ದುಬಾರಿ ಕಾರು ಖರೀದಿಸಿದ ‘ಬಿಗ್ ಬಾಸ್’ ಬೆಡಗಿ ನಮ್ರತಾ ಗೌಡ

Public TV
1 Min Read
NAMRATHA GOWDA

ನಾಗಿಣಿ 2, ಬಿಗ್ ಬಾಸ್ ಸೀಸನ್ 10 (Bigg Boss Kannada 10) ಶೋ ಮೂಲಕ ಗಮನ ಸೆಳೆದ ನಮ್ರತಾ ಗೌಡ (Namratha Gowda) ಸದ್ಯ ಹುಟ್ಟುಹಬ್ಬದ ಸೆಲೆಬ್ರೇಶನ್ ಮೂಡ್‌ನಲ್ಲಿದ್ದಾರೆ. ಇದರ ನಡುವೆ ದುಬಾರಿ ಕಾರು ಖರೀದಿಸುವ ಮೂಲಕ ನಟಿ ಸಂಭ್ರಮಿಸಿದ್ದಾರೆ.‌ ಇದನ್ನೂ ಓದಿ:ಸೌಂದರ್ಯ ಜಗದೀಶ್ ಆತ್ಮಹತ್ಯೆ ಬಗ್ಗೆ ಡಿಸಿಪಿ ಪ್ರತಿಕ್ರಿಯೆ

NAMRATHA

ನಟಿ ನಮ್ರತಾ ಗೌಡ ಇದೀಗ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. MG ಮೋಟರ್ ಇಂಡಿಯಾ ಕಂಪನಿಯ ಎಲೆಕ್ಟ್ರಿಕಲ್ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ 6ರಿಂದ 9 ಲಕ್ಷ ರೂ.ವರೆಗೂ ಇದೆ ಎನ್ನಲಾಗಿದೆ. ಸದ್ಯ ನಮ್ರತಾ ಸಕ್ಸಸ್ ಮತ್ತು ಖುಷಿ ನೋಡಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ಅವರ ಬೇಡಿಕೆ ಈಗ ಹೆಚ್ಚಾಗಿದೆ. ಕಿರುತೆರೆ, ಹಿರಿತೆರೆ ಮತ್ತು ಜಾಹೀರಾತುಗಳಿಗೆ ಅವಕಾಶಗಳು ಹರಿದು ಬರುತ್ತಿವೆ.

Share This Article