ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ ವಿಜಯ್ ದೇವರಕೊಂಡ ಟೀಮ್

Public TV
1 Min Read
vijay devarakonda 1

ದಿ ಫ್ಯಾಮಿಲಿ ಸ್ಟಾರ್ ಕುರಿತಂತೆ ತಪ್ಪು ಮಾಹಿತಿಗಳನ್ನು ಹಂಚುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ತೆಲುಗಿನ ಹೆಸರಾಂತ ನಟ ವಿಜಯ್ ದೇವರಕೊಂಡ ಟೀಮ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದೆ. ಸಿನಿಮಾ ಕುರಿತಂತೆ ನೆಗೆಟಿವ್ ಸುದ್ದಿ ಹರಡುತ್ತಿರುವುದರಿಂದ ತಮ್ಮ ಸಿನಿಮಾಗೆ ಅದು ದೊಡ್ಡ ಮಟ್ಟದಲ್ಲಿ ಪೆಟ್ಟು ನೀಡುತ್ತಿದೆ ಎಂದು ಆರೋಪಿಸಲಾಗಿದೆ.

vijay devarakonda 1

ಮೊನ್ನೆಯಷ್ಟೇ ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ರಿಲೀಸ್ ಆಗಿದೆ. ರಿಲೀಸ್ ಆದ ಎರಡನೇ ದಿನಕ್ಕೆ ಚಿತ್ರಮಂದಿರದಲ್ಲಿ ಡುಮ್ಕಿ ಹೊಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆಯಂತೆ. ವಿಜಯ್ ಮತ್ತು ಮೃಣಾಲ್ ಠಾಕೂರ್ (Mrunal Thakur) ನಟನೆಯ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಸಿನಿಮಾ ಈಗ ನೆಲಕಚ್ಚಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

vijay devarakonda

ಲೈಗರ್, ಖುಷಿ ಸಿನಿಮಾದ ನಂತರ ‘ಫ್ಯಾಮಿಲಿ ಸ್ಟಾರ್’ ಚಿತ್ರದ ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆಯಿತ್ತು. ಈ ಸಿನಿಮಾ ವಿಜಯ್ ದೇವರಕೊಂಡ ಕೆರಿಯರ್‌ಗೆ ತಿರುವು ಕೊಡಲಿದೆ ಎಂದೇ ಹೇಳಲಾಗಿತ್ತು. ಆದರೆ ಚಿತ್ರದ ಕುರಿತು ಇದೀಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲೆಕ್ಷನ್‌ನಲ್ಲಿ ಸಿನಿಮಾ ಎಡವಿದೆ.‌

 

ವಿಜಯ್ ಮತ್ತು ಮೃಣಾಲ್ (Mrunal Thakur) ಟ್ರ್ಯಾಕ್ ಅದ್ಭುತವಾಗಿ ಮೂಡಿ ಬಂದಿದೆ. ಕಥೆಯಲ್ಲಿ ಸಿನಿಮಾ ತಂಡ ಪಲ್ಟಿ ಹೊಡೆದಿದೆ. ಸ್ಟೋರಿ ಲೈನ್ ಜನರ ಗಮನ ಸೆಳೆಯುವಲ್ಲಿ ವಿಫಲವಾಗಿದೆ ಎನ್ನುವುದು ಹರಿದು ಬರುತ್ತಿರುವ ಮಾಹಿತಿ. ಏ.5ರಂದು ಫ್ಯಾಮಿಲಿ ಸ್ಟಾರ್ ತೆಲುಗು ಮತ್ತು ತಮಿಳಿನಲ್ಲಿ ರಿಲೀಸ್ ಆಗಿದೆ.

Share This Article