಸಹಿಸಿಕೊಳ್ಳಲಾಗದಷ್ಟು ನೋವಿನಿಂದ ಬಳಲುತ್ತದೆ.

ದೀರ್ಘಕಾಲದ ಕಾಯಿಲೆಯೇ?
ಹೌದು, ದೀರ್ಘ ಕಾಲದ ಕಾಯಿಲೆಯು ಕುದುರೆಗಳಲ್ಲಿ ಸಾಮಾನ್ಯವಾಗಿದೆ. ಸೋಂಕಿತ ಪ್ರಾಣಿಗಳು ವರ್ಷಗಟ್ಟಲೆ ರೋಗವನ್ನು ಹರಡಬಹುದು. ಕೆಲವು ಪ್ರಾಣಿಗಳಲ್ಲಿ ರೋಗವು ಸುಪ್ತವಾಗಿ ದೀರ್ಘ ಕಾಲ ಉಳಿಯುವ ಸಾಧ್ಯತೆ ಇರುತ್ತದೆ. ಇದನ್ನೂ ಓದಿ: PublicTV Explainer: ಕಾಶಿ ವಿಶ್ವನಾಥ ದೇವಾಲಯದಿಂದ ಜ್ಞಾನವಾಪಿ ಮಸೀದಿ ವರೆಗೆ!

ರೋಗ ಪತ್ತೆ ಹೇಗೆ?
ಕುದುರೆಗಳ ಮೂಗಿನ ಲೋಳೆ ಪೊರೆಯ ಮೇಲೆ ಹುಣ್ಣುಗಳೊಂದಿಗೆ ಜೇನು ತುಪ್ಪದಂತಹ ದ್ರವ ಸುರಿಯುತ್ತಿರುತ್ತದೆ. ಜೊತೆಗೆ ಚರ್ಮದಲ್ಲಿ ಹುಣ್ಣುಗಳಾಗುತ್ತವೆ. ಇದರ ಆಧಾರದಲ್ಲಿ ರೋಗ ನಿರ್ಣಯ ಮಾಡಬಹುದು. CFT, PCR ಪರೀಕ್ಷೆಗಳ ಮೂಲಕ ರೋಗ ದೃಢೀಕರಿಸಬಹುದು. ವಿಶಿಷ್ಟವಾದ ಗಂಟುಗಳು, ಹುಣ್ಣುಗಳು, ಗಾಯದ ರಚನೆ ಮತ್ತು ದುರ್ಬಲಗೊಂಡ ಸ್ಥಿತಿಯು ಗ್ಲ್ಯಾಂಡರ್ಸ್‌ ಕ್ಲಿನಿಕಲ್‌ ರೋಗ ನಿರ್ಣಯಕ್ಕೆ ಸಾಕಷ್ಟು ಪುರಾವೆ ಒದಗಿಸುತ್ತದೆ.

horse glanders disease 1

ತಡೆಗಟ್ಟಬಹುದೇ? ಚಿಕಿತ್ಸೆ ಇದೆಯೇ?
ಗ್ಲ್ಯಾಂಡರ್ಸ್‌ ಒಂದು ಪ್ರಾಣಿ ಜನ್ಯ ಸಾಂಕ್ರಾಮಿಕ ರೋಗವಾಗಿದೆ. ಇದು ಪ್ರಾಣಿಗಳಿಂದ ಮನುಷ್ಯರಿಗೂ ಹರಡುತ್ತದೆ. ಮಾರಕ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲ. ದೃಢಪಡಿಸಿದ ಪ್ರಕರಣಗಳನ್ನು ಪತ್ತೆ ಮತ್ತು ನಿರ್ಮೂಲನೆಯಿಂದ ಮಾತ್ರ ತಡೆಗಟ್ಟಬಹುದು.

ಲಸಿಕೆ ಇದೆಯೇ?
ಇಲ್ಲ, ಮಾರಕ ಗ್ಲ್ಯಾಂಡರ್ಸ್‌ ಕಾಯಿಲೆಗೆ ಯಾವುದೇ ಲಸಿಕೆ ಇಲ್ಲ. ಇದನ್ನೂ ಓದಿ: PublicTV Explainer: ‘ದಶಾವತಾರಿ ರಾಮ’ನೂರಿನ ಅಯೋಧ್ಯೆ ರಾಮಮಂದಿರದ 10 ವಿಶೇಷತೆಗಳು..

ಮುಖ್ಯಾಂಶಗಳು..
* ಗ್ಲ್ಯಾಂಡರ್ಸ್‌, ಕುದುರೆಗಳು ಮತ್ತು ಕುದುರೆ ಜಾತಿಯ ಕತ್ತೆ, ಹೇಸರಗತ್ತೆಗಳಲ್ಲಿ ಕಾಣಿಸಿಕೊಳ್ಳುವ ಮಾರಣಾಂತಿಕ ಸಾಂಕ್ರಾಮಿಕ ರೋಗ.
* ಸೋಂಕಿತ ಪ್ರಾಣಿಗಳಿಗೆ ಯಾವುದೇ ಚಿಕಿತ್ಸೆ ಇರುವುದಿಲ್ಲ.
* ರೋಗ ದೃಢಪಟ್ಟ ಪ್ರಾಣಿಗಳನ್ನು ಗುರುತಿಸಿ ಕೊಲ್ಲುವುದರಿಂದ ಮಾತ್ರ ರೋಗ ಹರಡುವಿಕೆ ತಡೆಗಟ್ಟಬಹುದು.
* ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗ ಇದಾಗಿದೆ. ಹೀಗಾಗಿ ಕುದುರೆಗಳಲ್ಲಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಪಶುವೈದ್ಯ ಸಂಸ್ಥೆ ಸಂಪರ್ಕಿಸಿ ರಕ್ತದ ಮಾದರಿಯನ್ನು ಪರೀಕ್ಷೆಗೆ ನೀಡಿ ರೋಗ ದೃಢಪಡಿಸಿಕೊಳ್ಳುವುದು ಸೂಕ್ತ.
* ರೋಗ ಲಕ್ಷಣಗಳಿರುವ ಕುದುರೆಗಳು ಕಂಡು ಬಂದಲ್ಲಿ ಪಶುಪಾಲನಾ ಸಹಾಯವಾಣಿ ದೂರವಾಣಿ ಸಂಖ್ಯೆ: 1962 ಸಂಪರ್ಕಿಸಿ ಮಾಹಿತಿ ನೀಡಿ.

TAGGED:Bacterium Burkholderia MalleiBengaluru HorseGlanders DiseasePublic TV Explainerಕುದುರೆಗ್ಲ್ಯಾಂಡರ್ಸ್‌ ರೋಗಪಬ್ಲಿಕ್‌ ಟಿವಿ ಎಕ್ಸ್‌ಪ್ಲೇನರ್ಬೆಂಗಳೂರು
Share This Article
Facebook Whatsapp Whatsapp Telegram

You Might Also Like

fauja singh Dead
Crime

ವಾಕಿಂಗ್ ವೇಳೆ ಕಾರು ಡಿಕ್ಕಿ – ವಿಶ್ವದ ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಸಾವು

Public TV
By Public TV
7 minutes ago
Ukrainian PM Denys Shmyhal
Latest

ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ರಾಜೀನಾಮೆ

Public TV
By Public TV
16 minutes ago
Chinnaswamy Stampede 1
Bengaluru City

ಬೆಂಗಳೂರು ಕಾಲ್ತುಳಿತ ಕೇಸ್‌ – ವರದಿ ಬಹಿರಂಗಪಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

Public TV
By Public TV
29 minutes ago
Uttarakhand Accident
Crime

ಉತ್ತರಾಖಂಡ | 150 ಅಡಿ ಆಳದ ಕಂದಕಕ್ಕೆ ಬಿದ್ದ ಬೊಲೆರೋ – 8 ಮಂದಿ ದುರ್ಮರಣ, ಐವರು ಗಂಭೀರ

Public TV
By Public TV
59 minutes ago
bagalkote jayamruthyunjaya swamiji
Bagalkot

ಸಿಎಂ ವಿರುದ್ಧದ ಆ ಹೇಳಿಕೆಯೇ ನನಗೆ ಮುಳುವಾಯಿತು: ಪಂಚಮಸಾಲಿ ಶ್ರೀ

Public TV
By Public TV
1 hour ago
jaishankar china
Latest

ಅಫ್ಘಾನಿಸ್ತಾನ ಅಭಿವೃದ್ಧಿಗೆ ನೆರವು ನೀಡಿ: ಎಸ್‌ಸಿಒ ಸಭೆಯಲ್ಲಿ ಜೈಶಂಕರ್‌ ಒತ್ತಾಯ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?