ಮಂತ್ರಾಲಯದಲ್ಲಿ ರಾಯರ 429 ನೇ ಹುಟ್ಟುಹಬ್ಬದ ಸಂಭ್ರಮ – ಗುರುವೈಭವೋತ್ಸವಕ್ಕೆ ತೆರೆ

Public TV
1 Min Read
Raichur Mantralaya

ರಾಯಚೂರು: ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ (Raghavendra Swamy) 429 ನೇ ಹುಟ್ಟುಹಬ್ಬದ ಸಂಭ್ರಮ ಮಂತ್ರಾಲಯದಲ್ಲಿ ಮನೆಮಾಡಿದೆ. ಗುರುರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವವನ್ನು ಗುರುವೈಭವೋತ್ಸವವಾಗಿ ಮಂತ್ರಾಲಯದಲ್ಲಿ (Mantralaya) ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

Raichur Mantralaya 1

ರಾಯರ ಹುಟ್ಟುಹಬ್ಬ ಹಿನ್ನೆಲೆ ಬೆಳಗ್ಗೆಯಿಂದಲೇ ಮಠದಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತಿದೆ. ಮಹಾ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ತಿರುಪತಿ ತಿರುಮಲ ದೇವಾಲಯದಿಂದ ಮಠಕ್ಕೆ ಬಂದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಣೆ ಮಾಡಲಾಯಿತು. ಚೆನೈನ ಶ್ರೀರಾಘವೇಂದ್ರ ನಾದಹಾರ ಸೇವಾ ಟ್ರಸ್ಟ್‌ನ 150ಕ್ಕೂ ಹೆಚ್ಚು ಕಲಾವಿದರು ನಾದಹಾರ ಸಮರ್ಪಣ ಸೇವೆ ಸಲ್ಲಿಸಿದರು. ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ಜರುಗಿತು. ಇದನ್ನೂ ಓದಿ: ಕರ್ನಾಟಕದಲ್ಲಿದ್ದಾರೆ ಒಟ್ಟು 5.42 ಕೋಟಿ ಮತದಾರರು – ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರು?

Raichuir Mantralaya

ಚಿತ್ರನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ರಾಯರ ವರ್ಧಂತಿ ಉತ್ಸವದಲ್ಲಿ ಭಾಗವಹಿಸಿ ರಾಯರ ದರ್ಶನ ಪಡೆದರು. ದೇಶದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ರಾಯರ ಹುಟ್ಟುಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು. ಆರು ದಿನಗಳ ಗುರುವೈಭವೋತ್ಸವಕ್ಕೆ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇಂದು ರಾತ್ರಿ ವಿದ್ಯುಕ್ತ ತೆರೆ ಬೀಳಲಿದೆ. ಇದನ್ನೂ ಓದಿ: ಕರ್ನಾಟಕದ ಕಾಂಗ್ರೆಸ್‌ ಸರ್ಕಾರದಲ್ಲಿ ದುಡ್ಡಿಲ್ಲ, ಯೋಜನೆ ಹಣ ಕಡಿತವಾಗಿದೆ: ಮೋದಿ

Share This Article