‘ಬಿಗ್ ಬಾಸ್’ (Bigg Boss Kannada 7) ಖ್ಯಾತಿಯ ಕಿಶನ್ ಬಿಳಗಲಿ (Kishen Bilagali) ಇದೀಗ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಬಾಲಿವುಡ್ ಹೀರೋರಂತೆಯೇ ಕಿಶನ್ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಶನ್ ನಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಮೋಡಿ ಮಾಡುತ್ತಿದೆ.
ನಟ ಕಮ್ ಡ್ಯಾನ್ಸರ್ ಕಿಶನ್ ತಮ್ಮ ಹೊಸ ಲುಕ್ ಮೂಲಕ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದಾರೆ. ಬಿಳಿ ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್ ಹೀರೋರಂತೆ ಮಿಂಚಿದ್ದಾರೆ. ನಟನ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ:‘ಮಂಜ್ಞುಮ್ಮೆಲ್ ಬಾಯ್ಸ್’ ಚಿತ್ರತಂಡವನ್ನು ಮನೆಗೆ ಆಹ್ವಾನಿಸಿ ಭೇಷ್ ಎಂದ ತಲೈವಾ
ಕಿಶನ್ ಬಿಳಗಲಿ ಕೂಲ್ ಅನಿಸೋ ಫೊಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ. ವೈಟ್ ಶರ್ಟ್ & ವೈಟ್ ಕೋಟ್ ಧರಿಸಿಕೊಂಡು ಸಖತ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಕಣ್ಣಿಗೆ ಕಪ್ಪು ಕನ್ನಡಕ ಧರಿಸಿಕೊಂಡು ಇನ್ನಷ್ಟು ಮಸ್ತ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಕಿಶನ್ ಲುಕ್ ನೋಡಿ ಬಾಲಿವುಡ್ ನಟನ ಹಾಗೆ ಇದ್ದೀರಾ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್ ಹಾಕ್ತಿದ್ದಾರೆ ನೆಟ್ಟಿಗರು.
‘ಬಿಗ್ ಬಾಸ್ ಕನ್ನಡ 7’ರಲ್ಲಿ ಕಿಶನ್ ಬಿಳಗಲಿ ಸ್ಪರ್ಧಿಯಾಗಿದ್ದರು. ಈ ಸೀಸನ್‌ನಲ್ಲಿ ಶೈನ್ ಶೆಟ್ಟಿ ವಿನ್ನರ್ ಆಗಿದ್ದರು. ಕಿಶನ್ ಕೂಡ ಉತ್ತಮ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಟಾಸ್ಕ್‌ಗಳಲ್ಲಿ ಮುಂದಿದ್ದರು.
ಈ ಶೋ ನಂತರ ಹಿಂದಿ ಡ್ಯಾನ್ಸ್ ಶೋ ಸೇರಿದಂತೆ ಸದಾ ಸೋಷಿಯಲ್ ಮೀಡಿಯಾದಲ್ಲಿ ಹೊಸ ರೀಲ್ಸ್ ಮಾಡುವ ಮೂಲಕ ಕಿಶನ್ ಹೈಲೈಟ್ ಆಗಿದ್ದಾರೆ.