ಇದೇ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರು ನಾಯಕಿಯಾಗಿ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಲವ್ ಸೆಕ್ಸ್ ಔರ್ ಧೋಖಾ ಸಿನಿಮಾದಲ್ಲಿ ರಾಜಸ್ಥಾನಿ ಮೂಲದ ಬೋನಿತಾ ರಾಜಪುರೋಹಿತ್ (Bonita Rajpurohit) ಎನ್ನುವ ತೃತೀಯಲಿಂಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂಥದ್ದೊಂದು ಅವಕಾಶವನ್ನು ನಿರ್ಮಾಪಕಿ ಏಕ್ತಾ ಕಪೂರ್ ನೀಡಿದ್ದಾರೆ. ಈ ಸಿನಿಮಾದ ಮೂಲಕ ಎಂಟಿ ಹೊಸ ಮುಖಗಳ ಪರಿಚಯ ಆಗಲಿದೆ.
ಮತ್ತೊಂದು ಮಹತ್ವದ ಪಾತ್ರದಲ್ಲಿ ಉರ್ಫಿ ಜಾವೇದ್ ಕೂಡ ನಟಿಸಿದ್ದಾರೆ. ಬಿಗ್ ಬಾಸ್ ಬೆಡಗಿ(Bigg Boss) ಉರ್ಫಿ ಜಾವೇದ್ (Urfi Javed) ಇದೀಗ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಅದು ಸುಲಭಕ್ಕೆ ನೋಡಲು ಸಿಗುವುದಿಲ್ಲ. ಬಾಲಾಜಿ ಮೋಷನ್ ಪಿಕ್ಚರ್ ಯೂ ಟ್ಯೂಬ್ ನಲ್ಲಿ ವಿಡಿಯೋ ಲಭ್ಯವಿದ್ದು, ನಿಮ್ಮ ವಯಸ್ಸನ್ನು ದೃಢೀಕರಿಸಿದರೆ ಮಾತ್ರ ಟೀಸರ್ (Teaser)ನೋಡಬಹುದಾಗಿದೆ.
ಬಾಲಿವುಡ್ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಅವರು ‘ಲವ್ ಸೆಕ್ಸ್ ಔರ್ ಧೋಖಾ’ ಸೀಕ್ವೆಲ್‌ಗೆ (Love Sex Aur Dhokha 2) ಉರ್ಫಿ ಜಾವೇದ್ ಕೂಡ ನಾಯಕಿಯಾಗಿದ್ದಾರೆ. ಇಂದಿನ ಪೀಳಿಗೆಯ ಅನುಭವಗಳ ಮೇಲೆ ಈ ಸಿನಿಮಾದ ಕಥೆ ಆಧರಿಸಿದೆಯಂತೆ. ಕಥೆಯು ಸೋಷಿಯಲ್ ಮೀಡಿಯಾ ಮೇಲಿನ ಪ್ರೀತಿ ಆಧರಿಸಿದೆಯಂತೆ.
ಈ ಚಿತ್ರಕ್ಕೆ ಉರ್ಫಿನೇ ಸೂಕ್ತ ನಟಿ ಎಂದು ಚಿತ್ರತಂಡ ಆಯ್ಕೆ ಮಾಡಿದೆ. ಈ ಚಿತ್ರಕ್ಕೆ ದಿಬಾಕರ್ ಬ್ಯಾನರ್ಜಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೇ ಏಪ್ರಿಲ್ 19ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿನ ನಟನೆ, ಹಾಟ್ ಅವತಾರ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.