ಕಳವಾಗಿದ್ದ ಜೆಪಿ ನಡ್ಡಾ ಪತ್ನಿಯ ಕಾರು ಪತ್ತೆ- ಇಬ್ಬರ ಬಂಧನ

Public TV
1 Min Read
JP NADDA WIFE CAR

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರ ಪತ್ನಿಯ ಕಾರು ಕಳ್ಳತನವಾಗಿದ್ದು, ಇದೀಗ  ಭಾನುವಾರ ವಾರಣಾಸಿಯಲ್ಲಿ ಪತ್ತೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉತ್ತರ ಪ್ರದೇಶದ ಫರಿದಾಬಾದ್ ಬಳಿಯ ಬದ್ಖಾಲ್ ನಿವಾಸಿಗಳಾದ ಶಾಹಿದ್ ಮತ್ತು ಶಿವಾಂಗ್ ತ್ರಿಪಾಠಿ ಎಂದು ಗುರುತಿಸಲಾಗಿದೆ.

JP NADDA

ಪೊಲೀಸರ ಪ್ರಕಾರ, ಆರೋಪಿಗಳು ನಡ್ಡಾ ಅವರ ಕಾರನ್ನು ಕಳ್ಳತನ ಮಾಡಲೆಂದು ದೆಹಲಿಗೆ ಪ್ರಯಾಣಿಸಲು ಕ್ರೆಟಾ ಕಾರನ್ನು ಬಳಸಿದ್ದರು. ಕಾರನ್ನು ಮೊದಲು ಬದ್ಖಾಲ್‌ಗೆ ಕೊಂಡೊಯ್ಯಲಾಯಿತು. ಅಲ್ಲಿ ಅದರ ನಂಬರ್ ಪ್ಲೇಟ್ ಅನ್ನು ಬದಲಾಯಿಸಲಾಯಿತು. ಆರೋಪಿಗಳು ಕಾರನ್ನು ನಾಗಾಲ್ಯಾಂಡ್‌ಗೆ ಕಳುಹಿಸಲು ಯೋಜಿಸಿದ್ದರು. ಹೀಗಾಗಿ ಅಲಿಗಢ್, ಲಖಿಂಪುರ ಖೇರಿ, ಬರೇಲಿ, ಸೀತಾಪುರ್, ಲಖನೌ ಮಾರ್ಗವಾಗಿ ವಾರಾಣಸಿ ತಲುಪಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆ ಪಾಕ್ ಚುನಾವಣೆಗೆ ಹೆಚ್ಚು ಸೂಕ್ತವಾಗಿದೆ: ಹಿಮಂತ್ ಶರ್ಮಾ

ಮಾರ್ಚ್ 18 ರ ತಡರಾತ್ರಿ ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ಮಲ್ಲಿಕಾ ನಡ್ಡಾ (Mallika Nadda) ಅವರ ಫಾರ್ಚುನರ್ ಕಾರನ್ನು ಕಳವು ಮಾಡಲಾಗಿತ್ತು. ಕಾರನ್ನು ಗೋವಿಂದಪುರಿಯಲ್ಲಿರುವ ಸರ್ವೀಸ್ ಸೆಂಟರ್‌ಗೆ ಕೊಂಡೊಯ್ದು, ಅದನ್ನು ಕಳವು ಮಾಡಲಾಗಿದೆ ಎಂದು ಹೇಳಲಾಗಿತ್ತು. ಈ ಸಂಬಂಧ ಕಾರು ಚಾಲಕ ಮಾರ್ಚ್ 19 ರಂದು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರಿಗೆ ಹುಡುಕಾಟ ಆರಂಭಿಸಿದ್ದರು.

Share This Article