ದೀಪಕ್ ಜೊತೆಗಿನ ಮದುವೆ ಖಚಿತ ಪಡಿಸಿದ ಬಿಗ್ ಬಾಸ್ ಸ್ಪರ್ಧಿ

Public TV
1 Min Read
Aarti Singh 2

ಬಿಗ್ ಬಾಸ್ ಮನೆಯಲ್ಲಿ ಭಾರೀ ಸದ್ದು ಮಾಡಿದ್ದ ನಟಿ ಆರತಿ  ಸಿಂಗ್ (Aarti Singh) ಮದುವೆ ಆಗುತ್ತಿದ್ದಾರೆ. ಉದ್ಯಮಿ ದೀಪಕ್ ಚೌಹಾನ್ (Deepak Chauhan) ಜೊತೆಗಿನ ಮದುವೆಯನ್ನು ಅವರು ಖಚಿತ ಪಡಿಸಿದ್ದು, ಇದೇ ಏಪ್ರಿಲ್ 25ರಂದು ತಾವು ಹೊಸ ಜೀವನಕ್ಕೆ ಕಾಲಿಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

Aarti Singh 1

ದೆಹಲಿಯಲ್ಲೇ ಈ ಜೋಡಿಯ ಮದುವೆ ನಡೆಯಲಿದ್ದು, ದೇವಸ್ಥಾನದಲ್ಲಿ ತಾವು ಮದುವೆ (Marriage) ಆಗುತ್ತಿರುವುದಾಗಿ ತಿಳಿಸಿದ್ದಾರೆ ಆರತಿ ಸಿಂಗ್ ಖಚಿತ ಪಡಿಸಿದ್ದಾರೆ. ಇದೊಂದು ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಎರಡೂ ಕುಟುಂಬಗಳ ಒಪ್ಪಿಗೆ ಇದೆ ಎಂದು ಮಾತನಾಡಿದ್ದಾರೆ.

 

ಜುಲೈ 2023ರಲ್ಲಿ ತಾವು ದೀಪಕ್ ಅವರನ್ನು ಭೇಟಿ ಮಾಡಿದ್ದು, ಅದೇ ಸಮಯದಲ್ಲೇ ತಮಗೆ ಲವ್ ಪ್ರಪೋಸ್ ಮಾಡಿದ್ದರು ಎನ್ನುವುದು ಆರತಿ ಮಾತು.  ಕಳೆದ ವರ್ಷ ನವೆಂಬರ್ ನಲ್ಲಿ ಮದುವೆ ಕುರಿತಾಗಿ ಮಾತುಕತೆ ಆಗಿತ್ತಂತೆ.

Share This Article