Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸೆಲೆಬ್ರಿಟಿಗಳ ಬೆಂಬಲದೊಂದಿಗೆ ಕಳೆಗಟ್ಟಿಕೊಂಡ ಕೆರೆಬೇಟೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಸೆಲೆಬ್ರಿಟಿಗಳ ಬೆಂಬಲದೊಂದಿಗೆ ಕಳೆಗಟ್ಟಿಕೊಂಡ ಕೆರೆಬೇಟೆ!

Cinema

ಸೆಲೆಬ್ರಿಟಿಗಳ ಬೆಂಬಲದೊಂದಿಗೆ ಕಳೆಗಟ್ಟಿಕೊಂಡ ಕೆರೆಬೇಟೆ!

Public TV
Last updated: March 24, 2024 11:58 am
Public TV
Share
2 Min Read
Kerebete 2 3
SHARE

ಕನ್ನಡ ಚಿತ್ರರಂಗದಲ್ಲೀಗ ಎಲ್ಲ ರೀತಿಯಲ್ಲಿಯೂ ಚೆಂದಗೆ ಮೂಡಿ ಬಂದಿರುವ ಸಿನಿಮಾಗಳನ್ನು ಉಳಿಸಿಕೊಳ್ಳಲೂ ಹೋರಾಟ ನಡೆಸುವಂಥಾ ಸ್ಥಿತಿಯೊಂದು ಚಾಲ್ತಿಯಲ್ಲಿದೆ. ನೋಡಿದವರೆಲ್ಲ ಸದಭಿಪ್ರಾಯ ವ್ಯಕ್ತಪಡಿಸಿದರೂ ಕೂಡಾ ವಾರದಿಂದ ವಾರವನ್ನು ದಾಟಿಕೊಳ್ಳುವುದೇ ಕಷ್ಟವೆಂಬ ಈ ವಾತಾವರಣದಲ್ಲಿ ‘ಕೆರೆಬೇಟೆ’ (Kerebete) ಚಿತ್ರಕ್ಕೆ ಇದೀಗ ಚಿತ್ರರಂಗವೇ ಸಾಥ್ ಕೊಟ್ಟಂತಾಗಿದೆ. ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿರುವ ಈ ಚಿತ್ರ, ಆರಂಭದಿಂದಲೂ ನೆಲಮೂಲದ ಕಥೆಯೊಂದಿಗೆ ಸುದ್ದಿ ಕೇಂದ್ರದಲ್ಲಿತ್ತು. ಹಾಗೆ ಹರಳುಗಟ್ಟಿಕೊಂಡಿದ್ದ ನಿರೀಕ್ಷೆಗಳಿಗೆ ತಕ್ಕುದಾಗಿ ಮೂಡಿ ಬಂದಿದ್ದ ‘ಕೆರೆಬೇಟೆ’ಗೆ ನಾನಾ ಸವಾಲುಗಳು ಎದುರಾಗಿದ್ದವು. ಇದೀಗ ಅದೆಲ್ಲವನ್ನೂ ಸಮರ್ಥವಾಗಿ ದಾಟಿಕೊಂಡಿರುವ ಈ ಸಿನಿಮಾ ಎರಡನೇ ವಾರದ ಹೊತ್ತಿಗೆಲ್ಲ ಭರ್ಜರಿ ಪ್ರದರ್ಶನದತ್ತ ದಾಪುಗಾಲಿಡುತ್ತಿದೆ.

Kerebete 1 2ರಾಜ್ ಗುರು ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಚಿತ್ರವಾದ ‘ಕೆರೆಬೇಟೆ’ ಇಂದಿಗೆ ಚೇತರಿಸಿಕೊಂಡು, ಮುನ್ನುಗ್ಗುತ್ತಿರೋದರ ಹಿಂದೆ ನಟ ನಟಿಯರ ಬೆಂಬಲವಿದೆ. ಒಂದೊಳ್ಳೆ ಕಂಟೆಂಟು ಹೊಂದಿದ್ದರೂ, ಕನ್ನಡದ ಮಟ್ಟಿಗೆ ಅಪರೂಪದ್ದೆಂಬಂಥಾ ಕಥೆಯನ್ನೊಳಗೊಂಡಿದ್ದರೂ ಕೊಂಚ ಹಿನ್ನಡೆ ಕಂಡಾಗ ಚಿತ್ರರಂಗದ ಮಂದಿ ಈ ಸಿನಿಮಾವನ್ನು ಗೆಲ್ಲಿಸುವ ಪಣತೊಟ್ಟಂತೆ ಅಖಾಡಕ್ಕಿಳಿದಿದ್ದರು. ತಮ್ಮ ಸಿನಿಮಾದ ಬ್ಯುಸಿಯ ನಡುವೆಯೂ ಧ್ರುವ ಸರ್ಜಾ (Dhruva Sarja) ‘ಕೆರೆಬೇಟೆ’ಯ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ, ಚಿತ್ರಮಂದಿರಗಳಿಗೆ ಬಂದು ನೋಡುವಂತೆ ಬಿನ್ನವಿಸಿಕೊಂಡಿದ್ದರು. ನಂತರದಲ್ಲಿ ಖುದ್ದು ಧ್ರುವ ಸರ್ಜಾ ಅವರೇ ಕೆರೆಬೇಟೆಯನ್ನು ವೀಕ್ಷಿಸಿ ಥ್ರಿಲ್ ಆಗಿದ್ದರಲ್ಲದೇ, ಒಳ್ಳೆಯ ಅಭಿಪ್ರಾಯ ಹಂಚಿಕೊಂಡಿದ್ದರು.

Kerebete 8ಆ ನಂತರದಲ್ಲಿ ಡಾರ್ಲಿಂಗ್ ಕೃಷ್ಣ (Darling Krishna), ಮಿಲನಾ (Milana) ದಂಪತಿ ಕೆರೆಬೇಟೆಯನ್ನು ನೋಡಿ ಖುಷಿಗೊಂಡಿದ್ದರು. ಆ ನಂತರ ಅಜೇಯ್ ರಾವ್, ಚೈತ್ರಾ ಆಚಾರ್, ಚೇತನ್ ಅಹಿಂಸಾ ಮುಂತಾದವರೂ ಕೆರೆಬೇಟೆಯನ್ನು ನೋಡಿ ಮುದಗೊಂಡಿದ್ದಾರೆ. ಅವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಕ್ಷಣಕ್ಕೂ ನಟ ನಟಿಯರನೇಕರು ಈ ಸಿನಿಮಾವನ್ನು ವೀಕ್ಷಿಸುಜತ್ತಿದ್ದಾರೆ. ವಿಶೇಷವೆಂದರೆ, ಹೀಗೆ ಸಿನಿಮಾ ನೋಡಿ ಸದಭಿಪ್ರಾಯ ಹಂಚಿಕೊಳ್ಳುತ್ತಾ ಕೆರೆಬೇಟೆಯನ್ನು ಗೆಲ್ಲಿಸಲು ಸೆಲೆಬ್ರಿಟಿಗಳು ಟೊಂಕ ಕಟ್ಟಿ ನಿಂತ ಬೆನ್ನಲ್ಲೇ, ಪ್ರೇಕ್ಷಕರೂ ಕೂಡಾ ‘ಕೆರೆಬೇಟೆ’ (Kerebete) ನೋಡಲು ಮುನ್ನುಗ್ಗುತ್ತಿದ್ದಾರೆ.

Kerebete 1 1

ಎರಡನೇ ವಾರದ ಹೊತ್ತಿಗೆಲ್ಲ ಕೆರೆಬೇಟೆಯ ಪ್ರದರ್ಶನ ರೋಮಾಂಚಕವಾಗಿಯೇ ಚೇತರಿಕೆ ಕಾಣುತ್ತಿದೆ. ಯಾವುದ್ಯಾವುದೋ ಪ್ರೇರಣೆಯಿಂದ ಈ ಸಿನಿಮಾ ನೋಡಿದವರೆಲ್ಲ ಬೇಷರತ್ತಾಗಿ ಮೆಚ್ಚಿಕೊಂಡಿದ್ದಾರೆ. ಈಗಂತೂ ಮೆಲ್ಲಗೆ ಬಾಯಿಂದ ಬಾಯಿಗೆ ಕೆರೆಬೇಟೆಯ ಆಂತರ್ಯದ ಖದರ್ ಹಬ್ಬಿಕೊಳ್ಳುತ್ತಿದೆ. ಹೀಗೆ ಪ್ರೇಕ್ಷಕರ ವಲಯದಲ್ಲಿ ಹಬ್ಬಿಕೊಳ್ಳುವ ಒಳ್ಳೆ ಮಾತುಗಳು ಯಾವುದೇ ಸಿನಿಮಾಗಳ ಪಾಲಿಗೆ ಗೆಲುವಿನ ನಿಖರ ಸೂಚನೆ. ಸದ್ಯದ ಮಟ್ಟಿಗೆ ‘ಕೆರೆಬೇಟೆ’ ಚಿತ್ರದ ಸುತ್ತ ಅಂಥಾದ್ದೊಂದು ಪಾಸಿಟಿವ್ ವಾತಾವರಣ ಹಬ್ಬಿಕೊಂಡಿದೆ. ಇದರಿಂದಾಗಿ ಗೌರಿಶಂಕರ್, ನಿರ್ದೇಶಕ ರಾಜ್ ಗುರು, ನಿರ್ಮಾಪಕ ಜೈಶಂಕರ್ ಪಟೇಲ್ ಸೇರಿದಂತೆ ಒಂದಿಡೀ ಚಿತ್ರತಂಡದ ಶ್ರಮ ಸಾರ್ಥಕಗೊಂಡಂತಾಗಿದೆ. ಸಾಲು ಸಾಲಾಗಿ ಎದುರಾದ ಸವಾಲುಗಳನ್ನೆಲ್ಲ ಎದೆಗುಂದದೆ ಎದುರಿಸಿದ ಫಲವಾಗಿಯೇ ಇದೀಗ ಚಿತ್ರಮಂದಿರ ತುಂಬಿಕೊಳ್ಳುತ್ತಿದೆ.

kerebete

ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡಾ ತಾನೇ ತಾನಾಗಿ ಕೆರೆಬೇಟೆಯ ಬಗ್ಗೆ ಚೆಂದದ ಅಭಿಪ್ರಾಯ, ವಿಮರ್ಶೆಗಳು ಹರಿದಾಡುತ್ತಿವೆ. ಇದೆಲ್ಲವೂ ಕೂಡಾ ಸದ್ಯದ ಮಟ್ಟಿಗೆ ಒಳಿತಿನ ಮುನ್ಸೂಚನೆಯಾಗಿ ಕಾಣಿಸುತ್ತಿದೆ. ಅಷ್ಟಕ್ಕೂ ಇಂಥಾ ಸಿನಿಮಾಗಳನ್ನು ಗೆಲ್ಲಿಸಿಕೊಳ್ಳುವ ಜರೂರತ್ತಿದೆ. ಭಿನ್ನ ಪ್ರಯತ್ನಗಳನ್ನು ಸದಾ ಬೆಂಬಲಿಸುವ ಪ್ರೇಕ್ಷಕರ ಕೃಪೆಯೂ ಇಂಥಾ ಸಿನಿಮಾಗಳತ್ತ ಹರಿಯಬೇಕಿದೆ. ಕೆರೆಬೇಟೆ ಎಂಬುದು ಮಲೆನಾಡು ಸೀಮೆಯ ನೆಲದ ಘಮಲಿನ ಚಿತ್ರ. ಮೇಕಿಂಗ್ ಸೇರಿದಂತೆ ಎಲ್ಲದರಲ್ಲಿಯೂ ಮೇಲ್ಮಟ್ಟದಲ್ಲಿರುವ ಕೆರೆಬೇಟೆ, ಎಲ್ಲ ವರ್ಗದ ಪ್ರೇಕ್ಷಕರಿಗೂ ಪಥ್ಯವಾಗಬಲ್ಲ ಚಿತ್ರ. ಇಂಥಾ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸೋದು ಚಿತ್ರರಂಗದ ಭವಿಷ್ಯದ ದೃಷ್ಟಿಯಿಂದಲೂ ತರ್ತುನ ಸಂಗತಿ ಎಂಬ ಅಭಿಪ್ರಾಯ ಎಲ್ಲ ದಿಕ್ಕುಗಳಿಂದಲೂ ಹೊಮ್ಮುತ್ತಿದೆ.

TAGGED:dhruva sarjaGowrishankarkerebete filmsandalwoodಕೆರೆಬೇಟೆ ಸಿನಿಮಾಗೌರಿಶಂಕರ್ಧ್ರುವ ಸರ್ಜಾ
Share This Article
Facebook Whatsapp Whatsapp Telegram

Cinema news

Pratibha Shetty Samriddhi Ram Karunya Ram
ಮೋಸ ಮಾಡಿದವ್ರು ಉದ್ಧಾರ ಆಗಲ್ಲ – ಸಮೃದ್ಧಿ ರಾಮ್‌ ವಿರುದ್ಧ ಪ್ರತಿಭಾ ಶೆಟ್ಟಿ ಗರಂ
Bengaluru City Cinema Crime Karnataka Latest States Top Stories
karanya ram samruddhi
`ಬೆಟ್ಟಿಂಗ್‌ನಿಂದ ನನ್ನ ಫ್ಯಾಮಿಲಿ ಕಥೆ ಹೀಗಾಯ್ತು’: ಕೊನೆಗೂ ಸತ್ಯ ಬಾಯ್ಬಿಟ್ಟ ಕಾರುಣ್ಯ ರಾಮ್?
Cinema Latest Main Post Sandalwood
Pushpa2
ಜಪಾನ್‌ನಲ್ಲೂ ಪುಷ್ಪಾ ಹವಾ – ಪ್ರೀಮಿಯರ್‌ಗೆ ಭರ್ಜರಿ ರೆಸ್ಪಾನ್ಸ್..!
Cinema Latest South cinema Top Stories
Gill and Ashwini Gowda
ಕಿತ್ತಾಟದಿಂದ ಕ್ಷಮೆಯತ್ತ – ಒಬ್ಬರಿಗೊಬ್ಬರು Sorry ಕೇಳಿ, ನಗುವಿನ ಅಪ್ಪುಗೆ ನೀಡಿದ ಗಿಲ್ಲಿ, ಅಶ್ವಿನಿ
Cinema Latest Main Post Sandalwood TV Shows

You Might Also Like

chamarajanagara leopard dead case accused arrests
Chamarajanagar

ವಿಷವಿಕ್ಕಿ ಚಿರತೆ ಹತ್ಯೆ ಆರೋಪ ಕೇಸ್;‌ ಆರೋಪಿ ದೊರೆಸ್ವಾಮಿ ಅರೆಸ್ಟ್‌

Public TV
By Public TV
15 minutes ago
Raichuru Siddaramanand Swamiji
Districts

ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಸಿದ್ದರಾಮನಂದ ಶ್ರೀಗಳ ಅಂತ್ಯಕ್ರಿಯೆ

Public TV
By Public TV
33 minutes ago
Kodagu Tourist Place
Districts

Kodagu | ಕಳೆದ ವರ್ಷ ಕೊಡಗಿಗೆ 43 ಲಕ್ಷ ಪ್ರವಾಸಿಗರ ಭೇಟಿ

Public TV
By Public TV
52 minutes ago
shidlaghatta City Municipal Council Commissioner Amrutha Gowda receives death threat from Congress Leader Rajeev Gowda 1
Bengaluru City

ಫ್ಲೆಕ್ಸ್‌ ತೆರವು ವಿಚಾರಕ್ಕೆ ಪೌರಾಯುಕ್ತೆಗೆ ಧಮ್ಕಿ; ರಾಜೀವ್‌ ಗೌಡಗೆ ಕೆಪಿಸಿಸಿ ನೋಟಿಸ್‌ ಜಾರಿ

Public TV
By Public TV
1 hour ago
iran protest 1
Latest

ಇರಾನ್‌ನಲ್ಲಿರೋ ಭಾರತೀಯರ ಸ್ಥಳಾಂತರಕ್ಕೆ ಕೇಂದ್ರ ಸಿದ್ಧತೆ; ನಾಳೆ ಮೊದಲ ಬ್ಯಾಚ್‌ ಆಗಮನದ ನಿರೀಕ್ಷೆ

Public TV
By Public TV
1 hour ago
Army Day Thawar Chand Gehlot
Bengaluru City

ಭಾರತೀಯ ಸೇನೆಯು ಯುವ ಪೀಳಿಗೆಗೆ ಮಾದರಿ: ರಾಜ್ಯಪಾಲ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?