ವಿದ್ಯಾರ್ಥಿನಿ ನೇಣಿಗೆ ಶರಣು – ಕಳ್ಳತನ ಆರೋಪ ಹೊರಿಸಿ ಸಮವಸ್ತ್ರ ಬಿಚ್ಚಿಸಿ ಪರಿಶೀಲಿಸಿದ್ದಕ್ಕೆ ಆತ್ಮಹತ್ಯೆ?

Public TV
1 Min Read
Student Bagalkot Bagalkot Police

ಬಾಗಲಕೋಟೆ: ತಾಲೂಕಿನ (Bagalkot) ಕದಂಪುರದಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು (Student) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಶಿಕ್ಷಕಿಯೊಬ್ಬರು ಕಳ್ಳತನದ ಆರೋಪ ಮಾಡಿ ಪರಿಶೀಲಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಆರೋಪ ಕೇಳಿ ಬಂದಿದೆ.

ದಿವ್ಯಾ ಬಾರಕೇರ (14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ಮಾ.15ರಂದು ಕದಂಪುರ ಪ್ರೌಢ ಶಾಲೆಯ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ ಅವರ 2 ಸಾವಿರ ರೂ. ಕಳೆದು ಹೋಗಿದ್ದು, ವಿದ್ಯಾರ್ಥಿಗಳ ಬಳಿ ಯಾರು ತೆಗೆದುಕೊಂಡಿದ್ದೀರಿ ಎಂದು ವಿಚಾರಿಸಿದ್ದಾರೆ. ಬಳಿಕ ಕೆಲವು ವಿದ್ಯಾರ್ಥಿನಿಯರ ವಿರುದ್ಧ ಕಳ್ಳತನ ಆರೋಪ ಮಾಡಿ ಶಿಕ್ಷಕಿ, ಮುಖ್ಯಶಿಕ್ಷಕ ಸೇರಿದಂತೆ ಇತರೆ ಶಿಕ್ಷಕರು ದುರ್ಗಾದೇವಿ ಮುಂದೆ ಆಣೆ ಮಾಡಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ ಪರಿಶೀಲನೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ – ಗುಬ್ಬಿ ಶಾಸಕ ಶ್ರೀನಿವಾಸ್ ವಿರುದ್ಧ ಎಫ್‍ಐಆರ್

ಈ ಸಂಬಂಧ ಶಾಲಾ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ ಹಾಗೂ ಮುಖ್ಯ ಶಿಕ್ಷಕ ಕೆ.ಹೆಚ್ ಮುಜಾವರ ವಿರುದ್ಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಚಿನ್ನದ ಅಂಗಡಿ ಮಾಲೀಕನ ಮೇಲೆ ಶೂಟೌಟ್ – ನಾಲ್ವರು ದರೋಡೆಕೋರರು ಅರೆಸ್ಟ್

Share This Article