ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಹಿಂದಿ ಸೀಸನ್ 17 (Bigg Boss Hindi 17) ಕೊನೆಗೊಳ್ಳುತ್ತಿದ್ದಂತೆ ಬಿಗ್ ಬಾಸ್ ಒಟಿಟಿಗೆ (Bigg Boss OTT 3) ವೇದಿಕೆ ಸಿದ್ಧವಾಗುತ್ತಿದೆ. ಡಿಜಿಟಲ್ ವರ್ಷನ್‌ಗೆ ತಯಾರಿ ನಡೆಯುತ್ತಿದ್ದು, ಸ್ಪರ್ಧಿಗಳು ಕೂಡ ಫೈನಲ್ ಆಗಿದ್ದಾರೆ. ಇದನ್ನೂ ಓದಿ:ಮುನಿಸು ಮರೆತು 20 ವರ್ಷಗಳ ನಂತರ ಒಂದಾದ ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್

ಒಟಿಟಿಯಲ್ಲಿ ಈ ಬಾರಿ ಶೀಜನ್ ಖಾನ್, ವಿಕ್ಕಿ ಜೈನ್, ಮ್ಯಾಕ್ಸ್ಟರ್ನ್, ಪ್ರತೀಕ್ಷಾ ಹೊನ್ಮುಖೇ, ಶೆಹಜಾದಾ ಧಾಮ್, ತುಗೇಶ್, ರೋಹಿತ್ ಖತ್ರಿ, ಸೋನಿಯಾ ಸಿಂಗ್ ಖತ್ರಿ, ಅರ್ಹನ್ ಬೆಹ್ಲ್, ದಲ್ಜೀತ್ ಕೌರ್, ಶ್ರೀರಾಮ ಚಂದ್ರ, ಆರ್ಯನ್ಶಿ ಶರ್ಮ್, ಸಂಕೇತ್ ಉಪಾಧ್ಯಾಯ, ತುಷಾರ್ ಸಿಲಾವತ್, ರೋಹಿತ್ ಜಿಂಜುರ್ಕೆ, ಮೊಹಮ್ಮದ್ ಸರಿಯಾ ದೊಡ್ಮನೆಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸ್ಪರ್ಧಿಗಳಾಗಲಿ ಅಥವಾ ವಾಹಿನಿಯಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸದ್ಯ ಬಿಗ್ ಬಾಸ್ ಶೋ ಶುರುವಾಗುತ್ತಿರುವ ಖುಷಿಯಲ್ಲಿದ್ದಾರೆ ಬಿಗ್ ಬಾಸ್ ಕಾರ್ಯಕ್ರಮದ ಅಭಿಮಾನಿಗಳು.

