ಬಿಡದಿ ತೋಟದ ಮನೆಯಲ್ಲಿ ಹೆಚ್‍ಡಿಕೆ ಆಯೋಜಿಸಿದ್ದ ಔತಣಕೂಟ ರದ್ದು

Public TV
1 Min Read
HD KUMARASWAMY BIDADI

ರಾಮನಗರ: ಹೊಸತೊಡಕು ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಅಭ್ಯರ್ಥಿ ಹೆಚ್‌.ಡಿ ಕುಮಾರಸ್ವಾಮಿಯವರು (HD Kumaraswamy) ಬಿಡದಿ ತೋಟದ ಮನೆಯಲ್ಲಿ  ಏರ್ಪಡಿಸಿದ್ದ ಔತಣಕೂಟವನ್ನು ರದ್ದು ಮಾಡಲಾಗಿದೆ.

DK SHIVAKUMAR 4

ಹೆಚ್‍ಡಿಕೆ ಬಿಡದಿ ತೋಟದ ಮನೆಯಲ್ಲಿ ಔತಣಕೂಟದ ಜೊತೆಗೆ ಒಕ್ಕಲಿಗ ನಾಯಕರ ಸಭೆಯನ್ನು ಇಂದು ಕರೆಯಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಚುನಾವಣಾಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸ್ವಾಮೀಜಿ ದಡ್ಡರಲ್ಲ- ಮೈತ್ರಿ ನಾಯಕರು ನಿರ್ಮಲಾನಂದ ಶ್ರೀಗಳ ಭೇಟಿಗೆ ಡಿಕೆಶಿ ಆಕ್ಷೇಪ

ಊಟದ ವ್ಯವಸ್ಥೆ, ಚೇರ್, ಪೆಂಡಾಲ್ ಪರಿಶೀಲನೆ ನಡೆಸಿದರು. ಅಲ್ಲದೇ 50ಕ್ಕೂ ಹೆಚ್ಚು ಮಂದಿ ಸೇರಿದ್ರೆ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆಗುತ್ತೆ. ಕುಟುಂಬಸ್ಥರಿಗೆ ಮಾತ್ರ ಊಟದ ವ್ಯವಸ್ಥೆ ಮಾಡಬಹುದು. ಆದರೆ ರಾಜಕೀಯ ನಾಯಕರು, ಮುಖಂಡರು ಬರುವ ಹಾಗಿಲ್ಲ. ಒಂದು ವೇಳೆ ರಾಜಕೀಯ ಮುಖಂಡರು ಬಂದ್ರೆ ಎಲ್ಲವನ್ನೂ ಸೀಜ್ ಮಾಡಿ ಕೇಸ್ ಮಾಡುವುದಾಗಿ ಎಚ್ಚರಿಕೆ ನೀಡಿದರು.

BIDADI ELECTION OFFICER

ಸದ್ಯ ಒಳಗೆ ಯಾವುದೇ ರಾಜಕೀಯ ಮುಖಂಡರು, ನಾಯಕರು ಇಲ್ಲ. ಒಂದು ಎಂಸಿಸಿ ಟೀಂ ಇಲ್ಲೇ ಇದ್ದು ಎಲ್ಲವನ್ನೂ ಪರಿಶೀಲನೆ ನಡೆಸಲಿದೆ. ನೀತಿ ಸಂಹಿತೆ ಉಲ್ಲಂಘನೆ ಆದ್ರೆ ಕಾನೂನು ರೀತಿಯ ಕ್ರಮವಹಿಸುತ್ತೇವೆ ಎಂದು ಸಹಾಯಕ ಚುನಾವಣಾ ಅಧಿಕಾರಿ ರಮೇಶ್ ಹೇಳಿದ್ದಾರೆ. ಜೊತೆಗೆ 50ಕ್ಕಿಂತ ಹೆಚ್ಚುವರಿ ಚೇರ್ ಶಾಮಿಯಾನವನ್ನು ಅಧಿಕಾರಿಗಳು ತೆರವು ಮಾಡಿಸಿದ್ದಾರೆ.

ಸದ್ಯ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಸಭೆ ರದ್ದು ಮಾಡಿದ್ದಾರೆ.

Share This Article