ಸಮಾಜದಲ್ಲಿ ಬದಲಾವಣೆ ತರಲು ಕಾಂಗ್ರೆಸ್‌ ಸೇರಲು ಚಿಂತನೆ: ನಿಶಾ ಯೋಗೇಶ್ವರ್‌

Public TV
1 Min Read
Nisha Yogeshwar

ರಾಮನಗರ: ಸಮಾಜದಲ್ಲಿ ಕೆಲ ಬದಲಾವಣೆಗಳನ್ನ ತರುವ ನಿಟ್ಟಿನಲ್ಲಿ ಕಾಂಗ್ರೆಸ್ (Congress) ಸೇರಲು ಚಿಂತಿಸಿದ್ದೇನೆ ಎಂದು ಮಾಜಿ ಸಚಿವ ಯೋಗೇಶ್ವರ್‌ ಪುತ್ರಿ ನಿಶಾ (Nisha Yogeshwar) ಹೇಳಿದ್ದಾರೆ.

ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ರಾಜಕೀಯಕ್ಕೆ (Politics) ಬರಬೇಕು ಎನ್ನುವುದು ನನ್ನ ವೈಯಕ್ತಿಕ ಆಯ್ಕೆ. ನಾನು ಪ್ರಬುದ್ಧಳು, ನನಗೆ ನನ್ನದೇ ಆದ ಕನಸುಗಳಿವೆ. ಈಗಿರುವ ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ ಸೂಕ್ತ ಎನ್ನಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಬಹುಶ: ಕೇಜ್ರಿವಾಲ್‌ ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು, ಅಂದು ಹುತಾತ್ಮರಾಗಿದ್ದ ಅವರು ಈಗಲೂ ಹೋರಾಡುತ್ತಿದ್ದಾರೆ: ಸುನಿತಾ ಕೇಜ್ರಿವಾಲ್‌

 

ಸೇರ್ಪಡೆ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಿದ್ದೇನೆ. ಅದಕ್ಕೆ ಸಮಯ ಬೇಕು ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುತ್ತೇನೆ. ಈ ಬಗ್ಗೆ ನಮ್ಮ ಮನೆಯಲ್ಲೂ ಚರ್ಚೆ ಆಗಿದ್ದು, ಮನೆಯವರ ಸಮ್ಮತಿಯಿಂದಲೇ ನಾನು ವೈಯಕ್ತಿಕ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದರು.

ಸದ್ಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ನಾನು ಯಾವುದೇ ಪಕ್ಷದ ಪರ ಪ್ರಚಾರ ಮಾಡುವುದಿಲ್ಲ. ನಾನು ಇನ್ನೂ ಕಾಂಗ್ರೆಸ್ ಸೇರ್ಪಡೆ ಆಗಿಲ್ಲ. ಮುಂದೆ ಕಾಂಗ್ರೆಸ್ ಸೇರ್ಪಡೆ ಆದ ಬಳಿ ಪಕ್ಷ ಕೊಡುವ ಜವಾಬ್ದಾರಿ ಸ್ವೀಕರಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಯ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ. ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದು ಹೇಳಿದರು.

 

Share This Article