ಬೆಂಗಳೂರು: ಅಂತರ್ಜಲ ವೃದ್ದಿಗೆ ಬೆಂಗಳೂರಿನ (Bengaluru) 14 ಕೆರೆಗಳಿಗೆ ಜಲಮಂಡಳಿ ತ್ಯಾಜ್ಯ ನೀರನ್ನು ತುಂಬಿಸಿದೆ.
ಬೆಂಗಳೂರು ಜಲ ಮಂಡಳಿಯ (BWSSB) ತ್ಯಾಜ್ಯ ನೀರು ಸಂಸ್ಕರಣ ಘಟಕದಲ್ಲಿ (STP) ಸಂಸ್ಕರಿಸಿದ ನೀರನ್ನು 14 ಕೆರೆಗಳಿಗೆ (Lake) ತುಂಬಿಸುವ ಕೆಲಸ ಈಗ ನಡೆಯುತ್ತಿದೆ. ಇದನ್ನೂ ಓದಿ: ಬಿಜೆಪಿಯಲ್ಲೇ ಇದ್ದು ಶುದ್ದೀಕರಣದ ಕಡೆ ನನ್ನ ನಡೆ: ಡಿವಿಎಸ್ ಘೋಷಣೆ
ನಗರದ 200 ಕೆರೆಗಳಿಗೆ ತ್ಯಾಜ್ಯ ತುಂಬಿಸುವ ಯೋಜನೆ ಹಾಕಿಕೊಂಡಿದ್ದು, ಆರಂಭದಲ್ಲಿ 14 ಕೆರೆಗಳಿಗೆ ತ್ಯಾಜ್ಯ ನೀರು ತುಂಬಿಸಲಾಗುತ್ತಿದೆ.
ಯಾವ ಕೆರೆಗಳಿಗೆ ನೀರು?
ಹಲಸೂರು, ಸಾರಕ್ಕಿ, ಅಗರ, ಹುಳಿ ಮಾವು, ಚಿಕ್ಕ ಬೇಗೂರು, ಮಡಿವಾಳ, ಜಕ್ಕೂರು, ಅಳಾಲಸಂದ್ರ, ಕಲ್ಕೆರೆ, ಚಿಕ್ಕಬಾಣಾವರ, ನಾಯಂಡನಹಳ್ಳಿ, ಮಾದವರ ಕೆರೆಗೆ ನೀರು ತುಂಬಿಸಲಾಗುತ್ತಿದೆ.