ಮಾಜಿ ಸಂಸದ ಸಿಪಿ ಮೂಡಲಗಿರಿಯಪ್ಪ ನಿಧನ

Public TV
1 Min Read
CP Mudalagiriyappa 1

ತುಮಕೂರು: ಮಾಜಿ ಸಂಸದ ಸಿಪಿ ಮೂಡಲಗಿರಿಯಪ್ಪ (CP Mudalagiriyappa) ವಯೋಸಹಜ ಕಾಯಿಲೆಯಿಂದ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

ವಯೋಸಹಜ ಕಾಯಿಲೆಯಿಂದ ಮೂಡಲಗಿರಿಯಪ್ಪ (84) ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಮೃತರು ಪುತ್ರ ಮಾಜಿ ಶಾಸಕ ಸಿಎಂ ರಾಜೇಶ್ ಗೌಡ, ಪುತ್ರಿ ಕವಿತಾ ಹಾಗೂ ಅಪಾರ ಬಂಧು-ಬಾಂಧವರನ್ನು ಅಗಲಿದ್ದಾರೆ. ಇವರ ಅಂತ್ಯಸಂಸ್ಕಾರ ಭಾನುವಾರ (ಮಾ.24) ಬೆಳಗ್ಗೆ 10 ಗಂಟೆಗೆ ಸಿರಾ (Sira) ತಾಲೂಕಿನ ಚಿರತಹಳ್ಳಿಯಲ್ಲಿ ನಡೆಯಲಿದೆ. ಇದನ್ನೂ ಓದಿ: ನಾವು ಗಂಡಸರನ್ನ ನಂಬಲ್ಲ, ಹೆಣ್ಣುಮಕ್ಕಳನ್ನ ನಂಬುತ್ತೇವೆ: ಡಿಕೆಶಿ

ಮೂಲತಃ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದವರಾಗಿದ್ದ ಮೂಡಲಗಿರಿಯಪ್ಪ, ಮೂರು ಬಾರಿ (1989, 1991, 1998) ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು. ಅಲ್ಲದೇ ಒಂದು ಬಾರಿ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಇದನ್ನೂ ಓದಿ: ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಖಚಿತ – ಜೋಶಿ ಭವಿಷ್ಯ

Share This Article