ರೈತರಿಗೆ ಮಿಡಿಯುವ ಹೃದಯ ಕುಮಾರಸ್ವಾಮಿಯವ್ರದ್ದು: ನಿಖಿಲ್

Public TV
1 Min Read
NIKHIL KUMARASWAMY

ಮಂಡ್ಯ: ರೈತರ ಕಣ್ಮಣಿ, ರೈತರಿಗೆ ಮಿಡಿಯುವ ಹೃದಯ ಕುಮಾರಸ್ವಾಮಿಯವರದ್ದಾಗಿದ್ದು, 30 ವರ್ಷದ ರಾಜಕೀಯ ಜೀವನದುದ್ದಕ್ಕೂ ಜನರಿಗಾಗಿ ಹೃದಯ ಮಿಡಿದಿದೆ ಎಂದು ಜೆಡಿಎಸ್ (JDS) ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.

ಮಂಡ್ಯದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಅವರು, ತನ್ನ ರಾಜಕೀಯ ಜೀವನದುದ್ದಕ್ಕೂ ಜನರಿಗಾಗಿ ಹೆಚ್‍ಡಿಕೆಯವರ ಹೃದಯ ಮಿಡಿದಿದೆ. ಈ ಕಾರಣದಿಂದಲೇ ಜನರು ಹೃದಯವಂತ ಅಂತ ಕರೆಯುತ್ತಾರೆ ಎಂದರು.

ಎನ್.ಡಿ.ಎ ಮೈತ್ರಿಗೆ ಮುಖ್ಯ ಕಾರಣ ಪ್ರಮೋದ್ ಸಾವಂತ್. ಮಂಡ್ಯದ ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ. ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡುವುದಿಲ್ಲ. ಕಾವೇರಿ ಸಮಸ್ಯೆಯನ್ನ ಕುಮಾರಸ್ವಾಮಿ (HD Kumaraswamy) ಬಗೆಹರಿಸುತ್ತಾರೆ ಅಂತ ತಾವು ಅಂದುಕೊಂಡಿದ್ದೀರಿ. ಅದಕ್ಕಾಗಿ ಕುಮಾರಸ್ವಾಮಿ ಕೆಲಸ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ; ಲೋಕಸಭಾ ಚುನಾವಣೆ ಟಿಕೆಟ್ ಮಿಸ್ – ಲೋಕ ಜನಶಕ್ತಿ ಪಕ್ಷದ 22 ನಾಯಕರು ರಾಜೀನಾಮೆ

ದೇಶವನ್ನ ಕಟ್ಟಿಲಿಕ್ಕೆ ಮೋದಿಯವರು (Narendra Modi) 10 ವರ್ಷ ಕೆಲಸ ಮಾಡುತ್ತಿದ್ದಾರೆ. ವಿಶ್ರಾಂತಿಯನ್ನೇ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಅವರನ್ನ ಮತ್ತೊಮ್ಮೆ ಪ್ರಧಾನಿ ಮಾಡಲು ದೇವೆಗೌಡರು (H.D Devegowda) ಕೈಜೋಡಿಸಿದ್ದಾರೆ ಎಂದು ನಿಖಿಲ್ ತಿಳಿಸಿದರು.

Share This Article