ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಬಾಲಿವುಡ್ ದಂಡು

Public TV
1 Min Read

ಶ್ (Yash) ನಟನೆಯ ಟಾಕ್ಸಿಕ್ (Toxic) ಸಿನಿಮಾ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಕೊಡದೇ ಇದ್ದರೂ, ಸಾಕಷ್ಟು ವಿಷಯಗಳು ಆಚೆ ಬರುತ್ತಿವೆ. ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ಬಾಲಿವುಡ್ ದಂಡೇ ಈ ಸಿನಿಮಾದಲ್ಲಿ ಇರಲಿದೆ. ಕನ್ನಡಕ್ಕೆ ಪ್ರತಿಭಾವಂತ ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಈ ಸಿನಿಮಾ ಮೂಲಕ ಯಶ್ ಕರೆಯಿಸಿಕೊಳ್ಳುತ್ತಿದ್ದಾರೆ.

Toxic 2

ಈಗಾಗಲೇ ಈ ಚಿತ್ರದಲ್ಲಿ ಕರೀನಾ ಕಪೂರ್ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ಇವರ ಜೊತೆಗೆ ಹಿಂದಿಯ ಫೇಮಸ್ ನಟ ನವಾಜುದ್ದೀನ್ ಸಿದ್ದಿಕ್ (Nawazuddin Siddique), ಖ್ಯಾತ ನಟಿ ಕಿಯಾರಾ ಅಡ್ವಾಣಿ (Kiara Advani), ಮಲಯಾಳಂ ನಟ ಶೈನ್ ಟಾಮ್ ಚಾಕೊ ಕೂಡ ಚಿತ್ರದಲ್ಲಿ ನಟಿಸಲಿದ್ದಾರಂತೆ. ಈ ಪಟ್ಟಿ ಅಧಿಕೃತವಾಗಿ ಸಿನಿಮಾ ತಂಡ ಹೇಳಿಲ್ಲವಾದರೂ, ಆಪ್ತರ ಪ್ರಕಾರ ನಿಜವಂತೆ.

Toxic 2

ಗೋವಾ, ಶ್ರೀಲಂಕಾ, ಲಂಡನ್ ಹೀಗೆ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಬಗ್ಗೆ ಸಾಕಷ್ಟು ಹೆಸರುಗಳು ಕೇಳಿ ಬಂದವು. ಈಗಾಗಲೇ ಗೋವಾದಲ್ಲಿ ಯಶ್ ಶೂಟಿಂಗ್ ಶೂರು ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಯಶ್ ಆಪ್ತರ ಪ್ರಕಾರ ಇನ್ನೂ ಸಿನಿಮಾದ ಶೂಟಿಂಗ್ ನಡೆದಿಲ್ಲವಂತೆ. ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 15ರಿಂದ ಬೆಂಗಳೂರಿನಿಂದಲೇ (Bangalore) ಮೊದಲ ಹಂತದ ಚಿತ್ರೀಕರಣ ಶುರುವಾಗಬೇಕಿತ್ತು. ಅದೂ ಆಗಿಲ್ಲ.

 

ಬೆಂಗಳೂರಿನ ಎಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಶೂಟಿಂಗ್ ಗಾಗಿ ಬೃಹತ್ ಸೆಟ್ ಹಾಕಲಾಗಿದೆ. ಇನ್ನೂ ಕೆಲಸಗಳು ನಡೆದಿವೆ. ಜೊತೆಗೆ ಹೆಸರಾಂತ ಕಲಾವಿದರ ಡೇಟ್ ಹೊಂದಾಣಿಕೆ ಕಾರ್ಯ ನಡೆಯುತ್ತಿದೆ. ಹಾಗಾಗಿ ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಿಂದ ಚಿತ್ರೀಕರಣ ಶುರು ಮಾಡಲಿದ್ದಾರಂತೆ ಯಶ್.

Share This Article