ಕೊಪ್ಪಳ, ಹಾವೇರಿಯಲ್ಲಿ ಭೂಮಿಗೆ ತಂಪೆರೆದ ಮಳೆ

Public TV
1 Min Read
Rain in koppala

ಬೆಂಗಳೂರು: ಕೊಪ್ಪಳದಲ್ಲಿ (Koppala) ಯುಗಾದಿಯಂದೇ (Ugadi) 10 ನಿಮಿಷಗಳ ಕಾಲ ವರುಣನ (Rain) ಆಗಮನವಾಗಿದೆ. ಕೊಪ್ಪಳ ಜಿಲ್ಲಾ ಕೇಂದ್ರ ಮತ್ತು ತಾಲೂಕಿನ ಹಲಗೇರಿ ಗ್ರಾಮದಲ್ಲಿ ಮಳೆ ಬಿದ್ದಿದೆ.

ಬಿಸಿಲಿನಿಂದ ಕಂಗೆಟ್ಟ ಜನರಿಗೆ ಮಳೆಯಿಂದ ಒಂದಷ್ಟು ತಂಪೆರೆದಂತಾಗಿದೆ. ಜಿಟಿ ಜಿಟಿ ಮಳೆಯಿಂದ ಜನರು ಫುಲ್ ಖುಷಿಯಾದರು. ಈ ಬಾರಿ ರಣ ಬಿಸಿಲಿಗೆ ಕಂಗೆಟ್ಟ ಜನರು ಕೂಲ್ ಕೂಲ್ ಅನುಭವ ಪಡೆದರು. ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಸಿಎಎ ಉಲ್ಲೇಖಿಸಲು ಭಯ – ಕಾಂಗ್ರೆಸ್‌ ವಿರುದ್ಧ ಪಿಣರಾಯಿ ಕಿಡಿ

 

ಸ್ವಲ್ಪ ಪ್ರಮಾಣ ಮಳೆ ಆಗ ಆಗಿದ್ದರೂ ವಾತಾವರಣದಲ್ಲಿ ಬದಲಾವಣೆ ಆಗಿದ್ದು, ಬಿಸಿಗಾಳಿ ಬದಲಿಗೆ ತಂಗಾಳಿ ಬೀಸುತ್ತಿದ್ದು, ಜನರು ವಿಭಿನ್ನ ಅನುಭವ ಪಡೆದರು. ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಗಾಳಿ ಮಳೆಯಿಂದ ಮನೆಯ ಛಾವಣಿ‌ ಕಿತ್ತು ಹೋಗಿವೆ. ಇದನ್ನೂ ಓದಿ: ಸೀರೆ ಉಟ್ಟರೆ ಬರುತ್ತಂತೆ ಕ್ಯಾನ್ಸರ್! – ವೃಷಣ ಕ್ಯಾನ್ಸರ್‌ ಹೇಗೆ ಬರುತ್ತೆ? ಸಮಸ್ಯೆಗಳಿಂದ ಪಾರಾಗುವುದು ಹೇಗೆ?

ಹಾವೇರಿಯಲ್ಲಿ ಮಳೆ:
ಬ್ಯಾಡಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯುಗಾದಿ ಹಬ್ಬದಂದು ಹತ್ತು ನಿಮಿಷಗಳ ಕಾಲ ಮಳೆಯಾಗಿದೆ. ಬ್ಯಾಡಗಿ ಪಟ್ಟಣ ಸೇರಿದಂತೆ, ಬನ್ನಹಟ್ಟಿ, ಬಿಸಲಹಳ್ಳಿ ಸೇರಿದಂತೆ ಹಲವು ಗ್ರಾಮದಲ್ಲಿ ಕೆಲಕಾಲ ಮಳೆಯಾಗಿದೆ. ಸುಡು ಬಿಸಿಲಿನ ಝಳಕ್ಕೆ ತತ್ತರಿ ಹೋಗಿದ್ದ ಭೂಮಿಗೆ ತಂಪಾಗಿದೆ.

 

Share This Article