ಮ್ಯಾಟ್ರಿಮೋನಿ ಮಹಿಳೆಯರೇ ಟಾರ್ಗೆಟ್ – ಪುಸಲಾಯಿಸಿ ಹಣ ಪೀಕುತ್ತಿದ್ದ ಖತರ್ನಾಕ್ ಅರೆಸ್ಟ್

Public TV
1 Min Read
Matrimony Women

ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ (Matrimony) ವರನನ್ನು ಹುಡುಕುತ್ತಿದ್ದ ಮಹಿಳೆಯರನ್ನ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಒಬ್ಬನನ್ನ ಜೆ.ಪಿ.ನಗರ ಪೊಲೀಸರು (JP Nagar Police) ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜೆ.ಪಿ ನಗರದ 41 ವರ್ಷದ ಮಹಿಳೆಗೆ ವಂಚಿಸಿದ ಆರೋಪದ ಮೇಲೆ ಆರೋಪಿ ದೀಪಕ್ ಎಂಬಾತನನ್ನ ಬಂಧಿಸಲಾಗಿದೆ.

ಏನಿದು ಮ್ಯಾಟ್ರಿಮೋನಿ ಪ್ರಕರಣ?
ಮ್ಯಾಟ್ರಿಮೋನಿಯಲ್ಲಿ ವರನನ್ನ ಹುಡುಕುವ ಮಹಿಳೆಯರನ್ನೇ (Matrimony Women) ಟಾರ್ಗೆಟ್ ಮಾಡುತ್ತಿದ್ದ ದೀಪಕ್, ಅವರಿಂದ ಹಣ ಪೀಕಿ ವಂಚಿಸುತ್ತಿದ್ದ. ಅದೇ ರೀತಿ ಮ್ಯಾಟ್ರಿಮೋನಿಯಲ್ಲಿ ವರನನ್ನ ಹುಡುಕುತ್ತಿದ್ದ 41 ವರ್ಷದ ಮಹಿಳೆಗೆ ವಂಚಿಸಿ ಕೊನೆಗೆ ಪೊಲೀಸರಿಗೆ ತಗಲಾಕಿಕೊಂಡಿದ್ದಾನೆ.

matrimony in madurai

ಮಧುರೈನಲ್ಲಿ ತಾನೊಬ್ಬ ಬ್ಯಾಂಕ್ ಉದ್ಯೋಗಿ, ನಿನ್ನನ್ನು ಮದುವೆ ಆಗ್ತೀನಿ ಎಂದು ಹೇಳಿದ್ದ ದೀಪಕ್‌, ಆಕೆಯಿಂದ 30 ಸಾವಿರ ರೂ. ಹಣ ಪೀಕಿದ್ದ. ಅಲ್ಲದೇ ಬ್ಯಾಂಕ್ ಸಿಮ್‌ನಲ್ಲಿ ಮಾತನಾಡೋಕಾಗಲ್ಲ, ಒಂದು ಸಿಎಂ ಖರೀದಿಸಿಕೊಡುವಂತೆ ಕೇಳಿಕೊಂಡಿದ್ದ. ಆಫೀಸ್ ಬಾಯ್ ಕಳಿಸುತ್ತೇನೆ, ಅವನ ಬಳಿ ಸಿಮ್ ಕಾರ್ಡ್ ಕೊಟ್ಟು ಕಳಿಸು ಎಂದು ಹೇಳಿದ್ದ. ಇದರಿಂದ ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ತಿಳಿದುಕೊಂಡ ಮಹಿಳೆ ತಕ್ಷಣ ಸಿಮ್ ಬ್ಲಾಕ್ ಮಾಡಿಸಿ, ಜೆ.ಪಿ ನಗರ ಪೊಲೀಸರಿಗೆ ದೂರು ನೀಡಿದ್ದಾಳೆ.

ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ ಬಳಿಕ ಇದೇ ರೀತಿ, ಹಲವು ಮಹಿಳೆಯರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಯ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

Share This Article