ಮಾತನಾಡುವ ಭರದಲ್ಲಿ ಬಿಜೆಪಿಗೆ 20 ಸೀಟು ಗೆಲ್ಲಿಸಿ ಎಂದ ಡಿಕೆಶಿ

Public TV
2 Min Read
DK SHIVAKUMAR 3

ಬೆಂಗಳೂರು: ಮಾತನಾಡುವ ಭರದಲ್ಲಿ 20 ಸೀಟು ಗೆಲ್ಲಿಸಿ ಬಿಜೆಪಿಗೆ ಸಂದೇಶ ಕಳುಹಿಸಬೇಕು ಎನ್ನುವ ಬದಲು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಬಿಜೆಪಿಯವರಿಗೆ (BJP) 20 ಸೀಟು ಗೆಲ್ಲಿಸಿ ಎಂದು ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ.

ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಂದರ್ಭದಲ್ಲಿ ಡಿಕೆಶಿ ಈ ಹೇಳಿಕೆ ನೀಡಿದ್ದಾರೆ. ಸಭೆಯಲ್ಲಿ ಮಾತನಾಡುತ್ತಾ ಬಿಜೆಪಿಯವರಿಗೆ ಕರ್ನಾಟಕದಲ್ಲಿ 20 ಸೀಟನ್ನು ಗೆಲ್ಲಿಸಿ ಒಂದು ಸಂದೇಶ ಕಳುಹಿಸಬೇಕು ಎಂದು ಡಿಕೆಶಿ ಹೇಳಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದಿದ್ರೆ ಸಿಎಂ ರಾಜೀನಾಮೆ ಕೊಡ್ಬೇಕಾಗುತ್ತೆ: ಎಸ್.ಆರ್. ಶ್ರೀನಿವಾಸ್

ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಗ್ಯಾರಂಟಿ ಜಾರಿ ಸಮಿತಿ ಪದಾಧಿಕಾರಿಗಳ ಸಭೆ ನಡೆಸುತ್ತಿದ್ದು, ಗ್ಯಾರಂಟಿ ಕಮಿಟಿ ಹೇಗೆ ಜನರನ್ನ ತಲುಪಬೇಕು ಎಂಬುದರ ಬಗ್ಗೆ ಸಭೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಬಿಜೆಪಿಯವ್ರನ್ನು ದ್ವೇಷಿಸಬೇಡಿ- ಜೈಲಿನಿಂದ್ಲೇ ಕೇಜ್ರಿವಾಲ್‌ ಸಂದೇಶ ರವಾನೆ

ರಾಜ್ಯದಲ್ಲಿ ರಾಮಮಂದಿರ, ಮೋದಿ (Narendra Modi) ಗಾಳಿ ಇಲ್ಲ ಎಂದು ಸಮೀಕ್ಷೆಯಲ್ಲಿ ಸಾಬೀತಾಗಿದೆ. ನಾವು ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಇದು ಸಾಬೀತಾಗಿದೆ. ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ಸಿದ್ದರಾಮಯ್ಯ (Siddaramaiah) ಹೆಸರಿನಲ್ಲಿ ರಾಮ ಇದ್ದಾನೆ. ನಾವುಗಳು ಕೂಡಾ ಹಿಂದೂಗಳು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು. ಗ್ಯಾರಂಟಿಗಳ (Guarantee) ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮನೆಮನೆಗೆ ಹೋಗಬೇಕು. ಕಮಲ ಕೆರೆಯಲ್ಲಿ ಚೆಂದ, ತೆನೆ ಹೊಲದಲ್ಲಿ ಇದ್ದರೆ, ಈ ದಾನ ಧರ್ಮ ಮಾಡುವ ‘ಕೈ’ ಅಧಿಕಾರದಲ್ಲಿದ್ದರೆ ಒಳ್ಳೆಯದು. ಐದು ಗ್ಯಾರಂಟಿ ಶಕ್ತಿಯಿಂದ ಜನ ತೆನೆ ಎತ್ತಿ ಬಿಸಾಕಿದ್ದಾರೆ. ಸ್ವಾಭಿಮಾನ ಬಿಡಬೇಕು. ನಾವು ಮೊದಲು ಕಾರ್ಯಕರ್ತರಾಗಿದ್ದೇವೆ. ಪಂಚಾಯತ್‌ನಲ್ಲಿ ಲೀಡ್ ಕೊಡಿಸುವ ಕೆಲಸ ಮಾಡಬೇಕು. ಐಡಿ ಕಾರ್ಡ್, ಫೋಟೋ ಅಪ್‌ಲೋಡ್ ಮಾಡಿ ಐಡಿ ಹಾಕಿ ಮನೆ ಮನೆಗೆ ಹೋಗಿ ಗ್ಯಾರಂಟಿ ಬಗ್ಗೆ ಮನವರಿಕೆ ಮಾಡಿ. ರಾಜ್ಯದಲ್ಲಿ 20 ಸೀಟುಗಳನ್ನು ನಾವು ಗೆಲ್ಲುತ್ತಿದ್ದೇವೆ. ಅವರದು ಮೋದಿ ಗ್ಯಾರಂಟಿ ಅಂತೆ. ನಮ್ಮದು ಕಾಂಗ್ರೆಸ್ ಗ್ಯಾರಂಟಿ, ಹಸ್ತದ ಗ್ಯಾರಂಟಿ ಎಂದು ಡಿಕೆಶಿ ತಿಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ – ಸುಮಲತಾ ಟಿಕೆಟ್ ಬಗ್ಗೆ ತೀರ್ಮಾನ ಆಗಿಲ್ಲ: ರಾಧಾ ಮೋಹನ್ ದಾಸ್ ಅಗರವಾಲ್

Share This Article