Kalki 2898 AD: ಪ್ರಭಾಸ್ ಸಿನಿಮಾದಲ್ಲಿ ಹೇಗಿರಲಿದೆ ಕಮಲ್ ಹಾಸನ್ ಪಾತ್ರ?

Public TV
1 Min Read
kamal haasan 1 1

ಲಾರ್ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರದ ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಸ್ಟಾರ್ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಸೂಪರ್ ಸ್ಟಾರ್ ಬಿಗ್ ಬಿ ಜೊತೆ ತಮಿಳಿನ ಸ್ಟಾರ್ ನಟ ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾದ್ರೆ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ಸ್ವತಃ ಕಮಲ್ ಹಾಸನ್ ಅವರೇ ರಿವೀಲ್ ಮಾಡಿದ್ದಾರೆ.

Kamal Haasan with Amitabh Bachchan 3ಕಲ್ಕಿ ಪ್ರಭಾಸ್ (Prabhas) ಎದುರು ಕಮಲ್ ಹಾಸನ್ (Kamal Haasan) ವಿಲನ್ ಆಗಿ ಘರ್ಜಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ವಿಚಾರ ಸುಳ್ಳು ಎಂದು ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ, 2 ನಿಮಿಷಗಳ ಕಾಲ ಕಮಲ್ ನಟಿಸಿದ್ದಾರೆ ಎನ್ನಲಾಗಿದೆ.

kamal haasan vikram film 5

‘ಕಲ್ಕಿ 2898 ಎಡಿ’ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇದೇ ಜುಲೈನಲ್ಲಿ ಪ್ರಭಾಸ್ ನಟನೆಯ ಈ ಚಿತ್ರ ರಿಲೀಸ್ ಆಗಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇದನ್ನೂ ಓದಿ:‘ಪುಷ್ಪ’ ಡೈರೆಕ್ಟರ್ ಜೊತೆ ಮತ್ತೆ ಕೈ ಜೋಡಿಸಿದ ರಾಮ್ ಚರಣ್

ಪ್ರಭಾಸ್ ಈ ಚಿತ್ರಕ್ಕೆ ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ (Deepika Padukone) ನಟಿಸಿದ್ದಾರೆ. ಬಹುಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬಂದಿದೆ.

Share This Article