ಭಾಗ್ಯಗಳನ್ನು ಕೊಟ್ಟು ರಾಜ್ಯವನ್ನ ದುಸ್ಥಿತಿಗೆ ತಂದರು: ಕಾಂಗ್ರೆಸ್ ವಿರುದ್ಧ ಸಿ.ಸಿ.ಪಾಟೀಲ ಕಿಡಿ

Public TV
2 Min Read
c.c.patil

ಗದಗ: ಭಾಗ್ಯಗಳನ್ನು ಕೊಟ್ಟು ರಾಜ್ಯವನ್ನು ದುಸ್ಥಿತಿಗೆ ತಂದರು ಎಂದು ಕಾಂಗ್ರೆಸ್ (Congress) ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ.ಪಾಟೀಲ (C.C.Patil) ಗುಡುಗಿದ್ದಾರೆ.

ಗದಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಮಿದುಳು ರೈಲ್ವೆ ಹಳಿ ಇದ್ದಂತೆ. ರೈಲು ಹಳಿ ಪ್ಯಾರಲಲ್‌ನಂತೆ ಕಾಂಗ್ರೆಸ್ ಎಐಸಿಸಿ ವರಿಷ್ಠರು ರೈಲು ಹಳಿ ಇದ್ದಂತೆ. ರಾಷ್ಟ್ರವ್ಯಾಪಿ ನಿಲ್ಲಿಸುತ್ತಿರುವುದು ಕೇವಲ 230 ಸ್ಥಾನಕ್ಕೆ. ಅಧಿಕಾರಕ್ಕೆ ಬರಲು 272 ಸ್ಥಾನ ಬೇಕು. ಯಾವ ಪುರುಷಾರ್ಥ, ಯಾವ ಲಾಜಿಕ್ ಮೇಲೆ ಗ್ಯಾರಂಟಿ ಕೊಡ್ತಿದ್ದಾರೆ? ಅಕಸ್ಮಾತ್ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದ್ರೆ ಸೂರ್ಯ ಪಶ್ಚಿಮಕ್ಕೆ ಹುಟ್ಟಿದಂತೆ. ಅವರ ಮಿತ್ರ ಪಕ್ಷವೇ ಇವರನ್ನು ಪರಿಗಣಿಸಿಲ್ಲ. ಪೊಳ್ಳು ಬರವಸೆಯನ್ನು ಯಾರೂ ನಂಬುವುದಿಲ್ಲ. ಭಾಗ್ಯಗಳನ್ನು ಕೊಟ್ಟು ಕರ್ನಾಟಕವನ್ನು ದುಸ್ಥಿತಿಗೆ ತಂದಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಅಲ್ಲ – ಐಟಿ ಕಂಪನಿ ಸ್ಫೋಟಿಸಲು ತಯಾರಿ ನಡೆಸಿದ್ದ ಉಗ್ರರು!

SIDDU DKSHI

ದೇಶಕ್ಕೂ ದುಸ್ಥಿತಿ ತರುವಂತಹ ಹೇಳಿಕೆ ಕೊಡಬಾರದು. ಚುನಾವಣೆಯಲ್ಲಿ ಗೆದ್ದರೆ ಮಾತು ಉಳಿಸಿಕೊಳ್ಳಬೇಕು. ಇವರು ಅಧಿಕಾರಕ್ಕೆ ಬರುವುದಿಲ್ಲ, ಬೇಕಾದ್ದು ಮಾತನಾಡ್ತಾರೆ. ಕಾಂಗ್ರೆಸ್‌ನವರು ವಿಚಿತ್ರ ಸನ್ನಿವೇಶದಲ್ಲಿ ಹೊರಟಿದ್ದಾರೆ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ವಿಸರ್ಜನೆ ಆಗುತ್ತೆ ಎಂದು ಬಿಜೆಪಿ ಶಾಸಕ ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ ನಾರಿ ನ್ಯಾಯ ಗ್ಯಾರಂಟಿ ವಿರುದ್ಧ ಕಿಡಿಕಾರಿದ ಶಾಸಕ, ಬಿಜೆಪಿನಲ್ಲೂ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳಿವೆ. ಸುಕನ್ಯಾ ಸಮೃದ್ಧಿ, ಬೇಟಿ ಬಜಾವೋ, ಬೇಟಿಪಡಾವೋ ಇದೆ. 2028 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುತ್ತಿದ್ದೇವೆ. ಇದು ನಾರಿ ನ್ಯಾಯ ಅಲ್ವಾ? ಇದು ನಾರಿ ಅನ್ಯಾಯ ನಾ? ಸಿಎಂ ಹಾಗೂ ಡಿಸಿಎಂ ಎಷ್ಟು ಕ್ಷೇತ್ರದಲ್ಲಿ ಓಡಾಡಿದ್ದಾರೆ? ಒಬ್ಬರು ಮೈಸೂರು ಹಿಡಿದುಕೊಂಡು ಕೂತಿದ್ದಾರೆ. ಇನ್ನೊಬ್ಬರು ಬೆಂಗಳೂರು ಗ್ರಾಮಾಂತರ ಹಿಡಿದುಕೊಂಡು ಕೂತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವರದ್ದು ಗೂಂಡಾ ಸಂಸ್ಕೃತಿ, ನಮ್ಮ ಕಾರ್ಯಕರ್ತರ ವಾಹನ ತಡೆದಿದ್ದಾರೆ: ಜೋಶಿ ಕಿಡಿ

ಒಂದು ಕಾಲದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್‌ನವರು ಎಷ್ಟು ಜನರಿದ್ದರು. ಒನ್ ಥರ್ಡ್ ಬಹುಮತ ಇತ್ತು. ಈಗ ವಿರೋಧ ಪಕ್ಷದ ನಾಯಕನಾಗಲು ಅರ್ಹತೆ ಇಲ್ಲದ ಸ್ಥಾನಕ್ಕೆ ಬಂದಿದ್ದಾರೆ. ಭಾಗ್ಯಗಳಿಂದ ಜನ ಮೋಸ ಹೋಗಿದ್ದರಿಂದ ಹಾಗೂ ಬಿಜೆಪಿಯಲ್ಲಿ ಆಗಿದ್ದ ಅಡೆತಡೆಗಳಿಂದ ಅಧಿಕಾರಕ್ಕೆ ಬಂದಿದ್ದಾರೆ. ಈಗಲೇ ಚುನಾವಣೆ ಆದರೆ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರುತ್ತೆ. ತಾಕತ್ತು ಇದ್ರೆ ಲೋಕಸಭಾ ಚುನಾವಣೆ ಮುಗಿದ ನಂತರ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆ ಮಾಡಲಿ. ನಾವು ತಯಾರು ಇದ್ದೇವೆ ಎಂದು ಸವಾಲು ಹಾಕಿದ್ದಾರೆ.

Share This Article