‘ಕಲ್ಪನಾ 2’ ಚಿತ್ರದ ಖಳನಟ ಪ್ರಕಾಶ್ ಹೆಗ್ಗೋಡು ನಿಧನ

Public TV
1 Min Read
prakash heggodu

ರಂಗಭೂಮಿ ಮತ್ತು ಹಲವು ಸಿನಿಮಾಗಳಲ್ಲಿ ನಟಿಸಿದ ಪ್ರಕಾಶ್ ಹೆಗ್ಗೋಡು (Prakash Heggodu) ಇಂದು (ಮಾ.30) ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಇದೀಗ ಚಿಕಿತ್ಸೆ ಫಲಿಸದೇ 58 ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.

prakash heggodu 1

ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಪ್ರಕಾಶ್ ಹೆಗ್ಗೋಡು ಚಿಕಿತ್ಸೆ ಪಡೆಯುತ್ತಿದ್ದರು. ಈಗ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಅವರ ಸಾವಿನ ಸುದ್ದಿ ಕೇಳಿ ಆಪ್ತರು, ಸಿನಿಮಾ ನಟ-ನಟಿಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಪ್ರಕಾಶ್ ಹೆಗ್ಗೋಡು ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಪುರಪ್ಪೆಮನೆಯವರಾಗಿದ್ದಾರೆ. ನಾಳೆ (ಮಾರ್ಚ್ 31) ಅವರ ಅಂತಿಮ ದರ್ಶನವನ್ನು ಅವರ ಸ್ವಗೃಹವಾದ ಪುರಪ್ಪೆಮನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆಪ್ತರು, ಊರಿನ ಜನರಿಗೆ ಅಂತಿಮ ದರ್ಶನ ಪಡೆಯಬಹುದಾಗಿದೆ. ಇದನ್ನೂ ಓದಿ:ಪ್ಯಾರಿಸ್‌ನಲ್ಲಿ ಪತಿಗೆ ಲಿಪ್‌ಲಾಕ್ ಮಾಡಿದ ‘ಕಭಿ ಖುಷಿ ಕಭಿ ಗಮ್’ ನಟಿ

ಸಂತ, ಭಾಗ್ಯದ ಬಳೆಗಾರ, ಕಲ್ಪನಾ 2 (Kalpana 2), ವೀರು, ಕಲಾಸಿಪಾಳ್ಯ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ಪ್ರಕಾಶ್ ಹೆಗ್ಗೋಡು ನಟಿಸಿ ಸೈ ಎನಿಸಿಕೊಂಡಿದ್ದರು.

Share This Article