ತಿರುವನಂತಪುರಂ: ದೇಗುಲದೊಳಗೆಯೇ ಆನೆಯೊಂದು ಮಾವುತನನ್ನು ತುಳಿದು ಕೊಂದ ಆಘಾತಕಾರಿ ಘಟನೆ ಕೇರಳದ ವೈಕೋಮ್‌ನಲ್ಲಿ ನಡೆದಿದೆ.
ಮೃತ ಮಾವುತನನ್ನು ಅರವಿಂದ್ (26) ಎಂದು ಗುರುತಿಸಲಾಗಿದ್ದು, ಈತ ಪುತ್ತುಪ್ಪಲ್ಲಿ ಮೂಲದ ನಿವಾಸಿ. ಅರವಿಂದ್ ಅವರು ಕುಂಜುಲಕ್ಷ್ಮಿಯ ಎರಡನೇ ಮಾವುತರಾಗಿ ಕಳೆದ ತಿಂಗಳಿನಿಂದ ಸೇವೆ ಆರಂಭಿಸಿದ್ದರು.
ಟಿವಿ ಪುರಂ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ದೇವಸ್ಥಾನದ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪತಿಯೂ ಬೇಕು, ಪ್ರೇಮಿಯೂ ಬೇಕೆಂದು ವಿದ್ಯುತ್ ಕಂಬವೇರಿ ಮಹಿಳೆ ಪ್ರತಿಭಟನೆ
The elephant rider was trampled to death by the elephant, who was forced to perform temple rituals in Kerala, India. Animals should not be tortured to keep Gods happy! pic.twitter.com/RM9jUUy454
— Ashok Swain (@ProfAshokSwain) April 4, 2024
ವೀಡಿಯೋದಲ್ಲಿ ಏನಿದೆ..?: ಕುಂಜುಲಕ್ಷ್ಮಿ ಎಂದು ಕರೆಯಲ್ಪಡುವ ಆನೆಯು ಸಾಂಪ್ರದಾಯಿಕ ನೆಟ್ಟಿಪಟ್ಟಿಯಲ್ಲಿ ಕಂಗೊಳಿಸುತ್ತಿತ್ತು. ಇದೇ ಸಂದರ್ಭದಲ್ಲಿ ಏಕಾಏಕಿ ಕೋಪಗೊಂಡ ಆನೆಯು ತನ್ನ ಜೊತೆ ಇದ್ದ ಮಾವುತ ಅರವಿಂದ್‌ನನ್ನು ತುಳಿದಿದೆ. ಕೂಡಲೇ ದೇವಸ್ಥಾನದಲ್ಲಿದ್ದ ಸ್ಥಳೀಯರು ಸೇರಿ ಅರವಿಂದ್‌ನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ತಕ್ಷಣವೇ ವೈಕಂ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ಪರಿಣಾಮ ಅರವಿಂದ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ.