ಕಂಗನಾ ಮಳೆಗಾಲದಲ್ಲಿ ಹೊರಬರುವ ಕಪ್ಪೆಯಂತೆ, ಬೇಗನೆ ಕಣ್ಮರೆಯಾಗ್ತಾರೆ: ʻಕೈʼ ಸಚಿವ ಲೇವಡಿ

Public TV
2 Min Read
Kangana Ranaut

ಶಿಮ್ಲಾ: ಕಂಗನಾ ರಣಾವತ್‌ (Kangana Ranaut) ಅವರು ಮಳೆಗಾಲದಲ್ಲಿ ಹೊರ ಬರುವ ಕಪ್ಪೆಯಂತೆ ಬೇಗನೆ ಕಣ್ಮರೆಯಾಗ್ತಾರೆ ಎಂದು ಹಿಮಾಚಲ ಪ್ರದೇಶದ ಪಿಡಬ್ಲ್ಯೂಡಿ ಸಚಿವ ಮತ್ತು ಮಂಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ (Vikramaditya Singh) ಟೀಕಿಸಿದ್ದಾರೆ.

ಮಂಡಿ ಕ್ಷೇತ್ರದಲ್ಲಿ  (Mandi Constituency) ಮತಯಾಚನೆ ವೇಳೆ ಮಾತನಾಡಿರುವ ಅವರು ಕಂಗನಾ ವಿರುದ್ಧ ಲೇವಡಿ ಮಾಡಿದ್ದಾರೆ. ಕಂಗನಾ ರಣಾವತ್‌ ಅವರು ಮಳೆಗಾಲದಲ್ಲಿ ಹೊರಬರುವ ಕಪ್ಪೆಯಿದ್ದಂತೆ, ಪ್ರಚಾರದ ನಂತರ ಮಾಯವಾಗ್ತಾರೆ. ಹಿಮಾಚಲ ಪ್ರದೇಶದ ವಾತಾವರಣವು ಹಿತಕರವಾಗಿರೋದ್ರಿಂದ ಈಗ ಪ್ರವಾಸಕ್ಕೆ ಬಂದಿದ್ದಾರೆ. ಶೀಘ್ರವೇ ಆವರು ಕಣ್ಮರೆಯಾಗ್ತಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಲಂಡನ್‌, ದುಬೈನಲ್ಲಿ ಮನೆ.. 5 ಕೋಟಿ ಮೌಲ್ಯದ ಚಿನ್ನ; ದ. ಗೋವಾ ಬಿಜೆಪಿ ಅಭ್ಯರ್ಥಿ 1,400 ಕೋಟಿ ಒಡತಿ

Kangana Ranaut 2

ಶೂಟಿಂಗ್‌ಗೆ ಹೋಗುವಂತೆ ಬರ್ತಾರೆ:
ಅಲ್ಲದೇ ಪ್ರಚಾರದ ಸಂದರ್ಭದಲ್ಲಿ ಕಂಗನಾ ಅವರು ಧರಿಸುವ ಬಟ್ಟೆಗಳು ಸಿನಿಮಾ ಶೂಟಿಂಗ್‌ಗೆ ಹೋಗುವಂತೆ ಇದೆ. ಅವರು ಜನಮನ ಗೆಲ್ಲೋದಕ್ಕಾಗಲಿ, ಜನರ ನೋವನ್ನ ಅರ್ಥಮಾಡಿಕೊಳ್ಳೋದಕ್ಕಾಗಲಿ ಸಾಧ್ಯವಿಲ್ಲ. ಹಿಮಾಚಲ ಪ್ರದೇಶದ (Himachal Pradesh) ಆಹ್ಲಾದಕರ ವಾತಾವರಣ ಆನಂದಿಸಲು ರಾಜ್ಯಕ್ಕೆ ಬಂದಿದ್ದಾರೆ, ಮೂರು ತಿಂಗಳ ನಂತರ ಶೀಘ್ರವೇ ಹಿಂದಿರುಗುತ್ತಾರೆ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರೆಸಿಡೆಂಟ್ ಸಿದ್ದರಾಮಯ್ಯ, ಸಿಎಂ ಡಿಕೆ ಶಿವಕುಮಾರ್- ಚರ್ಚೆಗೆ ಗ್ರಾಸವಾಯ್ತು ರಾಗಾ ಭಾಷಣ

KANGANA RANAUT

ಹೆಮ್ಮೆಯ ಹಿಂದೂ ಎಂದಿದ್ದ ಕಂಗನಾ:
ಇತ್ತೀಚೆಗಷ್ಟೇ ಕಾಂಗ್ರೆಸ್‌ ನಾಯಕ ವಿಜಯ್ ವಾಡೆತ್ತಿವಾರ್, ನಟಿ ಕಂಗನಾ ರಣಾವತ್ ಅವರಿಗೆ ಗೋಮಾಂಸ ಅಂದರೆ ಇಷ್ಟ. ಅವರೇ ಅದನ್ನು ಹೇಳಿಕೊಂಡಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಾತು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಕಂಗನಾ ಆ ಮಾತಿಗೆ ತಿರುಗೇಟು ನೀಡಿದ್ದರು. ನಾನು ಗೋಮಾಂಸ ಅಥವಾ ಇತರ ಯಾವುದೇ ರೀತಿಯ ಮಾಂಸ ಸೇವಿಸುವುದಿಲ್ಲ. ನನ್ನ ಬಗ್ಗೆ ಸಂಪೂರ್ಣವಾಗಿ ಆಧಾರ ರಹಿತ ವದಂತಿಗಳನ್ನು ಹರಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಾನು ಯೋಗ ಮತ್ತು ಆಯುರ್ವೇದವನ್ನು ಪ್ರತಿಪಾದಿಸುತ್ತಿದ್ದೇನೆ ಮತ್ತು ಪ್ರಚಾರ ಮಾಡುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.

ಸದ್ಯ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಕಂಗನಾ ರಣಾವತ್‌ ಪ್ರತಿನಿತ್ಯ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಗುರುವಾರವೂ ಮಂಡಿ ಕ್ಷೇತ್ರದ ಭರ್ಮೌರ್ ಗೆ ಭೇಟಿ ನೀಡಿದ್ದ ಕಂಗನಾ, ಅಲ್ಲಿನ ಪುರಾತನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಚಂಬಾ ಗಡ್ಡಿ ಸಮುದಾಯದ ಸಾಂಪ್ರದಾಯಿಕ ಉಡುಪನ್ನು ಧರಿಸಿ, ಮತಯಾಚನೆ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್ ಮಂಗಳ ಗ್ರಹದಿಂದ ಬಂದಿದ್ದಾರೆ: ಕಂಗನಾ ಹೇಳಿಕೆಗೆ ‘ಕೈ’ ಕಾರ್ಯಕರ್ತರು ತಿರುಗೇಟು

Share This Article