ಬಾಬಾ ರಾಮ್‌ದೇವ್‌ಗೆ ಮತ್ತೆ ಸುಪ್ರೀಂ ತಪರಾಕಿ

Public TV
1 Min Read
Baba Ramdev

ನವದೆಹಲಿ: ಸುಳ್ಳು ಜಾಹೀರಾತು ಸಂಬಂಧ ಪತಂಜಲಿ(Patanjali) ಸಂಸ್ಥೆಯ ಬಾಬಾ ರಾಮದೇವ್ (Baba Ramdev) ಮತ್ತು ಆಚಾರ್ಯ ಬಾಲಕೃಷ್ಣಗೆ(Acharya Balkrishna) ಸುಪ್ರೀಂಕೋರ್ಟ್ ಮತ್ತೆ ತಪರಾಕಿ ಹಾಕಿದೆ.

ಕ್ಷಮೆಯಾಚನೆಯ ನೈಜತೆ ತಿಳಿಯಲು ಇಂದು ಇಬ್ಬರ ಜೊತೆ ಸುಪ್ರೀಂಕೋರ್ಟ್ (Supreme Court) ವೈಯಕ್ತಿಕವಾಗಿ ಸಂವಹನ ನಡೆಸಿತು. ಈ ಹಂತದಲ್ಲಿ ಇಬ್ಬರು ಕ್ಷಮೆಯಾಚಿದರೂ, ಅದನ್ನು ಹಿಮಾ ಕೊಹ್ಲಿ, ಅಮಾನುಲ್ಲಾ ಅವರಿದ್ದ ನ್ಯಾಯಪೀಠ ಸಂಪೂರ್ಣವಾಗಿ ಒಪ್ಪಲಿಲ್ಲ.  ಇದನ್ನೂ ಓದಿ: ಸುರ್ಜೇವಾಲಾಗೆ ಶಾಕ್‌ – 2 ದಿನ ಚುನಾವಣಾ ಪ್ರಚಾರಕ್ಕೆ ನಿಷೇಧ

ನಿಮ್ಮನ್ನು ಕ್ಷಮಿಸಿದ್ದೇವೆ ಎಂದು ನಾವು ಹೇಳುವುದಿಲ್ಲ. ನೀವೇನು ಅಮಾಯಕರಲ್ಲ. ನಿಮ್ಮ ಹಿಂದಿನ ಇತಿಹಾಸದ ಬಗ್ಗೆ ನಾವು ಕುರುಡರಾಗಿರಲು ಸಾಧ್ಯವಿಲ್ಲ. ನಿಮ್ಮ ಕ್ಷಮೆಯಾಚನೆ ಬಗ್ಗೆ ಆಲೋಚಿಸ್ತೇವೆ. ನಿಮ್ಮನ್ನು ಕುಣಿಕೆಯಿಂದ ಬಿಡಿಸಲಾಗಿದೆ ಎಂದು ನಾವು ಹೇಳುತ್ತಿಲ್ಲ. ಮುದ್ರಿಸುವ ಮೂಲಕ ಬಹಿರಂಗವಾಗಿ ಕ್ಷಮೆ ಕೇಳಿ ಎಂದು ಎಚ್ಚರಿಕೆಯ ಧಾಟಿಯಲ್ಲಿ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.  ಇದನ್ನೂ ಓದಿ: ಅವಕಾಶ ಕೇಳಿ ಬಂದಿದ್ದ ಶೈಲಜಾ ಜೊತೆ 2ನೇ ಮದುವೆಯಾದರು ದ್ವಾರಕೀಶ್

ಪತಂಜಲಿ ಮತ್ತದರ ಸಂಸ್ಥೆಗಳು ತಮ್ಮನ್ನು ತಾವು ಸುಧಾರಿಸಿಕೊಳ್ಳುವುದಾಗಿ ನೀಡಿದ ಹೇಳಿಕೆ ದಾಖಲಿಸಿಕೊಂಡ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿತು.

 

Share This Article