ಅತ್ತಿದ್ದು ಆಯಿತಲ್ಲ- ಹೆಚ್‍ಡಿಕೆ ಬಗ್ಗೆ ಡಿ.ಕೆ ಸುರೇಶ್ ವ್ಯಂಗ್ಯ

Public TV
1 Min Read
HD KUMARASWAMY DK SURESH

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಕುರಿತು ಸಂಸದ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಡಿ.ಕೆ ಸುರೇಶ್ (D.K Suresh) ವ್ಯಂಗ್ಯವಡಿದ್ದಾರೆ.

ರಾಮನಗರ ಜೊತೆಗೆ ತಾಯಿ-ಮಗುವಿನ ಸಂಬಂಧವಿದೆ ಎಂದು ಹೆಚ್‍ಡಿಕೆ ಈ ಹಿಂದೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಸು, ಅತ್ತಿದ್ದು ಆಯಿತಲ್ವಾ, ಯುಗಾದಿ ಹಬ್ಬ ಮುಗಿಯಲಿ ಮಾತಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸೆಕ್ಯೂರಿಟಿ ವೈಫಲ್ಯ ಆಗಿಲ್ಲ, ಅವರವರ ರಕ್ಷಣೆಗೆ ಗನ್ ಇಟ್ಕೊಂಡಿರ್ತಾರೆ: ಡಿಕೆಶಿ

ಅಶೋಕ್ ಬದಲು ಅಶ್ವಥ್ ನಾರಾಯಣ್‍ಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಬದಲಾವಣೆ ಬಗ್ಗೆ ಮಾತನಾಡಿ, ಉಸ್ತುವಾರಿ ಬದಲಾವಣೆಯಾದ್ರೆ ಯಾವುದೇ ಬದಲಾವಣೆ ಆಗಲ್ಲ. ಬಿಜೆಪಿ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ನಾವು ಮೋದಿ ಆಡಳಿತ ಸೋಲಿಸಬೇಕು ಎಂದು ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಅಭ್ಯರ್ಥಿಗಳು ನಮಗೆ ವೋಟ್ ಹಾಕಿ ಅನ್ನುತ್ತಿಲ್ಲ, ಬದಲಾಗಿ ಮೋದಿಗೆ ವೋಟ್ ಹಾಕಿ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Supreme Court 1

ಇದೇ ವೇಳೆ ಬರ ಪರಿಹಾರ ಸಂಬಂಧ ಕೋರ್ಟ್ ಸೂಚನೆಗೆ ಪ್ರತಿಕ್ರಿಯಿಸಿ, ಪರಿಹಾರ ಬಿಡುಗಡೆ ಮಾಡದೇ ನಿರ್ಮಲಾ ಸೀತಾರಾಮನ್ ಕುಂಟು ನೆಪ ಹೇಳುತ್ತಿದ್ದಾರೆ. ಬಿಜೆಪಿಯವರು ಮಾಹಿತಿಯನ್ನು ತಿರುಚುತ್ತಾರೆ. ನಾವು ಅಕ್ಟೋಬರ್ ಮುನ್ನವೇ ವರದಿ ಕಳುಹಿಸಿದ್ದೇವೆ, ಪ್ರಸ್ತಾವನೆ ಇಟ್ಟಿದ್ದೇವೆ. ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುವುದು ಬಿಜೆಪಿಯ ಕೆಟ್ಟ ದೃಷ್ಟಿ. ಈಗ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಇದರಲ್ಲಿ ರಾಜಕೀಯ ಇಲ್ಲ, ರಾಜಕೀಯ ಮಾಡಬಾರದು. ಆದರೆ ಬಿಜೆಪಿ ಇದರಲ್ಲೂ ರಾಜಕೀಯ ಮಾಡ್ತಿದೆ ಎಂದು ಸಂಸದರು ಕಿಡಿಕಾರಿದರು.

Share This Article