ಜೈಲಿನಲ್ಲಿ ಕೇಜ್ರಿವಾಲ್‌ ತೂಕ 1 ಕೆಜಿ ಹೆಚ್ಚಾಗಿದೆ: ಬಿಜೆಪಿ

Public TV
2 Min Read
Aravind Kejriwal

ನವದೆಹಲಿ: ದೆಹಲಿ ಮುಖ್ಯಮಂತ್ರಿ (Delhi CM) ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ತೂಕ 1 ಕೆಜಿ ಹೆಚ್ಚಾಗಿದೆ ಎಂದು ಬಿಜೆಪಿ (BJP) ಹೇಳಿದೆ.

ಸುದ್ದಿಗೋಷ್ಠಿ ನಡೆಸಿದ ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮವೀರ್ ಸಿಂಗ್ ಬಿಧುರಿ (Delhi LoP Ramvir Singh Bidhuri) ಅವರು, ಅರವಿಂದ್ ಕೇಜ್ರಿವಾಲ್ ಅವರು ಯಾವುದೇ ತೂಕವನ್ನು ಕಳೆದುಕೊಂಡಿಲ್ಲ ಆದರೆ ವಾಸ್ತವವಾಗಿ ತಿಹಾರ್ ಜೈಲಿನಲ್ಲಿ (Tihar Jail) 1 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಿದರು.  ಇದನ್ನೂ ಓದಿ: ಅಧಿಕಾರಕ್ಕೆ ಬಂದರೆ ಮೊಬೈಲ್‌ ಡೇಟಾಗೆ 500 ರೂ. ಫ್ರೀ – ಅಖಿಲೇಶ್‌ ಯಾದವ್‌ ಘೋಷಣೆ

ಅಧಿಕೃತ ವೈದ್ಯಕೀಯ ಆರೋಗ್ಯ ಮಾಹಿತಿ ಇರುವ ಚಾರ್ಟ್ ಉಲ್ಲೇಖಿಸಿದ ಅವರು ಬಿಜೆಪಿ ನಾಯಕ ಕೇಜ್ರಿವಾಲ್ ಜೈಲಿನಲ್ಲಿ 4.5 ಕೆಜಿ ತೂಕವನ್ನು ಕಳೆದುಕೊಂಡಿಲ್ಲ ಮತ್ತು ಅವರ ಪ್ರಮುಖ ಅಂಕಿಅಂಶಗಳಾದ ಬಿಪಿ ಮತ್ತು ಶುಗರ್ ಸಹ ಸಾಮಾನ್ಯವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ದಿನೇಶ್ ಗುಂಡುರಾವ್ ಮನೆ ಅಂದ್ರೆ ಅದು ಕಾಂಗ್ರೆಸ್‌ ಮನೆ : ಅರ್ಧ ಪಾಕಿಸ್ತಾನ ಹೇಳಿಕೆಗೆ ಯತ್ನಾಳ್‌ ಸಮರ್ಥನೆ

 

 ಸಾಮಾನ್ಯ ವ್ಯಕ್ತಿಯಾಗಲಿ ಅಥವಾ ವಿಐಪಿಯಾಗಲಿ ಎಲ್ಲರಿಗೂ ಜೈಲು ನಿಯಮಗಳು ಒಂದೇ ಆಗಿರುತ್ತವೆ. ನಿನ್ನೆಯಷ್ಟೇ ಅವರ ಪತ್ನಿ ಸುನೀತಾ ಮತ್ತು ಪಿಎ ವೈಭವ್ ಅವರನ್ನು ಅರ್ಧ ಗಂಟೆ ಭೇಟಿಯಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ತಮ್ಮ ವಕೀಲರನ್ನು ವಾರಕ್ಕೆ ಐದು ಬಾರಿ ಭೇಟಿಯಾಗಲು ಅವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ನ್ಯಾಯಲಯ ಈ ಮನವಿಯನ್ನು ಪುರಸ್ಕರಿಸಲಿಲ್ಲ. ಯಾಕೆಂದರೆ ಜೈಲು ನಿಯಮಗಳ ಪ್ರಕಾರ ವಾರಕ್ಕೆ ಎರಡು ಬಾರಿ ಮಾತ್ರ ಸಭೆಗಳನ್ನು ನಡೆಸಲು ಅನುಮತಿ ನೀಡುತ್ತದೆ ಎಂದು ಹೇಳಿದರು.

ಈ ಹಿಂದೆ ಬಂಧನಕ್ಕೆ ಒಳಗಾದ 12 ದಿನಗಳಲ್ಲಿಯೇ ಕೇಜ್ರಿವಾಲ್‌ 4.5 ಕೆಜಿ ಕಳೆದುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕಿ ಹಾಗೂ ಸಚಿವೆ ಆತಿಶಿ ಆರೋಪಿಸಿದ್ದರು. ಈ ಆರೋಪಕ್ಕೆ ತಿಹಾರ್‌ ಜೈಲು ಅಧಿಕಾರಿಗಳು ಪ್ರತಿಕ್ರಿಯಿಸಿ ಇಡಿ ಕಸ್ಟಡಿಯಲ್ಲಿದ್ದ ಕೇಜ್ರಿವಾಲ್‌ ಅವರನ್ನು ಜೈಲಿಗೆ ಕರೆತರುವಾಗ 65 ಕೆಜಿ ಇದ್ದು, ಈಗಲೂ ಅಷ್ಟೇ ತೂಕವಿದ್ದಾರೆ ಎಂದು ಹೇಳಿದ್ದರು.

Share This Article