ಮೇ 1ಕ್ಕೆ ಟಗರು ಪುಟ್ಟಿ ಮಾನ್ವಿತಾ ಕಾಮತ್ ಮದುವೆ

Public TV
1 Min Read
manvitha

ನ್ನಡದ ಮತ್ತೋರ್ವ ನಟಿ ಹೊಸ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಕೆಂಡ ಸಂಪಿಗೆ ಸಿನಿಮಾ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ಮಾನ್ವಿತಾ ಕಾಮತ್ (Manvita Kamat) ಮೇ 1ರಂದು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಕುರಿತಾದ ಡಿಜಿಟೆಲ್ ಆಮಂತ್ರಣ ಪತ್ರಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಅಪ್ ಲೋಡ್ ಮಾಡಿದ್ದಾರೆ.

manvitha kamath

ಅರುಣ್ ಎನ್ನುವವರ ಜೊತೆ ಮಾನ್ವಿತಾ ಮದುವೆ ಆಗುತ್ತಿದ್ದು, ಮೈಸೂರು ಮೂಲದ ಅರುಣ್ ಸಿನಿಮಾ ರಂಗಕ್ಕೆ ಹತ್ತಿರದವರೇ ಎಂದು ಹೇಳಲಾಗುತ್ತಿದೆ. ಏಪ್ರಿಲ್ 30ಕ್ಕೆ ಅರಿಶಿನ ಶಾಸ್ತ್ರ ಮತ್ತು ಮೇ 1ಕ್ಕೆ ಮದುವೆ ನಡೆಯಲಿದೆ.

 

ಆರ್.ಜೆಯಾಗಿ ವೃತ್ತಿಯನ್ನು ಆರಂಭಿಸಿದ್ದ ಮಾನ್ವಿತಾ ಆನಂತರ ಸಿನಿಮಾ ರಂಗಕ್ಕೆ ಬಂದರು. ಸೂರಿ ನಿರ್ದೇಶನದ ಕೆಂಡ ಸಂಪಿಗೆ ಸಿನಿಮಾ ಅವರಿಗೆ ಹೆಸರು ತಂದುಕೊಟ್ಟಿತು. ಆನಂತರ ಟಗರು ಸಿನಿಮಾದ ಮೂಲಕ ಸಾಕಷ್ಟು ಜನಕ್ಕೆ ಪರಿಚಯವಾದರು. ಅಲ್ಲಿಂದ ಟಗರು ಪುಟ್ಟಿ ಎಂದೇ ಫೇಮಸ್ ಆದರು ಮಾನ್ವಿತಾ.

Share This Article