ಸಾವರ್ಕರ್ ಪತ್ನಿ ಪಾತ್ರಕ್ಕೆ ನಯಾಪೈಸ್ ಸಂಭಾವನೆ ಪಡೆಯದ ಅಂಕಿತಾ

Public TV
1 Min Read
Ankita Lokhande 1

ಬಿಗ್ ಬಾಸ್ ಸ್ಪರ್ಧಿ ಹಾಗೂ ಹೆಸರಾಂತ ನಟಿ ಅಂಕಿತಾ ಲೋಖಂಡೆ (Ankita Lokhande) ದುಡ್ಡು ತಗೆದುಕೊಳ್ಳದೇ ಯಾವುದೇ ಕೆಲಸ ಮಾಡುವುದಿಲ್ಲ ಎನ್ನುವ ಮಾತಿತ್ತು. ಆದರೆ, ಅವರು ಅದನ್ನು ಸುಳ್ಳು ಮಾಡಿದ್ದಾರೆ. ವೀರ ಸಾವರ್ಕರ್ ಸಿನಿಮಾಗಾಗಿ ಅವರು ಸಂಭಾವನೆಯಾಗಿ ನಯಾಪೈಸೆ ಕೂಡ ಪಡೆದಿಲ್ಲವೆಂದು ನಿರ್ಮಾಪಕರು ತಿಳಿಸಿದ್ದಾರೆ. ಸಾವರ್ಕರ್ ಪತ್ನಿ ಪಾತ್ರ ಅಂದಾಗ, ನನ್ನದೊಂದು ಬೇಡಿಕೆ ಇದೆ ಅದಕ್ಕೆ ಒಪ್ಪಿದರೆ ಮಾತ್ರ ಪಾತ್ರ ಮಾಡುತ್ತೇನೆ ಎಂದರಂತೆ ಅಂಕಿತಾ.

veer savarkar

ನಟಿ ಇಟ್ಟ ಬೇಡಿಕೆ ಏನಿರಬಹುದು ಎನ್ನುವ ಗೊಂದಲ ನಿರ್ಮಾಪಕರಿಗೆ ಆಗಿತ್ತಂತೆ. ಆದರೆ, ಈ ಸಿನಿಮಾಗಾಗಿ ನಾನು ಯಾವುದೇ ಸಂಭಾವನೆ ಪಡೆಯುವುದಿಲ್ಲ. ಉಚಿತವಾಗಿ ನಟಿಸುತ್ತೇನೆ. ಅದಕ್ಕೆ ಒಪ್ಪಿದರೆ ಮಾತ್ರ ಪಾತ್ರ ಮಾಡುತ್ತೇನೆ ಅಂದರಂತೆ ಅಂಕಿತಾ. ಇದು ನಟಿ ಬದ್ಧತೆ ಎಂದು ನಿರ್ಮಾಪಕರು ಹೇಳಿದ್ದಾರೆ.

Randeep Hooda

ನಾನಾ ಕಾರಣಗಳಿಂದ ಅತೀ ನಿರೀಕ್ಷೆ ಮೂಡಿಸಿದ್ದ ‘ಸ್ವಾತಂತ್ರ ವೀರ್ ಸಾವರ್ಕರ್’ (Savarkar) ಸಿನಿಮಾ ಇತ್ತೀಚೆಷ್ಟೇ ಬಿಡುಗಡೆ ಆಗಿದೆ. ಆದರೆ, ಅಂದುಕೊಂಡಷ್ಟು ಚಿತ್ರಕ್ಕೆ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನುವುದು ಬಾಕ್ಸ್ ಆಫೀಸಿಗೆ (Box Office) ಹರಿದು ಬಂದ ಹಣವೇ ಹೇಳುತ್ತಿದೆ. ಮೊದಲ ದಿನದ ಕಲೆಕ್ಷನ್ 1.15 ಲಕ್ಷ ರೂಪಾಯಿ ಬಂದಿತ್ತು. ನಂತರದ ದಿನಗಳಲ್ಲಿ ಅಷ್ಟೇನೂ ಈ ಪ್ರಮಾಣ ಏರಿಲ್ಲ.

Randeep Hooda 4

ವಿವಾದಿತ ಚಿತ್ರಗಳು ಬಂದಾಗ ಜನರು ಅದನ್ನು ಮುಗಿಬಿದ್ದು ನೋಡಿ ಬಾಕ್ಸ್ ಆಫೀಸ್ ಕೂಡ ತುಂಬಿಸಿದ್ದಾರೆ. ಅದರಲ್ಲೂ ದಿ ಕಾಶ್ಮೀರ ಫೈಲ್ಸ್, ದಿ ಕೇರಳ ಸ್ಟೋರಿ ಚಿತ್ರಗಳನ್ನು ಸಖತ್ತಾಗಿಯೇ ಪ್ರೇಕ್ಷಕರಿಗೆ ಪ್ರಮೋಟ್ ಮಾಡಿದರು. ಆದರೆ, ವೀರ ಸಾವರ್ಕರ್ ಚಿತ್ರವನ್ನು ಅಷ್ಟಾಗಿ ಪ್ರೇಕ್ಷಕರು ಅಪ್ಪಿಕೊಂಡಿಲ್ಲ.

 

ರಣ್ ದೀಪ್ ಹೂಡ (Randeep Hooda) ನಿರ್ದೇಶನದ ಹಾಗೂ ನಟನೆಯಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ನಿರ್ದೇಶಕರ ಕೆಲಸವನ್ನು ಪ್ರೇಕ್ಷಕ ಮೆಚ್ಚಿಕೊಂಡಿದ್ದಾನೆ.  ರಣ್ ದೀಪ್ ಈ ಸಿನಿಮಾದಲ್ಲಿ ಸಾವರ್ಕರ್ ಪಾತ್ರ ಮಾಡಿದ್ದರೆ, ಅವರ ಪತ್ನಿಯಾಗಿ ಅಂಕಿತಾ ಲೋಖಂಡೆ ನಟಿಸಿದ್ದಾರೆ. ಕಲಾ ನಿರ್ದೇಶಕರು ಆ ಕಾಲವನ್ನು ಚಿತ್ರದಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಆದರೂ, ಪ್ರೇಕ್ಷಕ ಮಾತ್ರ ತುಂಬಿದ ಪ್ರದರ್ಶನಕ್ಕೆ ಸಾಕ್ಷಿಯಾಗಿಲ್ಲ.

Share This Article