ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಒಬ್ಬರಿಲ್ಲೊಬ್ಬರು ಒಂದಿಲ್ಲೊಂದು ಪ್ರಕರಣಗಳಲ್ಲಿ ವಂಚನೆಗೆ ಒಳಗಾಗುತ್ತಿದ್ದಾರೆ. ಅದೇ ರೀತಿ ಸೀರಿಯಲ್ ನಟ ಸ್ಕಂದ ಅಶೋಕ್ (Skanda Ashok) ಅವರ ಸೋಷಿಯಲ್ ಮೀಡಿಯಾ ಖಾತೆಯನ್ನು ಹ್ಯಾಕ್ ಮಾಡಿ ವಂಚನೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸ್ಕಂದ ಅಶೋಕ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನ (Instagram Account Hack) ದುರ್ಬಳಕೆ ಮಾಡಿಕೊಂಡು ವಂಚನೆಗೆ ಯತ್ನಿಸಿರುವ ಘಟನೆ ಮೈಕ್ರೋ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: I.N.D.I.A ಒಕ್ಕೂಟ ಅಧಿಕಾರಕ್ಕೆ ಬಂದ್ರೆ ಮೋದಿ ಜೈಲಿಗೆ – ಮಿಸಾ ಭಾರತಿ
- Advertisement -
- Advertisement -
ಸೈಬರ್ ವಂಚಕರು ಸ್ಕಂದ ಅಶೋಕ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿ ಅವರ ಫಾಲೋವರ್ಸ್‌ಗಳಿಗೆ ಮೆಸೇಜ್ ಕಳುಹಿಸಿ, ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಅಶೋಕ್ ಮೈಕ್ರೋ ಲೇಔಟ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಪೊಲೀಸರು ಅಕೌಂಟ್ ಹ್ಯಾಕ್ ಆದ ಲೊಕೆಷನ್ ಪರಿಶೀಲಿಸಿದ್ರೆ ಚೆನೈ ಹಾಗೂ ಬೆಂಗಳೂರು ಮತ್ತು ನೈಜೀರಿಯಾ ಸ್ಥಳಗಳಲ್ಲಿ ಪತ್ತೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್- ಕಾಂಗ್ರೆಸ್‌ನಿಂದ ಮಿಡ್‍ನೈಟ್ ಆಪರೇಷನ್