ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಅಮಿತ್ ಶಾ ಶಕ್ತಿ ಪ್ರದರ್ಶನ; ರೋಡ್ ಶೋನಲ್ಲೂ ಜೈ ಶ್ರೀರಾಮ್ ಘೋಷಣೆ

Public TV
1 Min Read
Amit Shah Road Show

– ಡಾ. ಮಂಜುನಾಥ್‌ ಪರ ಮತಯಾಚನೆ – ರೋಡ್‌ಶೋನಲ್ಲಿ ಘಟಾನುಘಟಿ ನಾಯಕರು ಭಾಗಿ

ರಾಮನಗರ: ರಾಜ್ಯ ಬಿಜೆಪಿಯಲ್ಲೀಗ ಲೋಕಸಭೆ ಚುನಾವಣೆಯ ರಣೋತ್ಸಾಹ ಮೂಡಿದೆ. ಅಮಿತ್ ಶಾ (Amit Shah) ಅವರ ಮಿಂಚಿನ ಸಂಚಾರ ರಾಜ್ಯ ಬಿಜೆಪಿ-ಜೆಡಿಎಸ್ ಮೈತ್ರಿಗೆ ಬೂಸ್ಟ್ ನೀಡಿದೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿರುವ ಅಮಿತ್ ಶಾ ಅವರು ಡಿಕೆ ಬ್ರದರ್ಸ್ ಭದ್ರ ಕೋಟೆಯಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಪರ ಚುನಾವಣಾ ಪ್ರಚಾರದ ಭಾಗವಾಗಿ ಚನ್ನಪಟ್ಟಣದಲ್ಲಿಂದು ಭರ್ಜರಿ ರೋಡ್ ಶೋ (Amit Shah Road Show) ನಡೆಸಿದ್ದಾರೆ. ಅಮಿತ್ ಶಾ ಅವರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಡಾ. ಮಂಜುನಾಥ್, ನಿಖಿಲ್ ಕುಮಾರಸ್ವಾಮಿ, ಸಿ.ಪಿ ಯೋಗೇಶ್ವರ್ ಅವರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಯಾವ್ದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ಮಾಡಬಾರದು – ಪಕ್ಷದ ಅಸಮಧಾನಿತರಿಗೆ ಅಮಿತ್ ಶಾ ವಾರ್ನಿಂಗ್

ಜೈ ಶ್ರೀರಾಮ್- ಮೋದಿ… ಮೋದಿ.. ಘೋಷಣೆ:
ರೋಡ್ ಶೋ ವೇಳೆ ಸೇರಿದ್ದ ಸಾವಿರಾರು ಜನ ಹಾಗೂ ಬಿಜೆಪಿ ಕಾರ್ಯಕರ್ತರು `ಜೈ ಶ್ರೀರಾಮ’ ಘೋಷಣೆ ಕೂಗಿದ್ದಾರೆ. ಮೆರವಣಿಗೆ ಉದ್ದಕ್ಕೂ `ಜೈ ಶ್ರೀರಾಮ್, ಮೋದಿ ಮೋದಿ’ ಅಂತಾ ಘೋಷಣೆ ಕೂಗುತ್ತಲೇ ಉತ್ಸಾಹ ಮೆರೆದಿದ್ದಾರೆ. ಇದೇ ವೇಳೆ ಅಮಿತ್ ಶಾ ಅವರು ಜನರ ಮೇಲೆ ಹೂಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಕುರ್ಚಿ ಉಳಿಸಿಕೊಳ್ಳೋದೆ ಚಿಂತೆ, ಯಾಕಂದ್ರೆ ಇನ್ನೊಬ್ಬರು ಸಿಎಂ ಕುರ್ಚಿ ಎಳೆಯುತ್ತಿದ್ದಾರೆ: ಅಮಿತ್ ಶಾ

ಭಿಗಿ ಭದ್ರತೆ:
ರೋಡ್ ಶೋ ಹಿನ್ನೆಲೆಯಲ್ಲಿ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ರೋಡ್ ಶೋಗು ಮುನ್ನವೇ ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳಗಳಿಂದ ತಪಾಸಣೆ ನಡೆಸಲಾಗಿದೆ. ಇದನ್ನೂ ಓದಿ: ಕುಮಾರಸ್ವಾಮಿಗೆ ಆಧುನಿಕ ತಂತ್ರಜ್ಞಾನದಲ್ಲಿ ಆಪರೇಷನ್ ಮಾಡಲಾಗಿದೆ: ಡಾ.ಮಂಜುನಾಥ್‌

Share This Article