ವಾಸುಕಿ ವೈಭವ್ ಕಂಠದಲ್ಲಿ ಕೇಳಿ ‘ತೂತ್ ಕಾಸು’ ಸಾಂಗ್

Public TV
1 Min Read
Thooth Kasu 1

‘ತೂತ್ ಕಾಸು’ (Thooth Kasu) ಸ್ಯಾಂಡಲ್ ವುಡ್ ನಲ್ಲಿ ಸದ್ಯ ರಿಲೀಸ್ ಗೆ ಸಿದ್ಧವಾಗಿರುವ ಸಿನಿಮಾ. ಹೊಸಬರು ಸೇರಿಕೊಂಡು ಮಾಡಿರುವ ಈ ಸಿನಿಮಾ ಇದಾಗಿದ್ದು ಇತ್ತೀಚಿಗಷ್ಟೇ ಚಿತ್ರತಂಡ ಹಾಡು ಮತ್ತು ಟ್ರೈಲರ್ ಬಿಡುಗಡೆ ಮಾಡುವ ನೆಪದಲ್ಲಿ ಮಾಧ್ಯಮದ ಮುಂದೆ ಹಾಜರಾಗಿತ್ತು. ವಿಶೇಷ ಎಂದರೆ ಹಂಸಲೇಖ ಅವರ ದೇಸಿ ಶಾಲೆಯಲ್ಲಿ ಪಳಗಿದ ಒಂದಿಷ್ಟು ಪ್ರತಿಭೆಗಳು ಸೇರಿಕೊಂಡು ಮಾಡಿರುವ ಸಿನಿಮಾ ಇದಾಗಿದೆ.

Thooth Kasu 3

ಕಾಮಿಡಿ ಜಾನರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ರವಿ ತೇಜಸ್ (Ravi Tejas) ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ರವಿತೇಜಸ್ ಅವರಿಗೆ ಇದು ಮೊದಲ ಸಿನಿಮಾ. ‘ತೂತ್ ಕಾಸು’ ಚಿತ್ರದಲ್ಲಿ ನಾಯಕನಾಗಿ ವರುಣ್ ದೇವಯ್ಯ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕಿಯರಾಗಿ ಪ್ರಿಷಾ ಹಾಗೂ ಪ್ರೇರಣ ಭಟ್ ಮಿಂಚಿದ್ದಾರೆ.

Thooth Kasu 2

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರವಿ ತೇಜಸ್ ‘ತೂತ್ ಕಾಸು’ 1942ರಿಂದ 1947ರವರೆಗೆ ಚಲಾವಣೆಯಲ್ಲಿದ್ದ ನಾಣ್ಯ. ಸ್ವಾತಂತ್ರ್ಯ ನಂತರ ತೂತ್ ಕಾಸಿನ ಚುನಾವಣೆಯನ್ನು ನಿಲ್ಲಿಸಲಾಯಿತು. ಸಿನಿಮಾದಲ್ಲಿ ಇದೊಂದು ಕೋಡ್ ವರ್ಡ್ ಆಗಿ ಬಳಸಲಾಗಿದೆ. ನಮ್ಮ ಚಿತ್ರ ಮಾಫಿಯಾ ಗ್ಯಾಂಗ್ ಬಗ್ಗೆ ಇದೆ’ ಎಂದು ಹೇಳಿದರು.

 

ಇನ್ನು ನಾಯಕ ವರುಣ್ ದೇವಯ್ಯ ಮಾತನಾಡಿ, ’10 ವರ್ಷದ ಗ್ಯಾಪ್ ನ ನಂತರ ಮಾಡಿರುವ ಸಿನಿಮಾ ಇದು. ನಾವೆಲ್ಲ ಚಿತ್ರಕ್ಕಾಗಿ ತುಂಬಾ ಎಫರ್ಟ್ ಹಾಕಿದ್ದೇವೆ. ಸಿನಿಮಾ ನೋಡಿ ಸಪೋರ್ಟ್ ಮಾಡಿ’ ಎಂದರು. ಚಿತ್ರದಲ್ಲಿ ವಿನೋದ್ ಆನಂದ್ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

Share This Article