ಮಂಡ್ಯದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಹೆಚ್‌.ಡಿ.ರೇವಣ್ಣ ಸ್ಪರ್ಧೆ!

Public TV
1 Min Read
HD Kumaraswamy

ಮಂಡ್ಯ: ಸಕ್ಕರೆ ನಾಡಿನಲ್ಲಿ ಲೋಕಸಭಾ (Mandya Lok Sabha) ಚುನಾವಣಾ ಕಣ ರಂಗೇರಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಪ್ರಬಲ ಅಭ್ಯರ್ಥಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ವಿರುದ್ಧ ಹೆಚ್‌.ಡಿ.ರೇವಣ್ಣ ಸ್ಪರ್ಧೆಗಿಳಿದಿದ್ದಾರೆ.

ಹೆಚ್.‌ಡಿ.ರೇವಣ್ಣ ಹೆಸರಿನ ವ್ಯಕ್ತಿಯೊಬ್ಬರು ಮಂಡ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಹಾಸನ ಮೂಲದ ಹೆಚ್‌.ಡಿ.ರೇವಣ್ಣ (H.D.Revanna) ಎಂಬವರು ಪೂರ್ವಾಂಚಲ ಮಹಾಪಂಚಾಯತ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚನ್ನರಾಯಪಟ್ಟಣದ ಕೋಡಿಹಳ್ಳಿ ಗ್ರಾಮದ ದೊಡ್ಡೇಗೌಡರ ಪುತ್ರ ಹೆಚ್‌.ಡಿ.ರೇವಣ್ಣ. ಇದನ್ನೂ ಓದಿ: ರೈತರಿಗೆ ಮಿಡಿಯುವ ಹೃದಯ ಕುಮಾರಸ್ವಾಮಿಯವ್ರದ್ದು: ನಿಖಿಲ್

h.d.revanna

ಹೆಚ್‌.ಡಿ.ರೇವಣ್ಣ ಎಂದಾಕ್ಷಣ ಕುಮಾರಸ್ವಾಮಿ ಅವರ ಅಣ್ಣ ಎಂದು ಅನೇಕರು ಭಾವಿಸಬಹುದು. ಆದರೆ ಹೆಚ್‌ಡಿಕೆ ಸಹೋದರ ಹೆಚ್‌.ಡಿ.ರೇವಣ್ಣ ಅಲ್ಲ. ಅದೇ ಹೆಸರಿಗೆ ವ್ಯಕ್ತಿಯೊಬ್ಬರು ಸ್ಪರ್ಧೆಗಿಳಿದಿದ್ದಾರೆ.

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗುವ ಆಕಾಂಕ್ಷೆಯಲ್ಲಿದ್ದ ಸುಮಲತಾ ಅವರಿಗೆ ನಿರಾಸೆಯಾಗಿದೆ. ಆದರೆ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿಗೆ ಬೆಂಬಲ ನೀಡುವುದಾಗಿ ಸುಮಲತಾ ಅವರು ಘೋಷಿಸಿದ್ದಾರೆ. ಹೆಚ್‌ಡಿಕೆ ವಿರುದ್ಧ ಕಾಂಗ್ರೆಸ್‌ ಸ್ಟಾರ್‌ ಚಂದ್ರು ಅವರನ್ನು ಕಣಕ್ಕಿಳಿಸಿದೆ. ಇದನ್ನೂ ಓದಿ: ಬಿಜೆಪಿ-ಜೆಡಿಎಸ್‌ ಮೈತ್ರಿಗೆ ನನ್ನ ಬೆಂಬಲ: ಸುಮಲತಾ ಅಂಬರೀಶ್‌

Share This Article