ನಾನಿ ನಟನೆಯ 33ನೇ ಸಿನಿಮಾ ಅನೌನ್ಸ್ : ಒಂದಾಯ್ತು ‘ದಸರಾ’ ಜೋಡಿ

Public TV
1 Min Read
Nani 1

ಸರಾ ಮೂಲಕ ಧಮಾಕ ಎಬ್ಬಿಸಿದ್ದ ನ್ಯಾಚುರಲ್ ಸ್ಟಾರ್ ನಾನಿ (Nani) ಮತ್ತೊಮ್ಮೆ ಅದೇ ತಂಡದ ಜೊತೆ ಕೈ ಜೋಡಿಸಿದ್ದಾರೆ. ನಾನಿ ಅಭಿನಯಿಸ್ತಿರುವ 33ನೇ ಸಿನಿಮಾ (New film)  ಘೋಷಣೆಯಾಗಿದೆ.  ದಸರಾಗೆ ಆಕ್ಷನ್ ಕಟ್ ಹೇಳಿ ಮೊದಲ ಚಿತ್ರದಲ್ಲೇ ನಿರ್ದೇಶಕರಾಗಿ ಖ್ಯಾತಿ ಗಳಿಸಿರುವ ಶ್ರೀಕಾಂತ್ ಒಡೆಲಾ, ನಿರ್ಮಾಪಕ ಸುಧಾಕರ್ ಚೆರುಕುರಿ ಹಾಗೂ ನಾನಿ ಎರಡನೇ ಬಾರಿಗೆ ಒಂದಾಗಿದ್ದಾರೆ. ಈ ಕ್ರೇಜಿ ಕಾಂಬೋದ ಹೊಸ ಪ್ರಾಜೆಕ್ಟ್ ಫಸ್ಟ್ ಲುಕ್ ರಿವೀಲ್ ಆಗಿದೆ.

Nani 2

ಬಾಯಲ್ಲಿ ಸಿಗರೇಟ್, ಸಖತ್ ರಗಡ್ ಲುಕ್ ನಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಪೋಸ್ಟರ್ ನಲ್ಲಿ ಸಾಕಷ್ಟು ಸಂಖ್ಯೆಯ ಜನರನ್ನು ಕೂಡ ತೋರಿಸಲಾಗಿದೆ. ಕ್ರಾಂತಿಯು ಪ್ರಾರಂಭವಾಗುವ ಮೊದಲು ಹಿಂಸಾಚಾರವು ಅದರ ಸರಿಯಾದ ರೂಪವನ್ನು ಪಡೆಯುತ್ತದೆ. ಮತ್ತೊಂದು ಪವರ್ ಪ್ಯಾಕ್ಡ್ ಆಕ್ಷನ್ ನೊಂದಿಗೆ ನಾನಿ ಪರಿಚಯ ಎಂದು ಶ್ರೀಕಾಂತ್ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ತಿಳಿಸಿದ್ದಾರೆ.

Nani 2

ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ (SLV ಸಿನಿಮಾಸ್) ನಡಿ ಸುಧಾಕರ್ ಚೆರುಕುರಿ ನಾನಿ 33ನೇ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.  ನಾನಿ ಈ ಚಿತ್ರದಲ್ಲಿ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 2025ಕ್ಕೆ ಸಿನಿಮಾ ತೆರೆಗೆ ತರೋದಿಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

‘ದಸರಾ’ ಸಿನಿಮಾ ತೆರೆಕಂಡು ಒಂದು ವರ್ಷವಾಗಿದೆ. ಈ ಖುಷಿಯಲ್ಲಿ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಲಾಗಿದೆ. ಸದ್ಯ ನಾನಿ 33 ಎಂದು ಟೈಟಲ್ ಇಡಲಾಗಿದೆ. ಕಳೆದ ವರ್ಷ ತೆರೆಗೆ ಬಂದಿದ್ದ ಮಾಸ್ ಆಕ್ಷನ್ ಎಂಟರ್ ಟೈನರ್ ದಸರಾ ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಬೇಟೆಯಾಡಿತ್ತು.

Share This Article