ನಿಮ್ಮ ಜೀವನ ನಮಗೆ ಬಹಳ ಮುಖ್ಯ- ಟವರ್‌ನಿಂದ ಇಳಿಯುವಂತೆ ಜನರಿಗೆ ಮೋದಿ ಮನವಿ

Public TV
2 Min Read
NARENDRA MODI 3

ಅಮರಾವತಿ: ಆಂಧ್ರಪ್ರದೇಶದಲ್ಲಿ (Andhrapradesh) ಇಂದು ನಡೆದ ಎನ್‌ಡಿಎಯ ಮೊದಲ ಚುನಾವಣಾ ರ್ಯಾಲಿ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ವಿದ್ಯುತ್ ಟವರ್‌ನಿಂದ ಕೆಳಗಿಳಿಯುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ನಮಾಡಿದ ಪ್ರಸಂಗ ನಡೆಯಿತು.

ಪ್ರಧಾನಿ ಮೋದಿ ಅವರು ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು (Chandra Babu Naidu) ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ನಟ ಪವನ್ ಕಲ್ಯಾಣ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಅಂತೆಯೇ ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆ ಪಟ್ಟಣದ ಸಮೀಪವಿರುವ ಬೊಪ್ಪುಡಿ ಗ್ರಾಮದಲ್ಲಿ ಸಭೆಯನ್ನುದ್ದೇಶಿಸಿ ಪವನ್‌ ಕಲ್ಯಾಣ್‌ (Pavan Kalyan) ಮಾಡುತ್ತಿದ್ದರು. ಈ ವೇಳೆ ಮೋದಿ (narendra Modi) ಗಮನಸೆಳೆಯಲು ಹಲವಾರು ಮಂದಿ ಲೈಟ್‌ ಟವರ್‌ ಏರಿರುವುದು ಪ್ರಧಾನಿ ಗಮನಕ್ಕೆ ಬಂದಿದೆ. ಕೂಡಲೇ ಮೋದಿಯವರು ಪವನ್‌ ಕಲ್ಯಾಣ್‌ ಬಳಿಯಿಂದ ಮೈಕ್‌ ತೆಗೆದುಕೊಂಡು ಟವರ್‌ನಿಂದ ಕೆಳಗಿಳಿಯುವಂತೆ ಮನವಿ ಮಾಡಿಕೊಂಡರು.

ದಯವಿಟ್ಟು ಯಾರೂ ಟವರ್ ಹತ್ತಬೇಡಿ. ವಿದ್ಯುತ್ ತಂತಿಗಳು ಅಲ್ಲೊಂದು ಇಲ್ಲೊಂದು ಬಿದ್ದಿವೆ. ನಿಮ್ಮ ಜೀವನ ನಮಗೆ ಬಹಳ ಮುಖ್ಯ. ಏನಾದರೂ ಅವಘಡ ಸಂಭವಿಸಿದರೆ ನಮಗೆ ತುಂಬಾ ನೋವಾಗುತ್ತದೆ. ಹೀಗಾಗಿ ದಯವಿಟ್ಟು ಟವರ್‌ನಿಂದ ಕೆಳಗೆ ಇಳಿಯಿರಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ ಜನರು ಟವರ್ ಹತ್ತದಂತೆ ಎಚ್ಚರ ವಹಿಸುವಂತೆ ಪೊಲೀಸ್ ಅಧಿಕಾರಿಗಳು ಸೂಚಿಸಿದರು. ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಹೊಸ ದತ್ತಾಂಶ ರಿಲೀಸ್‌ – ಅತಿಹೆಚ್ಚು ದೇಣಿಗೆ ಪಡೆದ ಪಕ್ಷ ಯಾವುದು?

ಈ ಹಿಂದೆ ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಪ್ರಧಾನಿ ಮೋದಿಯವರ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡುತ್ತಿದ್ದಾಗ ಯುವತಿಯೊಬ್ಬಳು ಲೈಟ್ ಟವರ್ ಅನ್ನು ಏರಿದ್ದಳು. ಈ ವೇಳೆಯೂ ಪ್ರಧಾನಿಯವರು ಆಕೆಯನ್ನು ಕೆಳಗಿಳಿಯುವಂತೆ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಅರುಣಾಚಲ, ಸಿಕ್ಕಿಂ ಅಸೆಂಬ್ಲಿ ಎಲೆಕ್ಷನ್ ಮತ ಎಣಿಕೆ ದಿನಾಂಕ ಬದಲಾವಣೆ

ಪ್ರಧಾನಿ ಮೋದಿ ಅವರು ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಜೊತೆಗೆ ಲೋಕಸಭೆ ಚುನಾವಣೆಯ ಪ್ರಚಾರವನ್ನು ಪ್ರಾರಂಭಿಸಲು ಹೊರಟಿದ್ದಾರೆ. ಚುನಾವಣೆಗೆ ಬಿಜೆಪಿ, ಟಿಡಿಪಿ ಮತ್ತು ಜನಸೇನಾ ಜೊತೆ ಮೈತ್ರಿ ಮಾಡಿಕೊಂಡಿದೆ. 2024ರ ಚುನಾವಣೆಯ ರ್ಯಾಲಿಯಲ್ಲಿ ಮೂವರೂ ನಾಯಕರು ವೇದಿಕೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು.

ಚುನಾವಣೆ: 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 19 ರಂದು ಆರಂಭವಾಗಿ ಜೂನ್ 1 ರಂದು ಮುಕ್ತಾಯವಾಗಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. 1 ನೇ ಹಂತದ ಮತದಾನ ಏಪ್ರಿಲ್ 19 ರಂದು ನಡೆಯಲಿದೆ, ಎರಡನೇ ಹಂತದ ಮತದಾನ ಏಪ್ರಿಲ್ 19 ರಂದು ನಡೆಯಲಿದೆ. ಏಪ್ರಿಲ್ 26, ಮೇ 7 ರಂದು ಮೂರನೇ ಹಂತ, ಮೇ 13 ರಂದು ನಾಲ್ಕನೇ ಹಂತ, ಮೇ 20 ರಂದು 5 ನೇ ಹಂತ, ಮೇ 25 ರಂದು 6 ನೇ ಹಂತ ಮತ್ತು ಜೂನ್ 1 ರಂದು ಕೊನೆಯ ಮತ್ತು 7 ನೇ ಹಂತದ ಮತದಾನ ನಡೆಯಲಿದೆ. ಜೂನ್‌ 4 ರಂದು ಫಲಿತಾಂಶ ಪ್ರಕಟವಾಗಲಿದೆ.

175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆಗೆ ಮೇ 13ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

Share This Article