ಚುಟುಚುಟು ಖ್ಯಾತಿಯ ಹುಡುಗಿ ಆಶಿಕಾ ರಂಗನಾಥ್ (Ashika Ranganath) ಪರಭಾಷಾ ಸಿನಿಮಾಗಳಲ್ಲೂ ಬ್ಯುಸಿ ಆದಂತೆ ಕಾಣುತ್ತಿದೆ. ಈಗಾಗಲೇ ತಮಿಳು (Tamil) ಮತ್ತು ತೆಲುಗಿನಲ್ಲಿ (Telagu) ಆಶಿಕಾ ನಟಿಸಿದ್ದರು. ಸಿದ್ದಾರ್ಥ ಜೊತೆಗಿನ ಚಿತ್ರದ ಶೂಟಿಂಗ್ ಮುಗಿಸಿಕೊಂಡಿದ್ದಾರೆ. ಆ ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕು. ಇದಕ್ಕೂ ಮೊದಲು ನಾಗಾರ್ಜುನ ಅಕ್ಕಿನೇನಿಗೆ ಜೋಡಿಯಾಗಿ ‘ನಾ ಸಾಮಿ ರಂಗ’ (Naa Saami Ranga) ಸಿನಿಮಾದಲ್ಲಿ ನಟಿಸಿದ್ದರು.
- Advertisement -
ಜ.14ರಂದು ‘ನಾ ಸಾಮಿ ರಂಗ’ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ನಾಗಾರ್ಜುನ ಮತ್ತು ಆಶಿಕಾ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಸಿನಿಮಾ ನೋಡಿ ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದರು. ಡ್ಯಾನ್ಸ್ ಮಾಸ್ಟರ್ ವಿಜಯ್ ಬಿನ್ನಿ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಗ್ರಾಮೀಣ ಸೊಗಡಿನ ಕಥೆಯನ್ನು ಈ ಚಿತ್ರದ ಮೂಲಕ ತೋರಿಸಿದ್ದರು. ನಾಗಾರ್ಜುನ ಅವರನ್ನು ಡಿಫರೆಂಟ್ ಆಗಿ ಅಭಿಮಾನಿಗಳಿಗೆ ತೋರಿಸುವ ಮೂಲಕ ಸದ್ದು ಮಾಡಿದ್ದರು. ಆಶಿಕಾ ಕೂಡ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದರು.
- Advertisement -
- Advertisement -
ಈ ಸಿನಿಮಾ ಗೆಲುವು ಸಾಧಿಸುತ್ತಿರುವಂತೆ ಮತ್ತೆ ತಮಿಳು ಹಾಗೂ ತೆಲುಗು ಚಿತ್ರರಂಗಗಳಿಂದ ಆಶಿಕಾಗೆ ಅವಕಾಶ ಹುಡುಕಿ ಬಂದಿದೆ. ಅವರೇ ಹೇಳುವಂತೆ ತೆಲುಗಿನಲ್ಲೊ ಒಂದು ಹಾಗೂ ತಮಿಳಿನಲ್ಲಿ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ. ಎರಡೂ ಚಿತ್ರಗಳು ಶೂಟಿಂಗ್ ಶುರುವಾಗಬೇಕು.
- Advertisement -
ಪುನೀತ್ ರಾಜ್ ಕುಮಾರ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ 02 ಚಿತ್ರದಲ್ಲೂ ಆಶಿಕಾ ನಟಿಸಿದ್ದಾರೆ. ಮೊದಲ ಬಾರಿಗೆ ಡಾಕ್ಟರ್ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಆಶಿಕಾ ಜೊತೆ ಮುಖ್ಯಭೂಮಿಕೆಯಲ್ಲಿ ಮಲೆನಾಡಿನ ಪ್ರತಿಭೆ ಪ್ರವೀಣ್ ತೇಜ್ ನಟಿಸಿದ್ದಾರೆ.